Headlines

ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?

ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?


ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?

ಹಾಸನ, (ಏಪ್ರಿಲ್ 13): 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ (ಮಹಿಳೆ) ತನ್ನ ಗಂಡ ಹಾಗೂ ಮಗಳನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿರೋ ಘಟನೆ ಹಾಸನ (ಹಾಸನ) ಗೆರೂರು ಪೊಲೀಸ್ ಠಾಣಾ (ಪೊಲೀಸ್ ಠಾಣೆ) ನಡೆದಿದೆ. ಓಡಿ ಹೋಗಿದ್ದಷ್ಟೇ ಅಲ್ಲ ಕಾರಿನಲ್ಲಿ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದು, ಸದ್ಯ ಈ ವಿಡಿಯೋ (ವಿಡಿಯೋ) ಇದೀಗ ವೈರಲ್ ಆಗಿದೆ. ಆದರೆ, ಈ ಪ್ರಕರಣ ಹೊಸ ತಿರುವು ಸೇರಿದೆ. ತಾಳಿ ಕಟ್ಟಿಸಿಕೊಂಡ ಬಳಿಕ ಪತಿ ಪ್ರಕಾಶ್ ಫೋನ್‌ನಲ್ಲಿ ಮಾತನಾಡುತ್ತಿದ್ದ ಹರ್ಷಿತಾ, ತಪ್ಪಾಯ್ತು ತನ್ನ ಕರೆದುಕೊಂಡು ಹೋಗಿ ಎಂದು ಬೇಡಿಕೊಂಡಳು. ಆದರೆ, ಇದಕ್ಕೆ ಪ್ರಕಾಶ್ ಒಪ್ಪದಿದ್ದಾಗ ಹರ್ಷಿತಾ ಸಹ ರೊಚ್ಚಿಗೆದ್ದಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.

ಪತಿ ಪ್ರಕಾಶ್ ಹೇಳಿದ್ದೇನು?

ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಬಗ್ಗೆ ಪತಿ ಪ್ರಕಾಶ್ ಟಿವಿ9 ಜೊತೆ ಮಾತನಾಡಿದ್ದು, 15 ಹಸು ಇತ್ತು ನಿತ್ಯ 100 ಲೀಟರ್ ಹಾಲು ಹಾಕ್ತಿದ್ದೆ. ಟ್ರ್ಯಾಕ್ ಆಸ್ತಿ ಮನೆ ಎಲ್ಲವೂ ಇತ್ತು. ತಿಂಗಳಿಗೆ ಕನಿಷ್ಠ 80 ಸಾವಿರ ರೂಪಾಯಿ ಆದಾಯ ಇತ್ತು. ಎಲ್ಲಾ ವ್ಯವಹಾರ ಪತ್ನಿಗೆ ಕೊಟ್ಟಿದ್ದೆ. ನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದು ಮದವೆ ಆಗಿದ್ದಳು. ಸ್ವಂತ ಸೋದರ ಮಾವನ ಮಗಳನ್ನ ನಾನೂ ಇಷ್ಟಪಟ್ಟು ಮದುವೆ ಆಗಿದ್ದೆ. ಎಂದೂ ಅನುಮಾನ ಬರದಂತೆ ಇದ್ದು ಹೀಗೆ ಮೋಸ ಮಾಡಿದಾಳೆ. ಆಸ್ಪತ್ರೆಗೆ ಹೋಗ್ತಿನಿ ಎಂದು ವಾಪಸ್ ಬರ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲವರ್ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಗಂಡನೊಂದಿಗೆ ಇರ್ತಿನಿ ಅಂತ ನಾಟಕ

