ಹಾಸನ, ಮಾರ್ಚ್ 05: ಮನೆ ಮೇಲೆ ದಾಳಿ ನಡೆಸಲು ಬಂದಿದ್ದ ಲೋಕಾಯುಕ್ತ ಸಿಬ್ಬಂದಿಯನ್ನೇ ಅಧಿಕಾರಿಯೋರ್ವ ನಾಲ್ಕು ಗಂಟೆ ಕಾಯಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಮಹಾನಗರಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರ ರಕ್ಷಣಾಪುರಂ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ದೂರು ದಾಖಲಿಸಿಕೊಂಡು, ನ್ಯಾಯಾಲಯದಿಂದ ಸರ್ ವಾರಂಟ್ ಪಡೆದು ಬೆಳಗ್ಗೆ 5:30ಕ್ಕೆ ಲೋಕಾಯುಕ್ತ ತಂಡ ಆಗಮಿಸಿತ್ತು. ಆದರೆ ಸತ್ಯನಾರಾಯಣ ಅವರು ಬಾಗಿಲು ತೆರೆಯಲು ನಿರಾಕರಿಸಿದರು ಸುಮಾರು ಗಂಟೆಗಳ ಕಾಲ ಹೈರಾಮಾ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಮತ್ತು ಇನ್ಸ್ ಪೆಕ್ಟರ್ ಶಿಲ್ಪಾ ನೇತೃತ್ವದ ತಂಡ ಮನೆ ಮುಂದೆ ಕಾದು ಕುಳಿತಿದ್ದು, ಅಧಿಕಾರಿಗಳು ನಿರಂತರವಾಗಿ ಮನವಿ ಮಾಡಿದರೂ ಸತ್ಯನಾರಾಯಣ ಮನೆ ಬಾಗಿಲು ತೆರೆಯಲಿಲ್ಲ. ಅಧಿಕಾರಿಗಳನ್ನು ದೀರ್ಘ ಕಾಲದ ನಂತರ ಅಂತಿಮವಾಗಿ ಮನೆಯ ಡೋರ್ ಓಪನ್ ಮಾಡಲಾಗಿತ್ತು, ಮನೆಯೊಳಗೆ ಎಂಟ್ರಿ ಕೊಟ್ಟಿರುವ ಲೋಕಾಯುಕ್ತ ಟೀಂ ಆಸ್ತಿ ದಾಖಲೆಗಳು, ಆದಾಯ ಮತ್ತು ಸಂಪಾದಿಸಿದ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.