ಮನೆ ಕಟ್ಟಿಕೊಳ್ಳಲು ಹೋರಾಟ, ಮಗಳ ಸಾವಿಗೂ ನ್ಯಾಯ ಸಿಗದ ದುರಂತ, ಹೈಕೋರ್ಟ್ ಆದೇಶಕ್ಕೆ ಪೊಲೀಸರು ಡೋಂಟ್ ಕೇರ್! | Haveri Tragedy Man Fight To Build House Ends Daughter Death Amid Police Inaction

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬಡ ಕುಟುಂಬವೊಂದು ನ್ಯಾಯಕ್ಕಾಗಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ಠಾಣೆಗಳ ಮೆಟ್ಟಿಲೇರಿದರೂ ಸ್ಪಂದನೆ ಸಿಗದೆ ತೀವ್ರ ದುರಂತಕ್ಕೆ ತಲುಪಿದ ಘಟನೆ ಬೆಳಕಿಗೆ ಬಂದಿದೆ. ಮನೆ ಕಟ್ಟಿಕೊಳ್ಳುವ ವಿಚಾರದಲ್ಲಿ ಕುಟುಂಬದೊಳಗಿನ ತಕರಾರಿನಿಂದ ಆರಂಭವಾದ ಈ ಪ್ರಕರಣ, ಕೊನೆಗೆ ಒಬ್ಬ ಯುವತಿಯ ಸಾವಿಗೂ ಕಾರಣವಾಗಿದೆ.

ಬಂಕಾಪುರ ಪಟ್ಟಣದ ಗುಡ್ಡಪ್ಪ ಎಂಬ ಬಡ ವ್ಯಕ್ತಿ ಈ ದುರಂತದ ಕೇಂದ್ರಬಿಂದು. 2021ರಲ್ಲಿ ಸಂಭವಿಸಿದ ಭಾರೀ ಅತಿವೃಷ್ಟಿಯಿಂದಾಗಿ ಗುಡ್ಡಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಮನೆ ಪುನರ್ ನಿರ್ಮಾಣಕ್ಕಾಗಿ ₹5 ಲಕ್ಷ ಪರಿಹಾರವನ್ನು ಮಂಜೂರು ಮಾಡಲಾಗಿದ್ದು, ಮೊದಲ ಹಂತವಾಗಿ ₹1 ಲಕ್ಷ ಹಣವೂ ಅವರ ಖಾತೆಗೆ ಜಮೆಯಾಗಿದೆ.

Source link

Leave a Reply

Your email address will not be published. Required fields are marked *