ತಮಗೆ ಆ ಕಾಯಿಲೆ ಇಲ್ಲ ಎನ್ನುತ್ತಾ ಆಲ್ಝೈಮರ್ ಹೆಸರನ್ನೇ ಮರೆತ ಟ್ರಂಪ್

ತಮಗೆ ಆ ಕಾಯಿಲೆ ಇಲ್ಲ ಎನ್ನುತ್ತಾ ಆಲ್ಝೈಮರ್ ಹೆಸರನ್ನೇ ಮರೆತ ಟ್ರಂಪ್


ಡೊನಾಲ್ಡ್ ಟ್ರಂಪ್ಚಿತ್ರ ಕ್ರೆಡಿಟ್ ಮೂಲ: ರೈಸಿಂಗ್ ಕಾಶ್ಮೀರ್

ವಾಷಿಂಗ್ಟನ್, ಜನವರಿ 28: ನನಗಂತೂ ಆ ಕಾಯಿಲೆ ಇಲ್ಲ ಎನ್ನುತ್ತಾ ‘ಆಲ್ಝೈಮರ್’ ಹೆಸರನ್ನೇ ಡೊನಾಲ್ಡ್ ಟ್ರಂಪ್(ಡೊನಾಲ್ಡ್ ಟ್ರಂಪ್) ಮರೆತ ಘಟನೆ ನಡೆದಿದೆ. ನ್ಯೂಯಾರ್ಕ್ ನ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ತಮ್ಮ ತಂದೆಗೆ ಇದ್ದ ರೋಗ ಆಲ್ಝೈಮರ್ ಬಗ್ಗೆ ಚರ್ಚಿಸಿದ್ದಾರೆ. ಆ ವೇಳೆ ತನಗೆ ಆ ಕಾಯಿಲೆ ಇಲ್ಲ ಎಂದು ಹೇಳಿದರು. ಆದರೆ ಕೊನೆವರೆಗೂ ಅದ್ಯಾವ ಕಾಯಿಲೆ ಎಂದು ಹೇಳಲು ಸಾಧ್ಯವಾಗಲಿಲ್ಲ. ಅದಕ್ಕೂ ಸ್ವಲ್ಪ ಮುನ್ನ ಟ್ರಂಪ್ ದಾವೋಸ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್‌ನಲ್ಲಿ ಸೇರಿಸಿದ್ದ ಘಟನೆಯೂ ನಡೆದಿತ್ತು.

ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಕಷ್ಟಪಡುತ್ತಿದ್ದರು, ಆದರೂ ಅವರು ಸ್ಮರಣಶಕ್ತಿ ಮತ್ತು ಚಿಂತನಾ ಕೌಶಲ್ಯವನ್ನು ನಾಶಪಡಿಸುವ ನರ ಅಸಾಧ್ಯ ಕಾಯಿಲೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು. ಟ್ರಂಪ್ ತಮ್ಮ ಫ್ರೆಡ್ ಟ್ರಂಪ್ ಅವರ ಅನಾರೋಗ್ಯದ ತಂದೆಯ ಬಗ್ಗೆ ಉಲ್ಲೇಖಿಸುತ್ತಾ ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಹೆಣಗಾಡಿದರು.

ಅಷ್ಟೇ ಅಲ್ಲದೆ ತಾನು ಆ ಕಾಯಿಲೆಯನ್ನು ಹೊಂದಿಲ್ಲ ತಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಒತ್ತಿ ಹೇಳಿದರು. ತನ್ನ ತಂದೆಗೂ ಆಲ್ಝೈಮರ್ ಬಿಟ್ಟು ಬೇರೆ ಯಾವ ಕಾಯಿಲೆಯೂ ಇರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸುಮಾರು 86, 87 ವರ್ಷ ವಯಸ್ಸಿನ ಅವರಿಗೊಂದು ಸಮಸ್ಯೆ ಕಾಣಿಸಿಕೊಂಡಿತ್ತು, ಅದಕ್ಕೇನೆಂದು ಕರೀತಾರೆ ಎಂದು ಟ್ರಂಪ್ ತಲೆ ಕೆಡಿಸಿಕೊಂಡು ಶ್ವೇತ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಕಡೆಗೆ ನೋಡುತ್ತಾ ಕೇಳಿದ್ದಾರೆ ಅದಕ್ಕೆ ಲೀವಿಟ್ ಆಲ್ಝೈಮರ್ ಎಂದು ಉತ್ತರಿಸಿದರು.ಅದು ಇಲ್ಲ ಎಂದು ನನಗೆ ಟ್ರಂಪ್ ಉತ್ತರಿಸಿದರು.

