Headlines

ಹುಟ್ಟುಹಬ್ಬದಂದೇ ಹೆಲ್ತ್ ಇನ್ಸ್‌ಪೆಕ್ಟರ್​​ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಹುಟ್ಟುಹಬ್ಬದಂದೇ ಹೆಲ್ತ್ ಇನ್ಸ್‌ಪೆಕ್ಟರ್​​ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ


ಹುಟ್ಟುಹಬ್ಬದಂದೇ ಹೆಲ್ತ್ ಇನ್ಸ್ ಪೆಕ್ಟರ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ತುಮಕೂರು, ಮಾರ್ಚ್ 30: ಖಾಸಗಿ ಜಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ (ಆಹಾರ ನಿರೀಕ್ಷಕ)ಶವ ಪತ್ತೆ (ಸಾವು) ಆಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತಾವರೆಕೆರೆ ಠಾಣಾ ಕಾರ್ಯಕ್ರಮ ನಡೆದಿದೆ. ಉಮೇಶ್ ಮೃತ ಹೆಲ್ತ್ ಇನ್ಸ್ ಪೆಕ್ಟರ್. ಹುಟ್ಟುಹಬ್ಬದ ದಿನವೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಸಾಕ್ಷಿಯಾಗಿದೆ. ದೂರು ನೀಡಿದ ಬಳಿಕ ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

ನಡೆದಿದ್ದೇನು?

ವರ್ಷದ ಹಿಂದೆ ಸ್ಕ್ಯಾವೆಂಜರ್ ಆಕ್ಟ್ ಅಡಿ ಉಮೇಶ್ ಅಮಾನತಾಗಿದ್ದರು. ನಾಲ್ಕು ತಿಂಗಳ ನಂತರ ಮತ್ತೆ ಹೆಲ್ತ್ ಆಫೀಸರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಸ್ತುತ ಹುಲಿಕುಂಟೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಆದರೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದೆ. ವಿಶೇಷವಾಗಿ ಹುಟ್ಟುಹಬ್ಬದ ದಿನದಂದೇ ಹೀಗಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ಸದ್ಯಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ದೂರಿಗಾಗಿ ಕಾಯುತ್ತಿದ್ದಾರೆ. ಇನ್ನು ತಂದೆಯ ಸಾವಿನ ಸಂಗತಿ ತಿಳಿದು ಉತ್ತರ ಭಾರತದಿಂದ ಉಮೇಶ್ ಅವರ ಮಗಳು ಬರುತ್ತಿದ್ದಾರೆ. ಮಗಳು ಬಂದ ನಂತರ ಸಾವಿನ ಬಗ್ಗೆ ದೂರು ನೀಡಿದ ಬಳಿಕ ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಸವಾರರ ಸಾವು

ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಬಳಿ ನಡೆದಿದೆ. ರಂಗನಾಥಪುರದ ಪ್ರಸಾದ್(20) ಮತ್ತು ವಸಂತ್(22) ಮೃತರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ರಜೆ ತಂದ ಆಪತ್ತು; ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು

ರಂಗನಾಥಪುರದಿಂದ ತುಮಕೂರು ಕಡೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ತೀವ್ರ ರಕ್ತಸ್ರಾವವಾಗಿ ಪ್ರಸಾದ್, ವಸಂತ್ ಸ್ಥಳದಲ್ಲಿಯೇ ಇದೆ. ಹೆಬ್ಬೂರು ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *