ಈ ಪೂಜೆ ನಿನಗಾಗಿ ಗೆಳೆಯ: ಸಿದ್ಧಿವಿನಾಯಕನ ಮುಂದೆ ಒಂದೇ ಶಾಲು ಹಂಚಿಕೊಂಡು ಪಾಂಡ್ಯ-ಮಾಹಿಕಾ

ಈ ಪೂಜೆ ನಿನಗಾಗಿ ಗೆಳೆಯ: ಸಿದ್ಧಿವಿನಾಯಕನ ಮುಂದೆ ಒಂದೇ ಶಾಲು ಹಂಚಿಕೊಂಡು ಪಾಂಡ್ಯ-ಮಾಹಿಕಾ


ಈ ಪೂಜೆ ನಿನಗಾಗಿ ಗೆಳೆಯ: ಸಿದ್ಧಿವಿನಾಯಕನ ಮುಂದೆ ಒಂದೇ ಶಾಲು ಹಂಚಿಕೊಂಡು ಪಾಂಡ್ಯ-ಮಾಹಿಕಾ

ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ, ನಟಿ ಮಹಿಕಾ ಶರ್ಮಾ ಅವರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಮತ್ತು ಮಾಹಿಕಾ ಒಂದೇ ಶಾಲೆಯನ್ನು ಹಂಚಿಕೊಂಡಿರುವುದು ನೆರೆದಿದ್ದವರ ಗಮನ ಸೆಳೆಯಿತು. ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಈ ಜೋಡಿಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

ಹಾರ್ದಿಕ್ ಸಾಂಪ್ರದಾಯಿಕ ಕುರ್ತಾ ಧರಿಸಿದ್ದರೆ, ಮಹಿಕಾ ಶರ್ಮಾ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರು. ಭಕ್ತರೊಂದಿಗೆ ಹಾರ್ದಿಕ್ ಹಸ್ತಲಾಘವ ಮಾಡಿ ಆತ್ಮೀಯವಾಗಿ ತಿಳಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ಮಹಿಕಾ ಡೇಟಿಂಗ್ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಾಹಿಕಾ ಕೈಬೆರಳಲ್ಲಿ ವಜ್ರದ ಉಂಗುರದಿಂದ ಇವರಿಬ್ಬರ ನಿಶ್ಚಿತಾರ್ಥವಾಗಿದೆ ಎಂಬ ಚರ್ಚೆಯೂ ನಡೆಯಿತು. ಆದರೆ ಮಹಿಕಾ ಅದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ನಿನ್ನದು ದೊಡ್ಡ ಮನಸ್ಸು ಕಣಯ್ಯ: ಕೊಟ್ಟ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ

ಇಲ್ಲಿದೆ ನೋಡಿ ಕಥೆ:

ವಿಶೇಷವೆಂದರೆ, ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ 34ನೇ ಹುಟ್ಟುಹಬ್ಬದಂದು ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಮಾಹಿಕಾ ಶರ್ಮಾ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಮಾಡೆಲ್ ಮಾಹಿಕಾ ಅವರು ಅಸ್ಸಾನ್ನವರು. ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಪ್ರಾರಂಭಿಸಿದರು ಮತ್ತು ‘ಮಿಸ್ ಟೀನ್ ನಾರ್ತ್ ಈಸ್ಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *