ವರದಿ: ಬಲಭೀಮರಾವ್ ಕುಲಕರ್ಣಿ

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಂಪನಿಯು 2025-26ನೇ ಸಾಲಿನಲ್ಲಿ 1691.575 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಕೊನೆಯ ನಾಲ್ಕು ತಿಂಗಳಲ್ಲಿ ಉತ್ಪಾದನೆ ಭಾರಿ ಚೇತರಿಕೆ ಕಂಡು, ಕಳೆದ ವರ್ಷದ ₹430 ಕೋಟಿ ಲಾಭವನ್ನು ದುಪ್ಪಟ್ಟುಗೊಳಿಸಿದೆ.

ರಾಯಚೂರು: 2025-26 ನೇ ಆರ್ಥಿಕ ವರ್ಷಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ದಾಖಲೆ ಮೆರೆದಿದೆ. 6 ಲಕ್ಷ 49 ಸಾವಿರ 690 ಮೆಟ್ರಿಕ್ ಟನ್ ಅದಿರನ್ನು ಕಂಪನಿ ಭೇದಿಸಿದೆ. 1700 ಕೆಜಿ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, 772.190 ಕೆಜಿ ಚಿನ್ನ ಉತ್ಪಾದನೆಯಾಗಿದ್ದು, 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ಕೆಜಿ ಚಿನ್ನ ಉತ್ಪಾದಿಸಿ 99ರಷ್ಟು ಪ್ರಗತಿ ಸಾಧಿಸಿದೆ.ಪ್ರತಿ ಟನ್ ಅದಿರಿನಲ್ಲಿ 2.57 ಗ್ರಾಮ್ ಉತ್ಪಾದನೆ ಗುರಿ ಹೊಂದಿದ್ದು, ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 2.90 ಗ್ರಾಮ್ ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ.

ಏಪ್ರಿಲ್ನಲ್ಲಿ 113.011, ಮೇ 104.737, ಜೂನ್ 75.945, ಜುಲೈ 94.238, ಆಗಸ್ಟ್ 119.405 ಸೆಪ್ಟೆಂಬರ್ 83.018, ಅಕ್ಟೋಬರ್ 91.201, ನವೆಂಬರ್ನಲ್ಲಿ 86.978 ಪ್ರಾರಂಭದ 8 ತಿಂಗಳಲ್ಲಿ ಮಂದಗತಿಯಲ್ಲಿ ಸಾಗಿದ್ದ ಉತ್ಪಾದನೆ ಚೇತರಿಸಿಕೊಂಡು, ಕೊನೆಯ ನಾಲ್ಕು ತಿಂಗಳು ಡಿಸೆಂಬರ್ 133.ಕೆ.ಜಿ, ಜನವರಿ 246.076 ಕೆ.ಜಿ, ಫೆಬ್ರವರಿ 257.121 ಹಾಗೂ ಮಾರ್ಚ್ ತಿಂಗಳಲ್ಲಿ 286.839 ಕೆ.ಜಿ ಚಿನ್ನ ಉತ್ಪಾದಿಸಿದೆ.

ನವೆಂಬರ್ನಲ್ಲಿ 130.084 ಆರ್ಥಿಕ ವರ್ಷದ ಪ್ರಾರಂಭದಲ್ಲಿ 1700 ಕೆ.ಜಿ ಗುರಿ ಹೊಂದಲಾಗಿತ್ತು. ಹಟ್ಟಿಚಿನ್ನದಗಣಿ ಕಂಪನಿ ಉತ್ಪಾದಿಸುವ 24 ಕ್ಯಾರೇಟ್ ಚಿನ್ನದ ದರ ಇಂದಿನ ಮಾರುಕಟ್ಟೆಯಲ್ಲಿ 1.45 ಸಾವಿರ ಆಸು-ಪಾಸಿನಲ್ಲಿದೆ. ಅಲ್ಪ ಸ್ವಲ್ಪ ಬೆಲೆಯಲ್ಲಿ ಏರಿಳಿಕೆ ಕಂಡರೂ ಸಹಿತ ಇಂದಿನ ದರಕ್ಕೆ ಹೋಲಿಸಿದರೆ ತಿಂಗಳಿಗೆ ಸರಾಸರಿ 60 ರಿಂದ 65 ಕೆ.ಜಿ ಚಿನ್ನ ಉತ್ಪಾದಿಸಿದರೆ ಗಣಿಯ ಕಾರ್ಯಕ್ಷಮತೆ ಉಳಿಸಿಕೊಂಡು ಅಧಿಕ ಲಾಭ ಗಳಿಸಬಹುದೆಂಬ ಲೆಕ್ಕಾಚಾರವಿದೆ. 1691 ಕೆ.ಜಿ ಉತ್ಪಾದಿಸಿ ಕಳೆದ ವರ್ಷದ ಲಾಭಕ್ಕೆ ಮುಮ್ಮಡಿಯಾಗುವಂತೆ ಸಾಧನೆಗೈದಿದೆ.

ಗಣಿ ಕಂಪನಿ ಆಧೀನದ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತಾ ಸಾಗಿದೆ. ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತದೆ. 25 ಕಿ.ಮೀ ಅಂತರದಿಂದ ಅದಿರನ್ನು ಹಟ್ಟಿ ಲೋಹ ವಿಭಾಗಕ್ಕೆ ತಂದು ಸಂಸ್ಕರಿಸುವಲ್ಲಿ ಉತ್ಪಾದನಾ ವೆಚ್ಚವೂ ಕೂಡ ಅಧಿಕವಾಗಿದೆ. ಊಟಿ, ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಕಡಿಮೆ ಚಿನ್ನದ ಪ್ರಮಾಣ ಸಿಗುವ ಸ್ಥಳಗಳಿಂದ ಉಂಟಾಗುವ ನಷ್ಟವನ್ನು ಹಟ್ಟಿಗಣಿಯಲ್ಲಿ ಹೆಚ್ಚು ಚಿನ್ನ ತೆಗೆದು ಸರಾಸರಿಯಲ್ಲಿ ಸರಿದೂಗಿಸಬೇಕಿದೆ.

ಈಗಿರುವ ಚಿನ್ನದ ಉತ್ಪಾದನೆಯಿಂದ ಕಳೆದ ವರ್ಷ ₹430 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಬಾರಿಯು ಲಾಭಾಂಶ ತರುವಲ್ಲಿ ಯಾವುದೇ ಗೊಂದಲವಿಲ್ಲ. ಉತ್ಪಾದನೆಗೆ ಚುರುಕು ಮೂಡಿಸಲು ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸಿ ತಿಳಿಸಲಾಗಿದೆ. ಉತ್ಪಾದನೆ ಜತೆಗೆ ಕಂಪನಿಯ ಕಾರ್ಯಕ್ಷಮತೆಯೂ ಮುಖ್ಯ ವಾಗಿದೆ. ನಿಸರ್ಗದ ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಕಾರ್ಮಿಕ-ಅಧಿಕಾರಿ ವರ್ಗದ ಶ್ರಮದ ಫಲದಿಂದ, ಕಡಿಮೆ ಅವಘಡಗಳಿಂದ ಉತ್ಪಾದನೆಗೈದ ತೃಪ್ತಿ ಕಂಪನಿಗಿದೆ.

- ಪ್ರಕಾಶ್ ರಾಯಮಾಜಿ, ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ

Source link
ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!