ಆಸ್ತಿಗಾಗಿ ದಾಯಾದಿಗಳಿಂದಲೇ ಸಾರಿಗೆ ನೌಕರನ ಹತ್ಯೆ! ಜಮೀನಿನಲ್ಲೇ ಕೊಂದು ಪೆಟ್ರೋಲ್ ಸುರಿದು ಸುಟ್ಟ ಪಾಪಿಗಳು!

ಆಸ್ತಿಗಾಗಿ ದಾಯಾದಿಗಳಿಂದಲೇ ಸಾರಿಗೆ ನೌಕರನ ಹತ್ಯೆ! ಜಮೀನಿನಲ್ಲೇ ಕೊಂದು ಪೆಟ್ರೋಲ್ ಸುರಿದು ಸುಟ್ಟ ಪಾಪಿಗಳು!


ಹಾಸನ, ಫೆಬ್ರವರಿ 18: ಆಸ್ತಿ ಕಲಹಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆ ನೌಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ (ಹಾಸನ) ಜಿಲ್ಲೆಯ ಆಲೂರು ತಾಲ್ಲೂಕಿನ ರಾಜನಹಳ್ಳಿ ಸಮೀಪ ನಡೆದಿದೆ. ಎರಡು ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ಕೇಸ್ ಮುಗಿಸಿ ಸಂಜೆಯೇ ಕೊಲೆ ಮಾಡಿದ ಆರೋಪ ಕೇಳಿಬಂದಿದ್ದು, ಆಲೂರು ಪೊಲೀಸರು ತನಿಖೆ ನಡೆಸಿದ್ದಾರೆ.

ಕೋರ್ಟ್ ಕೇಸ್ ಮುಗಿಸಿ ಬಂದ ಸಂಜೆ ಹತ್ಯೆ

ಮೃತ ವೀರಪ್ಪ (58)ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುವ ಹಂತದಲ್ಲಿದ್ದರು. ಕೆಲ ವರ್ಷಗಳ ಹಿಂದೆ ವೀರಪ್ಪನ ಚಿಕ್ಕಪ್ಪ ಬಾಗಲಯ್ಯ ಅವರಿಗೆ 2 ಆಸ್ತಿಯನ್ನು ಕೊಡುವುದಾಗಿ ದಾನಪತ್ರ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆ ಆಸ್ತಿ ವೀರಪ್ಪನ ಹೆಸರಿಗೆ ರಿಜಿಸ್ಟರ್ ಆಗುತ್ತಿದೆ. ಆದರೆ ಆತನ ಮಕ್ಕಳಾದ ಮಲ್ಲಮ್ಮ ಹಾಗೂ ಮಹದೇವಮ್ಮ ಮತ್ತು ಅವರ ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.ಈ ಹಿನ್ನೆಲೆ ಮಂಗಳವಾರ ಆಲೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವೀರಪ್ಪ ಹಾಜರಾಗಿದ್ದರು.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

11 ಆರೋಪಿಗಳ ವಿರುದ್ಧ ಕೇಸ್

ವಿಚಾರಣೆ ಮುಗಿಸಿ ಜಮೀನಿನ ಬಳಿ ತೆರಳಿದ್ದ ವೀರಪ್ಪರನ್ನು ಹಿಂಬಾಲಿಸಿದ ಮಲ್ಲಮ್ಮನ ಮಕ್ಕಳಾದ ಹರೀಶ ಮತ್ತು ಪ್ರಕಾಶ ಮತ್ತು ಮಹದೇವಮ್ಮನ ಮಗನಾದ ಮಹದೇವ, ಹಲ್ಲೆ ನಡೆಸಿ ಕೊಲೆಗೈದು, ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾ ಭೇಟಿ ನೀಡಿ ಪರಿಶೀಲನೆ

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *