ದಾವಣಗೆರೆ, (ಏಪ್ರಿಲ್ 17): ಹರಿಹರ ಪಂಚಮಸಾಲಿ ಗುರುಪೀಠದಿಂದ (ಹರಿಹರ ಪಂಚಮಸಾಲಿ ಪೇಠ) ವಚನಾನಂದ ಶ್ರೀಗಳನ್ನು (ವಚನಾನಂದ ಸ್ವಾಮೀಜಿ) ಉಚ್ಛಾಟನೆ ಮಾಡಲಾಗಿದೆ. ಆದರೂ ಸಹ ಯಾವುದೇ ಕಾರಣಕ್ಕೂ ಮಠ ಬಿಟ್ಟು ಹೋಗಲು ಎಂದು ಪಟ್ಟು ಹಿಡಿದಿರುವ ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳ ಕಲ್ಯಾಣ ಸಮಿತಿಗೆ ದೂರು ನೀಡಲಾಗಿದೆ. ಇದರಿಂದ ಸ್ವಾಮೀಜಿಗೆ ಸಂಕಷ್ಟ ಎದುರಾಗಿದೆ. ಇನ್ನು ವಿದ್ಯಾರ್ಥಿಗಳ ದೂರು ಬೆನ್ನಲ್ಲೇ ಮಕ್ಕಳ ಕಲ್ಯಾಣ ಸಮಿತಿಯವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಮಠಕ್ಕೆ ಭೇಟಿ ನೀಡಿದ್ದು, ತನಿಖೆ.
ಮಕ್ಕಳಿಂದ ಮಾದಕ ವ್ಯಸನ ಮಾಡಿಕೊಳ್ಳುತ್ತಿದ್ದ.’ಮಕ್ಕಳಿಗೆ ಈ ಹಿಂಸೆ ಎಂಬ ಆರೋಪಿ ಪ್ರಕಾಶ, ಸಂಬಂಧ ಮಠಕ್ಕೆ ಮಕ್ಕಳ ಕಲ್ಯಾಣ ಸಮತಿ ಸ್ವಾಮೀಜಿ ಸ್ವಾಮೀಜಿ ಪರ ನ್ಯಾಯವಾದಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಚಮಸಾಲಿ ಗುರುಪೀಠದ ದಾಸೋಹ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯಾಲಯವಾದಿ ಪ್ರಕಾಶ ಪಾಟೀಲ್, ಇದೊಂದು ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ. ಅವರ ವ್ಯಕ್ತಿತ್ವದ ಕಳಂಕ ತರಲು ಮಾಡಿದ ತಂತ್ರ. ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಕೊಡಿ ಚಳವಳಿ ನಡೆಯಿತು. ಇದೇ ಕಾರಣಕ್ಕೆ ಸ್ವಾಮೀಜಿ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಸ್ವಾಮೀಜಿಗಳ ವಿರುದ್ಧ ದೂರು ನೀಡುವಂತೆ ಮಾಡಿರುವ ಸಾದ್ಯತೆ ಕೂಡ ಇದೆ. ಇದರಲ್ಲಿ ಸ್ವಾಮೀಜಿ ತಪ್ಪು ಇದ್ರು ನಾವು ಒಪ್ಪುತ್ತೇವೆ. ಆದರೆ ಲೆಕ್ಕ ಕೊಡಿ ಎಂದು ಕೇಳಿದ್ರೆ ಈ ರೀತಿ ಸಾಮೀಜಿ ವಿರುದ್ಧ ಷಡ್ಯಂತ್ರ ಸರಿಯಲ್ಲ ಎಂದು ಹೇಳಿದ್ದಾರೆ.
ಧ್ಯಾನದ ಮೊರೆ ಹೋದ ವಚನಾನಂದ ಸ್ವಾಮೀಜಿ
ಟ್ರಿಸ್ಟಿಗಳು ಸೇರಿ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿದ್ದಾರೆ. ಆದರೆ, ವಚನಾನಂದ ಸ್ವಾಮೀಜಿ ಮಾತ್ರ ಮಠ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದುಕೊಂಡು ಕುಳಿತಿದ್ದಾರೆ. ಇದರಿಂದ ಪಂಚಮಸಾಲಿ ಯುವ ಘಟಕ ಸಹ ಸುದ್ದಿಗೋಷ್ಠಿ ನಡೆಸಿ, ಮಠ ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ಇದರ ಮಧ್ಯೆ ಇದೀಗ ಮಕ್ಕಳ ಕಲ್ಯಾಣ ಸಮಿತಿ ಸಹ ಮಠಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ. ಈ ಎಲ್ಲಾ ಬೆಳವಣಿಗಳ ನಡುವೆ ವಚನಾನಂದ ಸ್ವಾಮೀಜಿ ಮಾತ್ರ ಧ್ಯಾನದ ಮೊರೆ ಹೋಗಿದ್ದಾರೆ.
ವಚನಾನಂದ ಸ್ವಾಮೀಜಿ ಹೇಳಿದ್ದೇನು?
ಆಗಿರುವುದು ಒಳ್ಳೆಯದೇ ಆಗುತ್ತಿರುವುದು ಒಳ್ಳೆಯದೇ. ನಾವು ಸಾಧಕರು. ನಾವು ದೇವರಲ್ಲ ದೇವರ ದಾರಿಯಲ್ಲಿ ನಡೆಯುವವರು. ಸಮಯ ಬಂದಾಗ ಎಲ್ಲ ಉತ್ತರಿಸುವೆ. ಈಗ ಮಕ್ಕಳ ಕಲ್ಯಾಣ ಸಮಿತಿ ಬಂದಿತ್ತು. ಅದು ಸೂಕ್ಷ್ಮ ವಿಚಾರ. ಅದರ ಬಗ್ಗೆ ವಿವರ ನೀಡಲ್ಲ.
ಇನ್ನು ಜಯಮೃತ್ಯುಂಜಯ ಸ್ವಾಮೀಜಿ ಅವರನ್ನ ಹರಿಹರ ಗುರುಪೀಠಕ್ಕೆ ತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವಚನಾನಂದಶ್ರೀ, ನಾವೆಲ್ಲಾ ಸ್ವಾಮೀಜಿಗಳು ಒಮ್ಮೆ. ನಾನು ಸನ್ಯಾಸ ಸ್ವೀಕರಿಸಿದ ಬಳಿಕ ಅವರು ಸ್ವೀಕರಿಸಿದ್ದಾರೆ. ಅವರು 18 ವರ್ಷದಿಂದ ಪಂಚಮಸಾಲಿ ಕೂಡಲ ಸಂಗಮ ಗುರುಪೀಠದಲ್ಲಿದ್ದಾರೆ.’ ನಾವು ಸ್ವಾಮೀಜಿಗಳೆಲ್ಲ ಹೇಳಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.