ಲೋ ಬಿಪಿ ಇರೋ ಪತ್ನಿ ಎಲ್ಲಿ ಅನಾರೋಗ್ಯದಿಂದ ಬಿದ್ದು ಹೋದಳು ಎಂದು ಹುಡುಕಾಡಿದ್ದೆ. ಆದರೆ ಗೆಳತಿ ಮನೆಯಲ್ಲಿ ಇರೋದಾಗಿ ಹೇಳಿ ನೀನು ನಂಗೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಿದಾಗ ಗೊರೂರು ಠಾಣೆಗೆ ಬಂದಿದ್ದಳು. ಈ ವೇಳೆ ಪತಿ ಇಷ್ಟವಿಲ್ಲ ಎಂದು ಹರ್ಷಿತಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಯಿತು. ಅಲ್ಲಿಂದ ಫೋನ್ ಮಾಡಿ ತಪ್ಪಾಯ್ತು ಬಂದು ಕರ್ಕೊಂಡ್ ಹೋಗಿ ಅಂದಿದ್ದಳು. ಹೋದಾಗ ಕಾಲು ಹಿಡಿದು ಕಣ್ಣೀರು ಹಾಕಿದಳು. ಮಗನಿಗಾಗಿ ಕ್ಷಮಿಸಿ ಕರೆದೊಯ್ದರೆ ಏಪ್ರಿಲ್ 10 ರ ರಾತ್ರಿ ನನಗೆ ನಿದ್ರೆ ಮಾತ್ರ ಹಾಕಿ ಎಸ್ಕೇಪ್ ಆಗಿದ್ದಾಳೆ. ಮನೆಯಿಂದ 200 ಗ್ರಾಂ ಚಿನ್ನ ಏಳು ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾಳೆ. ನಮಗೆ ಆಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆಕೆ ವಾಪಸ್ ಬಂದ್ರೆ ಯಾವುದೇ ಕಾರಣದಿಂದ ಮತ್ತೆ ಕ್ಷಮಿಸಲ್ಲ.
ಅವಳು ವಾಪಸ್ ಬಂದರೆ ನಮ್ಮನ್ನೆ ಉಳಿಸಲ್ಲ. ಅವಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸೂಚಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಹರ್ಷಿತಾ

ಯಾವಾಗ ಪತಿ ಕ್ಷಮಿಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತೆಯೇ ಪಟ್ನ ಹರ್ಷಿತಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಗಂಡನ ಆರೋಪವನ್ನು ಅಲ್ಲಗೆಳೆದಿದ್ದಾಳೆ. ಕೆಲವೊಂದಿಷ್ಟು ಆರೋಪ ಮಾಡಿದ್ದು, ಡಿವೋರ್ಸ್ ಬೇಕೆಂದಿದ್ದಾಳೆ.

ಇದನ್ನೂ ಓದಿ: ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ನಂಗೆ ಡಿವೋರ್ಸ್ ಬೇಕು ಅಷ್ಟೇ

ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ಪ್ರಕಾಶ್ ಜೊತೆ ಜೀವನ ಮಾಡಲು ನನಗೆ ಇಷ್ಟವಿಲ್ಲ. ಇಲ್ಲ ನಾನೇ ಸ್ವ ಇಚ್ಚೆಯಿಂದ ಹೊರಗೆ ಬಂದಿದ್ದೇನೆ. ಮಹೇಶ್ ಹೇಮಂತ್, ಪ್ರಕಾಶ್ ಮೆಂಟಲಿ ಟಾರ್ಚರ್ ಮಾಡಿದರು. ಮಾದ್ಯಮದ ಮುಂದೆ ಹೋಗಿ ಮಾನ ಮರ್ಯಾದೆ ಕಳೆದಿದಾರೆ. ಅವರ ಜೊತೆ ಜೀವನ ಮಾಡಲು ಇಷ್ಟವಿಲ್ಲ
ನಂಗೆ ಡಿವೋರ್ಸ್ ಬೇಕು ಅಷ್ಟೇ. ಹೀಗೆ ಬಲವಂತ ಮಾಡಿದ್ರೆ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಿನಿ ’ಎಂದು ಎಚ್ಚರಿಕೆ ನೀಡಿದ್ದಾಳೆ.

ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ

ಅವರು 200 ಗ್ರಾಂ ಚಿನ್ನಾಭರಣ ತಂದಿರುವುದು ಹೇಳಿರುವುದು ಸುಳ್ಳು. ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ ಯಾರೂ ಟಾರ್ಚರ್ ಮಾಡಿಲ್ಲ ನಾನೇ ಸ್ವಾ ಇಚ್ಚೆಯಿಂದ ಬಂದಿದ್ದೇನೆ. ಅವರು ಬೇಡಾ ಎಂದು ದೂರು ಕೊಟ್ಟಿದ್ದೆ. ಇಲ್ಲ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದರು. ನಂತರ ಮನೆಗೆ ಕರ್ಕೊಂಡ್ ಹೋಗಿದ್ರು. ಪ್ರಕಾಶ್ ಚಿಕ್ಕಪ್ಪನಮಗ ಹೇಮಂತ್ ನನ್ನನ್ನು ಕತ್ತರಿಸಿ ಹಾಕ್ತಿನಿ ಎಂದು ಹೆದರಿಸಿದ್ದಾನೆ. ಪ್ರಕಾಶ್ ಕೂಡ ಹಾಗೆಯೇ ಹೇಳಿದ್ದರು ಹಕ್ಕು ಖುಲಾಸೆಗೆ ಸಹಿ ಹಾಕಿಸಿಕೊಂಡು ಹಿಂಸೆ ನೀಡಿದ್ರು. ನನಗೆ ಹೊರಗಿನ ಪ್ರಪಂಚ ನೋಡದ ಹಾಗೆ ಮಾಡುತ್ತೇನೆ. ಮನೆ ಕೆಲಸ ಮಾಡಿಕೊಂಡು ಬಿದ್ದಿರು ಅಂದ್ರು. ಊಟ ಕೊಡಬೇಕು, ಬಾಯಿಗೆ ಬಂದಂಗೆ ಬೈಯ್ದರು. ಹಾಗಾಗಲಿಲ್ಲ ಎಂದಿದ್ದಾಳೆ.

ಅವರ ಜೊತೆ ಜೀವನ ಮಾಡಲು ಇಷ್ಟವಿಲ್ಲ

ನಾನು ಮನೆ ಬಿಟ್ಟು ಬರಲು ಸಹಾಯ ಮಾಡಿದ್ದು ಹೇಮಂತ್. ಒಬ್ಬರಿಗೆ ಯಾರ ಸಹಾಯ ಇಲ್ಲದೇ ಹುಡುಗಿನ ಕರ್ಕೊಂಡ್ ಹೋಗಲ್ಲ. ನಮಗೆ ಸಹಾಯ ಮಾಡಿದ್ದು ಹೇಮಂತ್. ನನಗೆ ಪಾಪು ಬೇಡ ಎಂದು ಹೇಳಿಲ್ಲ. ನಾನು ಪ್ರಕಾಶ್ ಗೆ ಡಿವೋರ್ಸ್ ಕೊಟ್ಟು ಹೇಗೊ ಮಗು ಸಾಕುತ್ತೇನೆ. ಯಾರೋ ಬಲವಂತ ಮಾಡಿದ್ರು ಎಂದು ಈ ಹೇಳಿಕೆ ನೀಡುತ್ತಿಲ್ಲ. ನಾನೇ ಇಷ್ಟಪಟ್ಟು ಮನೆಯಿಂದ ಹೊರಗೆ ಬಂದಿದ್ದೇನೆ. ಅವರು ಕುಡಿದು ಬಂದು ಹೊಡೆದಿದ್ದಾರೆ. ಅವರ ಜೊತೆ ಜೀವನ ಮಾಡಲು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.



Source link

Leave a Reply

Your email address will not be published. Required fields are marked *