Headlines

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ


ವಿಜಯನಗರ, ಫೆ.12: ವಿಶ್ವವಿಖ್ಯಾತ ಹಂಪಿ ಉತ್ಸವ 2026 (ಹಂಪಿ ಉತ್ಸವ 2026)ಕ್ಕೆ ದಿನಗಣನೆ ಆರಂಭವಾಗಿದ್ದು, ಫೆ.13ರಿಂದ 15ರವರೆಗೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಲಿದೆ. ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇನ್ನು ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು ಇರಲಿದೆ. ಮೈಸೂರು ದಸರಾದಲ್ಲಿ ಜನಮನ ಗೆದ್ದಿದ್ದ ಮಾದರಿಯಲ್ಲಿ, ಈ ಬಾರಿ ಆಕಾಶದಲ್ಲಿ 1,000 ಡ್ರೋನ್‌ಗಳು ಚಿತ್ತಾರ ಬಿಡಿಸಲಿವೆ. ಗಾಯತ್ರಿ ಪೀಠದ ವೇದಿಕೆಯ ಸಮೀಪದಲ್ಲಿ ಈ ಹೈಟೆಕ್ ಪ್ರದರ್ಶನ.

ಈ ಡ್ರೂನ್ ಮೂಲಕ ವಿಜಯನಗರ ಸಾಮ್ರಾಜ್ಯದ ಉದಯ, ಸೂರ್ಯ ಯುಗ ಮತ್ತು ಯುದ್ಧದ ಪ್ರಮುಖ ಕ್ಷಣಗಳನ್ನು ಚಿತ್ರಿಸುತ್ತದೆ. ಜೊತೆಗೆ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ, ಪ್ರಖ್ಯಾತ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ದೇವರಾಯರ ಚಿತ್ರಗಳು ಆಕಾಶದಲ್ಲಿ ಮೂಡಿಬರಲಿವೆ. ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ.

ಇದನ್ನೂ ಓದಿ: ಮೈಸೂರಿಗೆ ಹೋದ್ರೆ ‘ಮಧುವನ’ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಇನ್ನು ಈ ಬಾರಿಯ ಉತ್ಸವದಲ್ಲಿ ಹಂಪಿಯ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ನರಸಿಂಹ, ಕಡಲೆಕಾಳು ಉಗ್ರ ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠ್ಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿರುವ ಪ್ರಕಾರ, ಈ ವರ್ಷದ ಉತ್ಸವಕ್ಕೆ ದೇಶ-ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಈ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾರ್ಗದರ್ಶನವು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *