
ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬೆಳವಣಿಗೆಗೆ ಹಾರ್ದಿಕ್ ಅವರ ಹೊಸ ಗರ್ಲ್ ಫ್ರೆಂಡ್ ಮಾಡೆಲ್ ಮಹಿಕಾ ಶರ್ಮಾ ಕಾರಣ ಎನ್ನುತ್ತಿದ್ದಾರೆ. ಭಾರತ ತಂಡವು 2026ರ ಟಿ20 ಗೆದ್ದಾಗ ಅಹಮದಾಬಾದ್‌ನಲ್ಲಿ ನಡೆದ ಭರ್ಜರಿ ಸಂಭ್ರಮಾಚರಣೆಯಲ್ಲಿ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಅತ್ತ ಹಾರ್ದಿಕ್ ಪಾಂಡ್ಯ ಅವರ ಸಾಧನೆಯನ್ನು ಅಭಿನಂದಿಸಿ ಕೃನಾಲ್ ಸಹ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿಲ್ಲ. ಇವೆಲ್ಲವೂ ಇದೀಗ ಅಣ್ಣ-ತಮ್ಮ ದೂರವಾಗಿದ್ದಾರೆ ಎಂಬ ವದಂತಿಗೆ ವದಂತಿಗೆ ಪುಷ್ಟಿ ನೀಡಿದ್ದಾರೆ.
ಮಹಿಕಾ ಶರ್ಮಾ ಕಾರಣ?
ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಮಹಿಕಾ ಹಾರ್ದಿಕ್ ಲೈಫ್‌ಗೆ ಎಂಟ್ರಿ ಕೊಟ್ಟ ಬಳಿಕವಷ್ಟೇ ಅಣ್ತಮ್ಮದಿರುವ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಪಾಂಡ್ಯ ಬ್ರದರ್ಸ್ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಮಾಜಿ ಪತ್ನಿ ನತಾಶಾ ಅವರಿಂದ ದೂರಾದ ನಂತರ, ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಹಾರ್ದಿಕ್ ಈ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಪಂದ್ಯ ಪಂದ್ಯಗಳ ಸಮಯದಲ್ಲಿ ಮಹಿಕಾ ಮೈದಾನದಲ್ಲಿ ಹಾರ್ದಿಕ್ ಅವರಿಗೆ ಬೆಂಬಲವಾಗಿ ನಿಂತಿದ್ದರು.
ಆಪ್ತ ಮೂಲಗಳ ಪ್ರಕಾರ, ಹಾರ್ದಿಕ್ ಅವರ ಈ ಹೊಸ ಜೀವನದ ಆಯ್ಕೆಯು ಕುಟುಂಬದ ಸದಸ್ಯರಲ್ಲಿ, ವಿಶೇಷವಾಗಿ ಕೃನಾಲ್ ಮತ್ತು ಪಂಖುರಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡುವ ಸಾಧ್ಯತೆಯಿದೆ.
ಅತ್ತ ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಚ್ ಮತ್ತು ಅವರ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿಗಳು ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಇರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: IPL 2026: RCB ತಂಡದ ಮೊದಲ ಎದುರಾಳಿ ಫಿಕ್ಸ್?
ಇದಾಗ್ಯೂ ಅಣ್ಣನ ನಡುವಿನ ಸಂಬಂಧದ ಬಗ್ಗೆ ಹಾರ್ದಿಕ್ ಇದುವರೆಗೆ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಪಾಂಡ್ಯ ಬ್ರದರ್ಸ್ ದೂರವಾಗಿರುವುದು ಖಚಿತ. ಏಕೆಂದರೆ ಜೀವದಂತ ತಮ್ಮ ಎರಡನೇ ಬಾರಿ ಟಿ20 ಗೆದ್ದರೂ ಕೃನಾಲ್ ಸೋಷಿಯಲ್ ಮೀಡಿಯಾ ಮೂಲಕ ಒಂದೇ ಒಂದು ಪೋಸ್ಟ್ ಹಂಚಿಕೊಂಡಿಲ್ಲ ಎಂಬುದೇ ಸಾಕ್ಷಿ.