ಮುಂಬೈ ಇಂಡಿಯನ್ಸ್ ತಂಡ ಸತತವಾಗಿ ಸೋಲುತ್ತಿರುವುದು ಒಂದು ಕಡೆಯಾದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ತಂಡದವರಿಗೆ ಅಸಮಾಧಾನ ಮೂಡಿರುವುದು ಮತ್ತೊಂದು ಕಡೆ. ಅದ್ಭುತ ಫೀಲ್ಡರ್ ಎನಿಸಿಕೊಂಡಿರೋ ಸೂರ್ಯ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಿಸಲಾಗಿದೆ. ಈ ಬಗ್ಗೆ ಅವರಿಗೆ ಅಸಮಧಾನ ಇದೆ. ಇನ್ನು, ಬ್ಯಾಟರ್ ಆಗಿ ಅವರಿಂದ ಉತ್ತಮ ಆಟ ಬರುತ್ತಿಲ್ಲ. ಇತ್ತ ಬಾಲರ್‌ಗಳಿಗೆ ಫೀಲ್ ಸೆಟ್ ಮಾಡುವ ಅವಕಾಶವನ್ನು ಹಾರ್ದಿಕ್ ನೀಡುತ್ತಿಲ್ಲ. ಈ ಬಗ್ಗೆ ಬೂಮ್ರಾ ಓಪನ್ ಆಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡ ಸತತ ನಾಲ್ಕನೇ ಸೋಲನ್ನು ಕಂಡಿದೆ. ಮುಂಬೈ ನೀಡಿದ 196 ರನ್‌ಗಳ ಟಾರ್ಗೆಟ್‌ನ ಪಂಜಾಬ್ ಕೇವಲ 16. 3 ಪಂದ್ಯಗಳಲ್ಲಿ ತಲುಪಿದೆ. ಈ ಮೂಲಕ ಏಳು ವಿಜಯಗಳ ಗೆಲುವು ಕಂಡಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಹುಳುಕು ಎದ್ದು ಕಾಣಿಸುತ್ತಿದೆ. ಬುಮ್ರಾ ಅವರು ಹಾರ್ದಿಕ್ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.
ಬೂಮ್ರಾ ತಮ್ಮ ಬಾಲಿಂಗ್‌ಗೆ ಅನುಗುಣವಾಗಿ ಫೀಲ್ಡಿಂಗ್ ಸೆಟ್ ಅನ್ನು ಹೊಂದಿದ್ದರು. ಆದರೆ, ಅದನ್ನು ಹಾರ್ದಿಕ್ ಬದಲಿಸಿದರು. ಆರಂಭದಲ್ಲಿ ಬೂಮ್ರಾ ವಾದಕ್ಕೆ ಇಳಿದರು. ಕೊನೆಗೆ ವಾದ ಮಾಡಿ ಪ್ರಯೋಜನ ಇಲ್ಲ ಎಂಬುದು ನಿಮಗೆ ಗೊತ್ತಾಗಿದೆ. ಬೂಮ್ರಾ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ. ಕೂಲ್ ಆಗಿ ಬಾಳ್ ಹಾಕುತ್ತಾರೆ. ಆದಾಗ್ಯೂ ಅವರ ಮುಖದಲ್ಲಿ ಅಸಮಾಧಾನ ಇರೋದು ಕಂಡುಬಂತು. ಕೊನೆಗೆ ವಾದ ಮಾಡುವುದನ್ನು ನಿಲ್ಲಿಸಿದರು. ಅಲ್ಲಿಗೆ ಕಿತ್ತಾಟ ಕೊನೆ ಆಯಿತು.
🚨 ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರಿತ್ ಬುಮ್ರಾ ನಡುವಿನ ಬಿಗ್ ಫೈಟ್ 🚨
– ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದಾಗ ಮತ್ತು ಪ್ರಭಾಸಿಮ್ರಾನ್ ಸಿಂಗ್ ಶಾಟ್ ಆಡಿದಾಗ, ಕ್ಯಾಚ್ ಜಸ್ಪ್ರೀತ್ ಬುಮ್ರಾ ಅವರತ್ತ ಹೋಯಿತು. ಆ ಕ್ಷಣದಲ್ಲಿ ಬುಮ್ರಾ ಸುಲಭ ಕ್ಯಾಚ್ ಕೈಬಿಟ್ಟರು.
– ಅದರ ನಂತರ, ಹಾರ್ದಿಕ್ ಪಾಂಡ್ಯ ಹತಾಶೆಯಿಂದ ವಿಷಯಗಳನ್ನು ಹೇಳಲು ಪ್ರಾರಂಭಿಸಿದರು,… pic.twitter.com/RvKoIkgZTT
— lndian Sports Netwrk (@IS_Netwrk29) ಏಪ್ರಿಲ್ 17, 2026
ಪಂದ್ಯ ಸೋತ ಬಳಿಕ ಮಾತನಾಡಿದ ಹಾರ್ದಿಕ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಮಯದಲ್ಲಿ ನಾನು ಹೇಳಲು ಏನೂ ಉಳಿದಿಲ್ಲ. ನಮ್ಮಲ್ಲಿ ಏನು ಕೊರತೆಯಿದೆ ಎಂದು ನೋಡಬೇಕು. ನಾವು ಕುಳಿತು ಆ ಬಗ್ಗೆ ಯೋಚಿಸುತ್ತೇವೆ. ನಾವು ಮುಂದೆ ಏನು ಮಾಡಬಹುದು ಎಂದು ನೋಡುತ್ತೇವೆ’ ಎಂದು ಪಂದ್ಯದ ನಂತರ ಹೇಳಿದರು.
ಇದನ್ನೂ ಓದಿ: ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ
ಹಾರ್ದಿಕ್ ಪಾಂಡ್ಯ ವರ್ತನೆ ಬಗ್ಗೆ ತಂಡದಲ್ಲೇ ಅಸಮಾಧಾನ ಇದೆ. ಇದು ಹೀಗೆಯೇ ಮುಂದುವರಿದರೆ ಆತನ ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿಸಬಹುದು. ಮೇಜರ್ ಆಪರೇಷನ್ ಆಗದೇ ಇದ್ದರೆ ಸೋಲು ಹೀಗೆಯೇ ಮುಂದುವರಿಯಲಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.