
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ (ಹಾರ್ದಿಕ್ ಪಾಂಡ್ಯ) ಕಾರುಗಳ ಮೇಲಿನ ಮೋಹ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. ಪಾಂಡ್ಯ ಗ್ಯಾರೆಜ್‌ನಲ್ಲಿ ಹಲವು ದುಬಾರಿ ಕಾರುಗಳ ಸಂಗ್ರಹವಿದೆ. ಇದೀಗ ಅವುಗಳ ಪಟ್ಟಿಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಕೇವಲ ಆರು ತಿಂಗಳಿನಲ್ಲಿ ನಾಲ್ಕನೇ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಬಾರಿ ಇತ್ತೀಚೆಗೆ ಬಿಡುಗಡೆಯಾದ ಕಾರನ್ನು ಖರೀದಿಸಿರುವ ಹಾರ್ದಿಕ್, ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಕಾರಿನ ಮುಂದೆ ನಿಂತ ಫೋಟೋ ಕ್ಲಿಕ್ಕಿಸಿದ್ದಾರೆ.
ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಹೊಸ ಜೆನರೇಷನ್‌ನ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ಈ ಕಾ ಖರೀದಿಸಿದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಐಷಾರಾಮಿ MPV (ಬಹುಪಯೋಗಿ ವಾಹನ) ಕಾರಿಗೆನ ಬೆಲೆ ಸುಮಾರು ₹1.4 ಕೋಟಿ ರೂ. ಎನ್ನಲಾಗುತ್ತಿದೆ. ಕುಟುಂಬ ಪ್ರಯಾಣ ಮತ್ತು ಪ್ರೀತಿ ಐಷಾರಾಮಿಗೆ ಹೆಸರುವಾಸಿಯಾದ ಇದು ವಿಶಾಲವಾದ ಒಳಾಂಗಣ, ಉನ್ನತ ಮಟ್ಟದ ವೈಶಿಷ್ಟ್ಯಗಳು ಮತ್ತು ಸಾಟಿಯಿಲ್ಲದ ಸೌಕರ್ಯವನ್ನು ಹೊಂದಿದೆ.
ಹಾರ್ದಿಕ್ ಪಾಂಡ್ಯ ತನ್ನ ಗೆಳತಿಗೆ 1.7 ಕೋಟಿ ಕಾರ್ ಗಿಫ್ಟ್
– ಹಾರ್ದಿಕ್ ಪಾಂಡ್ಯ ಅವರು ಇಂದು ತಮ್ಮ ಗೆಳತಿ ಮಹಿಕಾ ಶರ್ಮಾ ಅವರಿಗೆ ಭಾರತದ ಮೊದಲ Mercedes-Benz V-Class ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಮತ್ತು ಅದರ ಬೆಲೆ ಸುಮಾರು ₹1.7 ಕೋಟಿ.
pic.twitter.com/Cplo3im3iO
— ಸ್ಯಾಮ್ (@Cricsam01) ಮಾರ್ಚ್ 29, 2026
ಪಾಂಡ್ಯ ಬಳಿ ಇರುವ ಐಷಾರಾಮಿ ಕಾರುಗಳು
ಹಾರ್ದಿಕ್ ಪಾಂಡ್ಯ ಅವರ ಗ್ಯಾರೇಜ್ ಹಲವಾರು ದುಬಾರಿ ಕಾರುಗಳಿಂದ ತುಂಬಿದೆ. ಪಾಂಡ್ಯ ಇತ್ತೀಚೆಗೆ ಸುಮಾರು ₹4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿ, ಅವರ ಮಗನಿಗೆ ಉಡುಗೊರೆಯಾಗಿ ನೀಡಿದ್ದರು. ಆ ಬಳಿಕ ಸುಮಾರು 12 ಕೋಟಿ ರೂ. ಮೌಲ್ಯದ ಫೆರಾರಿ 12-ಸಿಲಿಂಡರ್ ಕಾರನ್ನು ಪಾಂಡ್ಯ ಇತ್ತೀಚೆಗೆ ಖರೀದಿಸಿದ್ದರು. ಅದಕ್ಕೆ 4.5 ಕೋಟಿ ರೂ. ಮೌಲ್ಯದ ಲಂಬೋರ್ಘಿನಿ ಉರುಸ್ ಕಾರನ್ನು ಸಹ ಖರೀದಿಸಿದ್ದರು.
ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ
ಐಪಿಎಲ್‌ನಲ್ಲಿ ಗೆಲುವಿನ ಆರಂಭ
ಇನ್ನು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಪಂದ್ಯಾವಳಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಿದ ಮುಂಬೈ, ಕೆಕೆಆರ್ 221 ರನ್ ಗಳ ಗುರಿಯನ್ನು ಕೊನೆಯ ಪಂದ್ಯದಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ 2013 ರ ನಂತರ ಐಪಿಎಲ್ ನ ಮೊದಲ ಸಾಧನೆಯನ್ನು ಮುಂಬೈ ತಂಡ ಮಾಡಿದೆ. ಹಾಗೆಯೇ 221 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ದಾಖಲೆ ಕೂಡ ಮುಂಬೈ ಪಾಲಾಗಿದೆ.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಾರ್ದಿಕ್ ಪಾಂಡ್ಯ ತನ್ನ ಗೆಳತಿಗೆ 1.7 ಕೋಟಿ ಕಾರ್ ಗಿಫ್ಟ್