ಎಫ್ಡಿ ಮೇಲೆ ಸಾಲ‌ ಕೊಡಿಸೋದಾಗಿ ಹೇಳಿ ವಂಚನೆ: ಕೋಟಿ ಕೋಟಿ ಹಣ ಸಂಗ್ರಹಿಸಿ ಬ್ಯಾಂಕ್​​ ಮ್ಯಾನೇಜರ್​​ ಎಸ್ಕೇಪ್​!

ಎಫ್ಡಿ ಮೇಲೆ ಸಾಲ‌ ಕೊಡಿಸೋದಾಗಿ ಹೇಳಿ ವಂಚನೆ: ಕೋಟಿ ಕೋಟಿ ಹಣ ಸಂಗ್ರಹಿಸಿ ಬ್ಯಾಂಕ್​​ ಮ್ಯಾನೇಜರ್​​ ಎಸ್ಕೇಪ್​!


ಆರೋಪಿ ಹೆಚ್.ಎಸ್.ಪೂಜಾಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಹಾಸನ, ಫೆಬ್ರವರಿ 28: ನಿಗದಿತ ಠೇವಣಿ ಮೇಲೆ ಸಾಲ ಕೊಡಿಸುವುದಾಗಿ ಹೇಳಿ 50ಕ್ಕೂ ಅಧಿಕ ಗ್ರಾಹಕರಿಂದ 3 ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿ ವಂಚಿಸಿರುವ ಆರೋಪ ಹಾಸನಖಾಸಗಿ ಬ್ಯಾಂಕ್ ವಿರುದ್ಧ ಕೇಳಿಬಂದಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಬ್ಯಾಂಕ್ ಮ್ಯಾನೇಜರ್ ಹೆಚ್.ಎಸ್.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ದೂರು ನೀಡಲಾಗಿದೆ. ಎಫ್‌ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್ ನಾಪತ್ತೆಯಾಗಿರೋದಾಗಿ ಆರೋಪಿಸಲಾಗಿದೆ.

‘ಎಫ್‌ಡಿ ಮಾಡಿದ ಹಣಕ್ಕೆ ದಾಖಲೆ ನೀಡಿಲ್ಲ’

ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡುವ ಆಮಿಷವನ್ನು ಗ್ರಾಹಕ ಬ್ಯಾಂಕ್ ಮ್ಯಾನೇಜರ್ ಹೆಚ್.ಎಸ್.ಪೂಜಾ ಒಡ್ಡಿದ್ದರು. ಜೊತೆಗೆ 25 ಲಕ್ಷ ಲೋನ್‌ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹಿಸಲಾಗಿದೆ. ಇವರ ಮಾತು ನಂಬಿ ಬ್ಯಾಂಕ್‌ನಲ್ಲಿ ಜನ ಹಣ ಇಟ್ಟಿದ್ದು, ಎಫ್‌ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್ ನೀಡಿದ ಆರೋಪವೂ ಕೇಳಿಬಂದಿದೆ. ಗ್ರಾಹಕರು ಹಣ ವಾಪಸ್ ಕೇಳಿದ್ದಕ್ಕೆ ಕೆಲ ಚೆಕ್ ನೀಡಿ ಪೂಜಾ ಎಸ್ಕೇಪ್ ಆಗಿದ್ದಾರೆ.ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ಘಟನೆ ನಡೆದಿದೆ.

ಇದನ್ನೂ ಓದಿ: ಬಲವಂತವಾಗಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕ್; ಹನಿಟ್ರ್ಯಾಪ್ ಮಾಡಿಸಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಬಂಧನ

ವಿದೇಶಕ್ಕೆ ಪರಾರಿಯಾಗಲು ಆರೋಪಿ ಯತ್ನ?

ಇನ್ನು ಹಣ ಸಂಗ್ರಹದ ಬಳಿಕ ಆರೋಪಿ ಹೆಚ್.ಎಸ್.ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ. ದುಬೈಗೆ ಹಾರಲು ಅವರು ವಿಮಾನ ನಿಲ್ದಾಣದಲ್ಲಿ ಇರುವ ಮಾಹಿತಿ ಇದೆ, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು. ಅವರ ಪಾಸ್‌ಪೋರ್ಟ್ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಸಾಲ ಕೊಡಿಸುವ ಆಮಿಷವೊಡ್ಡಿ ಗ್ರಾಹಕರನ್ನು ವಂಚಿಸಿರುವ ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಗ್ರಾಹಕರು ಎಸ್ಪಿಗೆ ನೀಡಿರುವ ದೂರಿನಲ್ಲಿ ದಾಖಲಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:47 am, ಶನಿ, 28 ಫೆಬ್ರವರಿ 26



Source link

Leave a Reply

Your email address will not be published. Required fields are marked *