Effects of quitting junk food: ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಎಲ್ಲರಿಗೂ ಗೊತ್ತು. ಆದ್ರೂ, ಬಹುತೇಕರು ಅದನ್ನೇ ಇಷ್ಟಪಟ್ಟು ತಿಂತಾರೆ. ಆದ್ರೆ, 30 ದಿನಗಳ ಕಾಲ ಜಂಕ್ ಫುಡ್ ತಿನ್ನೋದನ್ನು ನಿಲ್ಲಿಸಿದರೆ ನಿಮ್ಮ ದೇಹದಲ್ಲಿ, ಮುಖ್ಯವಾಗಿ ಮುಖದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

ನಮ್ಮಲ್ಲಿ ಹೆಚ್ಚಿನವರು ಫಾಸ್ಟ್ ಫುಡ್, ಪ್ಯಾಕೇಜ್ಡ್ ಸ್ನ್ಯಾಕ್ಸ್, ಕೇಕ್, ಚಿಪ್ಸ್‌ನಂತಹ ಪದಾರ್ಥಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅವು ನಮ್ಮ ದೇಹ, ವಿಶೇಷವಾಗಿ ಚರ್ಮದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಗೊತ್ತಾ? ಆರೋಗ್ಯ ತಜ್ಞರು ಮತ್ತು ಸ್ಕಿನ್ ಕೇರ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಕೇವಲ 30 ದಿನಗಳ ಕಾಲ ಜಂಕ್ ಫುಡ್ ಬಿಡುವುದರಿಂದ ಮುಖದಲ್ಲಿ ಆಗುವ ಬದಲಾವಣೆಗಳೇನು?

ಜಂಕ್ ಫುಡ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್, ಸಕ್ಕರೆ ಮತ್ತು ಸಂಸ್ಕರಿಸಿದ ಪದಾರ್ಥಗಳು ಹೆಚ್ಚಾಗಿರುತ್ತವೆ. ಇದು ಚರ್ಮದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸುಕ್ಕು, ಕೆಂಪಾಗುವುದು ಮತ್ತು ಶುಷ್ಕತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಜಂಕ್ ಫುಡ್ ಬಿಟ್ಟ ತಕ್ಷಣ, ದೇಹದಲ್ಲಿನ ಉರಿಯೂತದ ಪ್ರತಿಕ್ರಿಯೆಗಳು ಕಡಿಮೆಯಾಗುತ್ತವೆ. 30 ದಿನಗಳಲ್ಲಿ ಚರ್ಮವು ಸ್ವಾಭಾವಿಕವಾಗಿ ಹೈಡ್ರೇಟ್ ಆಗಿ, ಮೃದುವಾಗುತ್ತದೆ. ಮುಖ್ಯವಾಗಿ ಕೇಕ್, ಕೋಲ್ಡ್ ಡ್ರಿಂಕ್ಸ್, ಚಿಪ್ಸ್ ಬಿಡುವುದರಿಂದ ಚರ್ಮವು ತನ್ನ ಒಳಗಿನ ತೇವಾಂಶವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೆಚ್ಚು ಸಕ್ಕರೆ ಸೇವಿಸುವುದರಿಂದ ಚರ್ಮದಲ್ಲಿರುವ ಕೊಲಾಜೆನ್ ಹಾನಿಗೊಳಗಾಗುತ್ತದೆ. ಕೊಲಾಜೆನ್ ತನ್ನ ಶಕ್ತಿಯನ್ನು ಕಳೆದುಕೊಂಡಾಗ, ಚರ್ಮದ ಮೇಲೆ ಸುಕ್ಕುಗಳು ಮೂಡಲು ಪ್ರಾರಂಭಿಸುತ್ತವೆ. 30 ದಿನಗಳ ಕಾಲ ಜಂಕ್ ಫುಡ್ ಬಿಡುವುದರಿಂದ, ಕೊಲಾಜೆನ್ ಉತ್ಪಾದನೆಯು ಸರಿಯಾಗಿ ನಡೆಯುತ್ತದೆ. ಇದರಿಂದ ಚರ್ಮವು ಸ್ಥಿರವಾಗಿರುತ್ತದೆ, ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ಕಾಂತಿಯುತವಾಗಿ ಕಾಣುತ್ತದೆ.