ನ್ಯೂಯಾರ್ಕ್ನ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಫ್ರೆಡ್ ಟ್ರಂಪ್ ಅವರಿಗೆ 1990 ರ ಆರಂಭದಲ್ಲಿ ಆಲ್ಝೈಮರ್ ಕಾಯಿಲೆ ಕಾಣಿಸಿಕೊಂಡಿತು ಮತ್ತು ಹಲವಾರು ವರ್ಷಗಳ ಕಾಲ ಈ ಸ್ಥಿತಿಯಲ್ಲಿ ಬದುಕಿದ್ದರು ಮತ್ತು 1999 ರಲ್ಲಿ 93 ನೇ ವಯಸ್ಸಿನಲ್ಲಿ ನಿಧನರಾದರು.

ಹೆಚ್ಚಾಗುತ್ತಿದ್ದಂತೆ ಮರೆವು ಹೆಚ್ಚುತ್ತಲೇ ಹೋಗುತ್ತದೆ. ಅದು ಅತಿಯಾದರೆ ಜೀವನ ದುಸ್ತರವಾಗುತ್ತದೆ. ವಯಸ್ಕರಲ್ಲಿ ತಿಳಿದಿರುವ ಮರೆವಿನ ಕಾಯಿಲೆಯೇ ಅಲ್ಜೈಮರ್ ಕೊನೆಗಾಲದಲ್ಲಿ ಕಾಡುವೀನ ಸಮಸ್ಯೆ ಇದು. ಸ್ಮರಣಶಕ್ತಿ, ಬುದ್ಧಿಶಕ್ತಿ, ಕಲಿಕೆ, ಕ್ರಿಯಾಶೀಲತೆ, ಭಾಷಾ ಸಾಮರ್ಥ್ಯ,ಗ್ರಹಿಕೆ ಹಾಗೂ ಕ್ಷೀಣಿಸಿದ ನಿರ್ಧಾರ, ವಿವೇಕ ಶಕ್ತಿ ಭಾವನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ.

ಅರೆಕ್ಷಣದಲ್ಲಿ ಈ ಹಿಂದೆ ಮಾಡಿದ್ದನ್ನು, ಮಾತಾಡಿದ್ದನ್ನು, ಹೇಳಿದ್ದನ್ನು ಮರೆತು ಬಿಡುತ್ತಾರೆ. ವಸ್ತುವನ್ನು ಎಲ್ಲಿಯೋ ಇಟ್ಟು ಹುಡುಕುವುದು. ಹತ್ತಿರದವರ ಹೆಸರನ್ನು ಸಹ ಮರೆಯುವುದು. ಪದೇ ಪದೇ ,ಪದೇಪದೆ ಕೇಳಿದ್ದನ್ನೆ ಕೇಳುವುದು. ದಾರಿ ತಪ್ಪಿ ಎಲ್ಲಿಯೋ ಹೋಗಿ ಬಿಡುವುದು.

ದಿನನಿತ್ಯದ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಪದೇ ಪದೇ ಬದಲಾಗುವ ಮಾನಸಿಕ ಸ್ಥಿತಿ, ಶಬ್ದ ಮತ್ತು ದೃಶ್ಯಗಳನ್ನು ಗೃಹಿಸುವಿಕೆಯಲ್ಲಿ ತೊಂದರೆ, ಸರಿಯಾಗಿ ಮಾತನಾಡಲು ಆಗದೆ ಇರುವುದು, ನಿದ್ರೆ ಮತ್ತು ಹಸಿವೆಯಲ್ಲಿ ಬದಲಾವಣೆಗಳು ಆಗುತ್ತವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *