
ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ ಹನ್ಸಿಕಾ ಮೋಟ್ವಾನಿ (ಹನ್ಸಿಕಾ ಮೋಟ್ವಾನಿ) ಅವರು ಉದ್ಯಮಿ ಸೊಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದರು. ಮಾರ್ಚ್ 11ರಂದು ಕೋರ್ಟ್ ಇವರಿಗೆ ವಿಚ್ಛೇದನ ನೀಡಿದೆ. ಇಬ್ಬರು ಪರಸ್ಪರ ಸಮ್ಮತಿಸಿ ಬೇರೆ ಆಗಿದ್ದಾರೆ. ಹಾಗಾದರೆ ಡಿವೋರ್ಸ್ ಬಳಿಕ ಹನ್ಸಿಕಾ ಹೇಗಿದೆ? ಅದಕ್ಕೆ ಇಲ್ಲಿದೆ ಉತ್ತರ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಮನ ಸೆಳೆದಿದೆ.
ಹನ್ಸಿಕಾ ಅವರು ವಿಚ್ಛೇದನದ ನಂತರ ಇನ್ ಸ್ಟಾಗ್ರಾಮ್ ಅಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ. ‘ಚಾರ್ಡಿ ಕಲಾ ಯಾವಾಗಲೂ’ ಎಂದು ಅವರು ಬರೆದುಕೊಂಡಿದ್ದಾರೆ. ಇದು ಪಂಜಾಬಿ ನುಡಿಗಟ್ಟಾಗಿದೆ. ಕಷ್ಟದಲ್ಲೂ ಸಹ ಆಶಾವಾದ, ಉನ್ನತ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಈ ಸಾಲುಗಳು.
ಹನ್ಸಿಕಾ ಅವರು 2022ರ ಡಿಸೆಂಬರ್ 4 ರಂದು ವಿವಾಹ ಆದರು. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಈ ಮುದವೆ ನಡೆದ. ಈ ಮದುವೆಯ ಫೋಟೋಗಳು ವೈರಲ್ ಆದವು. ಹನ್ಸಿಕಾ ಆತ್ಮೀಯ ಗೆಳತಿಯ ಮಾಜಿ ಪತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ಅವರ ನಡುವೆ ಕಿತ್ತಾಟ ಪ್ರಾರಂಭವಾಯಿತು. ಅದಾದ ನಂತರ, ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನದ ನಂತರ ಹನ್ಸಿಕಾ ಸೊಹೈಲ್‌ನಿಂದ ಜೀವನಾಂಶವನ್ನು ಕೇಳಿಲ್ಲ.
ಹನ್ಸಿಕಾ ಮತ್ತು ಸೊಹೈಲ್ ಅವರ ಜೀವನದಲ್ಲಿ ಕೆಲವು ವ್ಯತ್ಯಾಸಗಳಿದ್ದವು.ಅವರ ಆಲೋಚನೆಗಳು, ಆದ್ಯತೆಗಳು ಮತ್ತು ಜೀವನಶೈಲಿಗಳು ಪರಸ್ಪರ ಬಹಳ ಭಿನ್ನವಾಗಿವೆ ಎಂದು ಅವರು ಕ್ರಮೇಣ ಅರಿತುಕೊಂಡರು.
ಇದನ್ನೂ ಓದಿ: ಬೆಸ್ಟ್ ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ; ನಟಿಯ ಸ್ಪಷ್ಟನೆ ಏನಾಗಿತ್ತು?
2024ರಿಂದಲೇ ಹನ್ಸಿಕಾ ಹಾಗೂ ಸೊಹೈಲ್ ಬೇರೆ ಆಗಿ ವಾಸವಾಗಿರಲು ಆರಂಭಿಸಿದರು. ಈ ಕಾರಣದಿಂದ ಮಾನಸಿಕವಾಗಿ ಅವರು ಸಿದ್ಧರಾಗಿದ್ದಾರೆ. ಈ ಕಾರಣದಿಂದ ಅವರಿಗೆ ವಿಚ್ಛೇದನ ಅಷ್ಟಾಗಿ ಪರಿಣಾಮ ಬೀರದೇ ಇರಬಹುದು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.