ಜಂಕ್ ಫುಡ್‌ನಲ್ಲಿ ಸೋಡಿಯಂ, ಕೊಬ್ಬು ಮತ್ತು ಸಂಸ್ಕರಿಸಿದ ಪದಾರ್ಥಗಳು ಹೆಚ್ಚಾಗಿರುತ್ತವೆ. ಇದು ದೇಹದಲ್ಲಿ ವಾಟರ್ ರಿಟೆನ್ಶನ್ (ನೀರು ಉಳಿಯುವುದು), ಕಲ್ಮಶಗಳು ಮತ್ತು ಫೇಸ್ ಬ್ಲೋಟಿಂಗ್‌ಗೆ (ಮುಖ ಊದಿಕೊಳ್ಳುವುದು) ಕಾರಣವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, 30 ದಿನಗಳ ಕಾಲ ಜಂಕ್ ಫುಡ್ ಬಿಟ್ಟು, ಸರಿಯಾದ ಆಹಾರ ಸೇವಿಸುವುದರಿಂದ ಫೇಸ್ ಬ್ಲೋಟಿಂಗ್ ಕಡಿಮೆಯಾಗಿ ಮುಖವು ಸ್ಲಿಮ್ ಆಗಿ ಕಾಣಿಸುತ್ತದೆ. ಅಲ್ಲದೆ, ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಿರುವ ಆಹಾರ ಸೇವಿಸುವುದರಿಂದ ಚರ್ಮವು ಒಳಗಿನಿಂದ ಸುಧಾರಿಸುತ್ತದೆ.

ಜಂಕ್ ಫುಡ್‌ನಲ್ಲಿರುವ ಕೊಬ್ಬಿನ ಮತ್ತು ಸಂಸ್ಕರಿಸಿದ ಪದಾರ್ಥಗಳು ದೇಹದಲ್ಲಿನ ಆ್ಯಂಟಿ-ಆಕ್ಸಿಡೆಂಟ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಇದರಿಂದ ಚರ್ಮವು ಯುವಿ ಕಿರಣಗಳ (UV rays) ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತದೆ. 30 ದಿನಗಳ ಕಾಲ ಜಂಕ್ ಫುಡ್ ಬಿಟ್ಟು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿದರೆ, ಅವುಗಳಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ಚರ್ಮದ ರಿಕವರಿಗೆ ವೇಗ ನೀಡುತ್ತವೆ. ಇದರಿಂದ ಸನ್ ಡ್ಯಾಮೇಜ್ ಕಡಿಮೆಯಾಗಿ, ಚರ್ಮವು ತಾಜಾವಾಗಿ ಕಾಣುತ್ತದೆ.

ಚರ್ಮದಲ್ಲಿ ಕಾಣುವ ಈ ಸಣ್ಣಪುಟ್ಟ ಬದಲಾವಣೆಗಳು ಮಾನಸಿಕವಾಗಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತವೆ. 30 ದಿನಗಳ ಕಾಲ ಜಂಕ್ ಫುಡ್ ಬಿಟ್ಟರೆ, ಮುಖವು ಸ್ಪಷ್ಟವಾಗಿ ಹೊಳೆಯುತ್ತದೆ, ಚರ್ಮ ಆರೋಗ್ಯಕರವಾಗಿ ಕಾಣುತ್ತದೆ. ಇದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ಜಂಕ್ ಫುಡ್ ಬಿಡುವುದು ಕೇವಲ ಚರ್ಮದ ಆರೋಗ್ಯಕ್ಕೆ ಮಾತ್ರವಲ್ಲ, ಇಡೀ ದೇಹದ ಆರೋಗ್ಯಕ್ಕೂ ಒಳ್ಳೆಯದು.

Source link
ಇಷ್ಟೆಲ್ಲ ಬದಲಾವಣೆ ಆಗತ್ತೆ ಅಂತ ಗೊತ್ತಾದ್ರೆ Junk Food ಬಿಡ್ತೀರಾ! ಇದು 30 ದಿನದ ಚಾಲೆಂಜ್!