
ಬೆಂಗಳೂರು, ಮಾ.17: ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ (HRC) ಭಾರತಕ್ಕೆ ಗುಡ್‌ಬೈ ಹೇಳುತ್ತಿದೆ. ಭಾರತದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಒಪ್ಪಂದವನ್ನು ಇಂಟರ್ನ್ಯಾಷನಲ್ ಅಧಿಕೃತವಾಗಿ ಕೊನೆಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ತನ್ನದೇ ಆದ ರುಚಿಯನ್ನು ಹಾಗೂ ವೈಶಿಷ್ಟವನ್ನು ಹೊಂದಿದ್ದು, ಇದೀಗ ಬೆಂಗಳೂರಿಗರಿಗೆ ದೊಡ್ಡ ನಿರಾಸೆಯನ್ನು ಮೂಡಿಸಿದೆ. ಇನ್ನು ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿದ್ದ 10 ಕೆಫೆಗಳು ಇರುತ್ತವೆ.
ಅದರಲ್ಲಿ ಒಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವೈಟ್‌ಫೀಲ್ಡ್ ಸೆಂಟ್ ಮಾರ್ಕ್ಸ್ ರೋಡ್ (ಐಕಾನಿಕ್) ಚಂಡೀಗಢ, ಚೆನ್ನೈ, ಹೈದರಾಬಾದ್ (ಹೈಟೆಕ್ ಸಿಟಿ ಸೇರಿದಂತೆ), ಕೋಲ್ಕತ್ತಾ, ನವದೆಹಲಿ ಮತ್ತು ಪುಣೆಯಲ್ಲೂ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಆದರೆ ಗೋವಾದಲ್ಲಿರುವ ಹಾರ್ಡ್ ರಾಕ್ ಹೋಟೆಲ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಇದು ಪ್ರಸ್ತುತ ರದ್ದಾದ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ. ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಇನ್ನು ಕೆಲವರು ಕೆಫೆಯ ವೈಫಲ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ “ಹಾರ್ಡ್ ರಾಕ್ ಕೆಫೆ ಒಳ್ಳೆಯದಾಗಿತ್ತು, ಆದರೆ ಬೆಲೆ ಗಗನಕ್ಕೇರಿತ್ತು. “ಇದು ಕೇವಲ ತಿನ್ನುವ ಜಾಗವಾಗಿರಲಿಲ್ಲ, ಸಂಗೀತದ ಅನುಭವ ನೀಡುವ ತಾಣವಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿ ರಾಕ್ ಸಂಗೀತದ ಬದಲಿಗೆ ಜನರಿಕ್ ಪ್ಲೇಲಿಸ್ಟ್‌ಗಳು ಪ್ಲೇ ಆಗುತ್ತಿದ್ದವು” ಎಂದು ಸಂಗೀತ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುಗಾದಿಗೆ ಮೈಸೂರು, ಧರ್ಮಸ್ಥಳ, ಕುಕ್ಕೆ ಹೋಗುವವರಿಗೆ ಬಿಗ್ ಶಾಕ್ ನೀಡಿದ ಖಾಸಗಿ ಬಸ್: ಟಿಕೆಟ್ ದರ ಏರಿಕೆ ಪಟ್ಟಿ ಇಲ್ಲಿದೆ
“ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಕೆಫೆ ಒಂದು ಸಂಕೇತವಾಗಿತ್ತು. ಐಟಿ ಮಂದಿ ಈಗ ಕೇವಲ ಇಡಿಎಂ (EDM) ಮತ್ತು ಪಂಜಾಬಿ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ” ಎಂದು ಬೆಂಗಳೂರಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಇದು 1971 ರಲ್ಲಿ ಐಸಾಕ್ ಟಿಗ್ರೆಟ್ ಮತ್ತು ಪೀಟರ್ ಮಾರ್ಟನ್ ಅವರಿಂದ ಲಂಡನ್‌ನಲ್ಲಿ ಪ್ರಾರಂಭವಾಯಿತು. ಅಮೇರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತದ ಸ್ಮರಣಿಕೆಗಳು ಸ್ಥಳೀಯ ವಿಶೇಷವಾಗಿತ್ತು. ಇಂದು 70 ಕ್ಕೂ ಹೆಚ್ಚು ದೇಶಗಳಲ್ಲಿ ಹೋಟೆಲ್, ಕ್ಯಾಸಿನೊ ಮತ್ತು ಮ್ಯೂಸಿಯಂಗಳನ್ನು ಈ ಸಂಸ್ಥೆ ಹೊಂದಿದೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