
ಪುನೀತ್ ರಾಜ್‌ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ (ಹನ್ಸಿಕಾ) ಈಗ ಸುದ್ದಿಯಲ್ಲಿದ್ದಾರೆ. ಅವರು ಉದ್ಯಮಿ ಸೊಹೈಲ್ ಕತುರಿಯಾ ಜತೆ ಡಿವೋರ್ಸ್ ಪಡೆದಿದ್ದಾರೆ. ಅವರಿಗೆ ಕೋರ್ಟ್ ಡಿವೋರ್ಸ್ ಒಪ್ಪಿಗೆ ಕೊಟ್ಟಿದೆ 2022ರಲ್ಲಿ ಸಾಕಷ್ಟು ಅದ್ದೂರಿಯಾಗಿ ಈ ಮದುವೆ ಕಾರ್ಯ ನಡೆದಿತ್ತು.
ಸೋಹೈಲ್ ಈ ಮೊದಲು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ ಹನ್ಸಿಕಾ ಟೀಕೆ ಮಾಡಿದರು. ‘ಲವ್ ಶಾದಿ ಡ್ರಾಮಾ’ದಲ್ಲಿ ಹನ್ಸಿಕಾ ಈ ಬಗ್ಗೆ ಮಾತನಾಡಿದ್ದರು.
‘ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಸೆಲೆಬ್ರಿಟಿ ಆಗಲಿಲ್ಲ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಪಬ್ಲಿಕ್ ಫಿಗರ್ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದೆ’ ಎಂದು ಹನ್ಸಿಕಾ ಹೇಳಿದ್ದಾರೆ.
ಆ ಮದುವೆಯ ವಿಡಿಯೋದಲ್ಲಿ ಹನ್ಸಿಕಾ ತನ್ನ ಸ್ನೇಹಿತೆಯೊಂದಿಗೆ ಕುಳಿತು 12 ವರ್ಷಗಳ ನಂತರ ಅದೇ ಸ್ನೇಹಿತೆಯ ಪತಿಯನ್ನು ಮದುವೆಯಾಗಿರುವುದು ನಂಬಲಸಾಧ್ಯ.
pic.twitter.com/yl9tFBjCcs https://t.co/jNdeTzWwY2
– ಸುಕ್ಕುಮಾರ್ಕ್ (@ ಕಟ್ಟುನಿಟ್ಟಾಗಿ ಕೇಳುವುದು) ನವೆಂಬರ್ 3, 2022
‘ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಹೊರಜಗತ್ತಿಗೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿ ಹೊರಬಿತ್ತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಿದರು. ಇದು ಸುಳ್ಳು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದರು ಈ ಊಹಾಪೋಹ ಪ್ರಾರಂಭವಾಯಿತು’ ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ಜೀವನಾಂಶ ಕೇಳದೇ ವಿಚ್ಛೇದನ ಪಡೆದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಹಾಗೂ ಸೋಹೈಲ್ ಅವರು ಈ ಮೊದಲು ಅದ್ದೂರಿಯಾಗಿ ವಿವಾಹ ಆದರು. ಇವರ ಮದುವೆಯ ವಿಡಿಯೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಮೊದಲು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವಿಡಿಯೋ ಕೂಡ ರಿಲೀಸ್ ಆಗಲಿದೆ ಎಂದು ನೆಟ್ಫ್ಲಿಕ್ಸ್ ಘೋಷಣೆ ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
