Headlines

ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು

ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು


ಹಾವೇರಿ, ಫೆಬ್ರವರಿ 16: ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ಕುಡಿಯುವ ನೀರು (ನೀರು) ಕೊಡುವ ಉದ್ದೇಶದಿಂದ ಹರ್ ಘರ್ ಜಲ್ ಯೋಜನೆನ್ನ (ಹರ್ ಘರ್ ಜಲ್ ಯೋಜನೆ) ಜಾರಿಗೆ ತಂದಿದೆ. ಆದರೆ ಕೋಟ್ಯಂತರ ರೂ ವೆಚ್ಚದಲ್ಲಿ ಮಾಡಿದ ಯೋಜನೆ ಸದ್ಯ ಹಳ್ಳ ಹಿಡಿದು ಹೋಗಿದೆ. ಕಾಮಗಾರಿ ಮಾಡಿ ಐದು ವರ್ಷ ಕಳೆದರೂ ಮನೆಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳದಲ್ಲಿ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ನೆಶ್ವಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮದ 600ಕ್ಕೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್ ನಳಗಳನ್ನು ಹಾಕಲಾಗಿದೆ. ಆದರೆ ಈಗ ಮನೆಗಳಿಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳಗಳಲ್ಲಿ ನೀರು ತುಂಬುವ ಪರಸ್ಥಿತಿ ಬಂದಿದೆ. ಈ ಕೆಲವು ಜನಪ್ರತಿನಿಧಿಗಳ ಮನೆಗಳ ಮುಂದೆ ನಳಗಳು ಇವೆ. ಜನರು ಮಾತ್ರ ನೀರು ತರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ನೆಶ್ವಿ ಗ್ರಾಮದಲ್ಲಿ ಗುತ್ತಿಗೆದಾರ ಕೆಲಸ ಮಾಡಿ ಐದು ವರ್ಷ ಕಳೆದಿದೆ. ಜೊತೆಗೆ ಗ್ರಾಮ ಪಂಚಾಯತಿಯಿಂದ ಎನ್ ಒಸಿ ಸಹ ಕೊಡುಗೆ. ನೀರು ಬಾರದೆ ಹೇಗೆ ಎನ್ ಒಸಿ ಕೊಟ್ಟಿದ್ದಾರೆ. 50 ರಿಂದ 100 ಕುಟುಂಬಗಳ ನಡುವೆ ಒಂದು ಸಾರ್ವಜನಿಕ ನಳ ಇತ್ತು, ಅದರಲ್ಲಿ ಒಂದು ಗಂಟೆಗಳ ಕಾಲ ನೀರು ಹಿಡಿಯುವ ಪರಸ್ಥಿತಿ ಬಂದಿದೆ. ಮನೆಗೆ ಅಳವಡಿಸಿರುವ ನಳಗಳು ತಕ್ಕು ಹಿಡಿದು ಹಾಳಾಗುತ್ತಿವೆ. ಗುತ್ತಿಗೆದಾರ ನಮ್ಮ ಕೆಲಸ ಮುಗಿದಿದೆ. ನಮ್ಮದು ಏನೋ ಇಲ್ಲ ಅಂತಾರೆ. ಈಗ ಅಧಿಕಾರಿಗಳು ಮಾತ್ರ ಇವತ್ತು, ನಾಳೆ ಅಂದು ಜನರನ್ನ ಓಡಿಸುತ್ತಾರೆ. ಗುತ್ತಿಗೆದಾರ ಮತ್ತು ಪಿಡಿಓ ಸೇವೆ ಗ್ರಾಮ ಪಂಚಾಯತಿ ಸದಸ್ಯರ ಹೊಂದಾಣಿಕೆಯಿಂದ ನೀರು ಬರುತ್ತಿಲ್ಲ. ಸರ್ಕಾರದ ಕೋಟ್ಯಂತರ ರೂ ಹಾಳು ಮಾಡಿದ್ದಾರೆ ಎಂದು ಸ್ಥಳೀಯರಾದ ಚನ್ನಬಸಪ್ಪ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಶಾಲೆಯ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ, ವಿಡಿಯೋ ವೈರಲ್

ಒಟ್ಟಿನಲ್ಲಿ ಸರ್ಕಾರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮನೆಮನೆಗೂ ಬರಲಿ ಅನ್ನೋ ಉದ್ದೇಶದಿಂದ ಮಾಡಿದ್ದಾರೆ. ಆದರೆ ಈಗ ಪಿಡಿಓ ಮತ್ತು ಅಧಿಕಾರಿಗಳು ಯಡವಟ್ಟಿನಿಂದ ನೀರು ಬಾರದೇ ಜನರು ಪರದಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚತ್ತುಕೊಂಡು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ನೀರು ಹರಿಸುವ ಕೆಲಸ ಮಾಡಬೇಕಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *