Headlines

ವೈದ್ಯರು ಆರೋಗ್ಯವಾಗಿರಲು ಇದನ್ನ ಮಾಡ್ತಾರೆ, ಆದರೆ ರೋಗಿಗಳಿಗೆ ಮಾತ್ರ ಹೇಳೋದೆ ಇಲ್ಲ!

ವೈದ್ಯರು ಆರೋಗ್ಯವಾಗಿರಲು ಇದನ್ನ ಮಾಡ್ತಾರೆ, ಆದರೆ ರೋಗಿಗಳಿಗೆ ಮಾತ್ರ ಹೇಳೋದೆ ಇಲ್ಲ!

ವೈದ್ಯರು ಆರೋಗ್ಯವಾಗಿರಲು ಇದನ್ನ ಮಾಡ್ತಾರೆ, ಆದರೆ ರೋಗಿಗಳಿಗೆ ಮಾತ್ರ ಹೇಳೋದೆ ಇಲ್ಲ!

Health Tips: ನಾವು ಆರೋಗ್ಯವಾಗಿರಲು ಏನೇನೋ ಮಾಡುತ್ತೇವೆ. ಆದರೆ ವೈದ್ಯರು ಕೆಲವೊಂದು ವಿಷ್ಯಗಳನ್ನು ರೋಗಿಗಳ ಬಳಿ ಹೇಳೋದೆ ಇಲ್ಲ. ಯಾಕಂದ್ರೆ ಅದರಿಂದ ಕೆಲವು ವೈದ್ಯರಿಗೆ ಲಾಭ ಇದೆ. ಆದರೆ ವೈದ್ಯರು ಆರೋಗ್ಯದಿಂದ ಇರಲು ಏನೇನು ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿದ್ಯಾ?

ಹೆಚ್ಚಿನ ವೈದ್ಯರು ತಮ್ಮ ಕೆಲವೊಂದು ಸೀಕ್ರೆಟ್ ಗಳನ್ನು ಬಿಟ್ಟುಕೊಡೋದೆ ಇಲ್ಲ. ವೈದ್ಯರು ಯಾವಾಗಲೂ ಆರೋಗ್ಯದಿಂದ ಇರಲು ಏನೇನು ಮಾಡುತ್ತಾರೆ ಗೊತ್ತಾ? ಆಂಟಿ ಬಯೋಟೀಕ್ ನಿಂದ ಹಿಡಿದು, ರಕ್ತ ಪರೀಕ್ಷೆ ಮಾಡುವವರೆಗೆ, ವೈದ್ಯರು ತಮ್ಮ ರೋಗಿಗಳಿಗೆ ತಿಳಿಸದ ಏನೆಲ್ಲಾ ಕಸರತ್ತು ಮಾಡಿ, ಆರೋಗ್ಯ ಕಾಪಾಡುತ್ತಾರೆ ಅನ್ನೋದನ್ನು ನೋಡೋಣ.

ಹೆಚ್ಚಿನ ವೈದ್ಯರು ಯಾವತ್ತೂ ನೆಗಡಿ ಕೆಮ್ಮು ಬಂದರೆ ಆಂಟಿಬಯೋಟಿಕ್ ತೆಗೆದುಕೊಳ್ಳುವುದಿಲ್ಲ. ಯಾಕಂದ್ರೆ ಅವರಿಗೆ ಗೊತ್ತಿದೆ ನೆಗಡಿ ಬರೋದು ವೈರಸ್ ಗಳಿಂದ, ಆಂಟಿ ಬಯೋಟಿಕ್ ಸೇವನೆಯಿಂದ ನೆಗಡಿಯನ್ನು ನಿಲ್ಲಿಸೋಕೆ ಸಾಧ್ಯವಿಲ್ಲ ಎಂದು.

ವೈದ್ಯರು ಸಾಮಾನ್ಯವಾಗಿ ತಮಗೆ ಯಾವುದೇ ಅರೋಗ್ಯ ಸಮಸ್ಯೆ ಬಂದರೆ, ದೊಡ್ಡ ಬ್ರಾಂಡ್ ಹೆಸರುಗಳು ಇರುವಂತಹ ಔಷಧಿಗಳನ್ನು ಸೇವಿಸುವುದಿಲ್ಲ. ಬದಲಾಗಿ ಜನರಿಕ್ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.ಯಾಕಂದ್ರೆ ಎರಡರಲ್ಲೂ ಇರುವಂತಹ ಸಾಮಗ್ರಿಗಳು ಒಂದೇ ರೀತಿಯಾಗಿರುತ್ತವೆ, ಆದರೆ ಬ್ರಾಂಡ್ ನೇಮ್ ಗಳ ಬೆಲೆ 80 ಶೇಕಡದಷ್ಟು ಹೆಚ್ಚಾಗಿರುತ್ತದೆ.

ಇನ್ನು ವೈದ್ಯರು ವಿಟಮಿನ್ ಡಿ ಮತ್ತು ಫಿಶ್ ಆಯಿಲ್ ಇವೆರಡನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಜಾಹೀರಾತುಗಳಲ್ಲಿ ಸದಾ ತೋರಿಸುವಂತಹ ಸಪ್ಲಿಮೆಂಟ್ ಗಳನ್ನ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಹೆಚ್ಚಿನ ಸಪ್ಲಿಮೆಂಟ್ ಗಳಿಂದ ಏನು ಬದಲಾವಣೆ ಸಾಧ್ಯವಿಲ್ಲ ಅನ್ನೋದು ವೈದ್ಯರಿಗೆ ತಿಳಿದಿದೆ.

ಜೋರಾಗಿ ಹಸಿವು ಶುರುವಾದಾಗ ವೈದ್ಯರು ಮೊದಲಿಗೆ ನೀರು ಕುಡಿಯುತ್ತಾರೆ. ಯಾಕೆಂದರೆ ನಮ್ಮ ಮೆದುಳಿಗೆ ಕೆಲವೊಮ್ಮೆ ಹಸಿವು ಮತ್ತು ಬಾಯಾರಿಕೆಯ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ. ನೀರು ಕುಡಿದರೆ, ಅಂತಹ ಸಂದರ್ಭದಲ್ಲಿ ಹಸಿವಾಗುವ ಎಚ್ಚರಿಕೆಯೂ ನಿಲ್ಲಬಹುದು.

ಪೂರ್ತಿಯಾಗಿ ಆರೋಗ್ಯವಂತವಾಗಿ ಕಾಣಿಸಿಕೊಂಡರು ಸಹ ವೈದ್ಯರು ಪ್ರತಿ ವರ್ಷ ತಮ್ಮ ಪೂರ್ತಿ ದೇಹದ ಪರೀಕ್ಷೆ, ಅಥವಾ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಯಾಕೆಂದರೆ ಕೆಲವೊಂದು ಮಾರಣಾಂತಿಕ ರೋಗಗಳ ಲಕ್ಷಣಗಳು ಎಂದಿಗೂ ಕಾಣಿಸಿಕೊಳ್ಳುವುದೇ ಇಲ್ಲ. ಬದಲಾಗಿ ಇವು ನೇರವಾಗಿ ಜೀವವನ್ನೇ ತೆಗೆಯಬಹುದು.

ವೈದ್ಯರು ವ್ಯಾಯಾಮಕ್ಕಿಂತ ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಾಕೆಂದರೆ ವೈದ್ಯರಿಗೆ ತಿಳಿದಿದೆ ನೀವು ಎಷ್ಟೇ ವರ್ಕೌಟ್ ಮಾಡಿದರು ಸಹ ಕಡಿಮೆ ನಿದ್ರೆ ಮಾಡಿರುವುದನ್ನು ಫಿಕ್ಸ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆರು ಗಂಟೆಗಳ ನಿದ್ರೆ ಅತ್ಯಗತ್ಯ.

ವೈದ್ಯರು ಯಾವತ್ತೂ ಸಣ್ಣ ಸಣ್ಣ ಲಕ್ಷಣಗಳನ್ನು ಕಡೆಗಣಿಸುವುದಿಲ್ಲ. ಯಾಕೆಂದರೆ ಒಂದು ಸರಳವಾದ ಗಂಟಲು ನೋವು ಗಂಟಲಿನ ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಆರಂಭದಲ್ಲೇ ಗುರುತಿಸಿದರೆ, ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗುವ ಸಾಧ್ಯತೆ ಕೂಡ ಇದೆ.

Source link

Leave a Reply

Your email address will not be published. Required fields are marked *