Headlines

ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!: ರಸ್ತೆ ದುಃಸ್ಥಿಗೆ ಜನ ಹೈರಾಣು

ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!: ರಸ್ತೆ ದುಃಸ್ಥಿಗೆ ಜನ ಹೈರಾಣು


ಹಾವೇರಿ, ಫೆಬ್ರವರಿ 27: ಜಿಲ್ಲೆಯಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟ ಪರಿಣಾಮ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ ಶಿರಸಿಯ ಮಾರಿಕಾಂಬಾ ಜಾತ್ರೆಗೆ ತೆರಳುವ ಭಕ್ತರು ಪ್ರತಿನಿತ್ಯ ಪರದಾಟ ನಡೆಸಬೇಕಾದ ಸ್ಥಿತಿ ಉದ್ಭವವಾಗಿದೆ. ಕಳೆದ ಮೂರು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಗಡಿ ದಾಟುತ್ತಿದ್ದಂತೆ 20 ಕಿಲೋ ಮೀಟರ್ ರಸ್ತೆಯಲ್ಲಿ ಜೀವದ ಹಂಗು ತೊರೆದು ವಾಹನ ಸವಾರರು ಸಂಚರಿಸಬೇಕಿದೆ. ಅಕಾಲಿಕವಾಗಿ ಸುರಿದ ಅಪ್ಪ ಮಳೆಗೆ ರಸ್ತೆ ಕೆಸರು ಗದ್ದೆಯಂತಾದರೆ, ಬೈಕ್ ಸವಾರರು ಬಿದ್ದು ಒದ್ದಾಡಿದ ಪ್ರಸಂಗಗಳೂ ನಡೆದಿವೆ. ಈ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ, ಕೆಸರಲ್ಲಿ ಸಿಲುಕಿ ವಾಯನಗಳ ನಿಯಂತ್ರಣ ಕಳೆದುಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *