ಹುಬ್ಬಳ್ಳಿ, ಅಕ್ಟೋಬರ್ 27: ಅದು ಉತ್ತರ ಕರ್ನಾಟಕದ ಸುಪ್ರಸಿದ್ದ ಸರ್ಕಾರಿ ಆಸ್ಪತ್ರೆ. ಅಲ್ಲಿ ರೋಗಿಗಳಿಗೆ ಹೊರಗಿನಿಂದ ಮಾತ್ರ ಮತ್ತು ಇಂಜೆಕ್ಷನ್ (ಇಂಜೆಕ್ಷನ್) ಬರೆದುಕೊಡದಂತೆ ಸೂಚನೆ ಇದೆ. ಹೀಗಿದ್ದರೂ ಹೊರಗಿನ ಇಂಜೆಕ್ಷನ್ ತರುವಂತೆ ವೈದ್ಯರು ಹೇಳಿದ್ದರಂತೆ. ಹೀಗಾಗಿ ಸಾವು-ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಮಗಳಿಗಾಗಿ ತಂದೆ (ತಂದೆ) ಹತ್ತಾರು ಕಿ.ಮೀ ಓಡಿಸಿಕೊಂಡು ಹುಬ್ಬಳ್ಳಿಯಲ್ಲಿ ವಿವಿಧ ಮೆಡಿಕಲ್ ಗಳನ್ನು ಸುತ್ತುವರಿಯುತ್ತಿರುವ ಮನಕಲಕುವ ಘಟನೆ ನಡೆದಿದೆ.
ವೈದ್ಯರು ಆದೊಂದು ಮಾತಿಗೆ ರಾತ್ರಿ ವ್ಯಕ್ತಿ ಪಟ್ಟ ಪಡಿಪಾಟಲು ಕೇಳಿದರೆ ಶಾಕ್ ಆಗುತ್ತೀರಾ. ರಾತ್ರಿ ಸಮಯದಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ, ಒಂದು ಮೆಡಿಕಲ್ ಶಾಪ್ ನಿಂದ ಮತ್ತೊಂದು ಮೆಡಿಕಲ್ ಶಾಪ್ ಗೆ ವೈದ್ಯರು ಸುಸ್ತಾಗಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್‌ಗೆ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!
ಗದಗ ಜಿಲ್ಲೆಯ ನರಗುಂದ ನಿವಾಸಿ ದಾವಲಸಾಬ್ ಎಂಬವರ ಒಂದು ವರ್ಷದ ಪುತ್ರಿ ತಸ್ಮಿಯಾ ಮನೆ ಮುಂದೆ ಇದ್ದ ವಿಷಕಾರಿ ಗುಲಗಂಜಿ ಗಿಡದ ಎಲೆಗಳನ್ನು ತಿಂದಂತೆ. ಎಲೆಗಳನ್ನು ತಿಂದ ಮೇಲೆ ಬಾಲಕಿ ಅಸ್ವಸ್ಥಳಾಗಿದ್ದಳು. ಹೀಗಾಗಿ ಸ್ಥಳೀಯ ಪೋಷಕರು ಬಾಲಕಿಯನ್ನು ಕರೆದುಕೊಂಡು ಹೋಗಿದ್ದರಂತೆ. ಆದರೆ ಹೆಚ್ಚಿನ ತುರ್ತು ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಗೆ ಕರೆದುಕೊಂಡು ಹೋಗುವಂತೆ.
ವೈರಲ್ ಆಗಿರುವ ವಿಡಿಯೋ
ಅಕ್ಟೋಬರ್ 25 ರಂದು ರಾತ್ರಿ ಬಾಲಕಿಯನ್ನು ಕಿಮ್ಸ್ ಗೆ ಕರೆದುಕೊಂಡು ಬರಲಾಯಿತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು, ಬಾಲಕಿಗೆ ಪೈಸೋಗಮನ್ ಎಂಬ ಇಂಜೆಕ್ಷನ್ ಬೇಕು. ಅದು ಕಿಮ್ಸ್‌ನಲ್ಲಿ ಸಿಗುವುದಿಲ್ಲ, ಹೊರಗಡೆಯಿಂದ ತರುವಂತೆ ಹೇಳಿದರು. ವೈದ್ಯರ ಮಾತಿನ ಹಿನ್ನೆಲೆ ದಾವಲಸಾಬ್, ಮಧ್ಯರಾತ್ರಿ 12 ರಿಂದ 2 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧ ಖಾಸಗಿ ಆಸ್ಪತ್ರೆಯ ಮೆಡಿಕಲ್, ಬೇರೆ ಬೇರೆ ಮೆಡಿಕಲ್ ಶಾಪ್‌ಗಳಿಗೆ ಅಲೆದಾಡಿದ್ದಾರೆ. ಅಡ್ಡಾಡಲು ಬೈಕ್ ಕೂಡ ಇಲ್ಲದೇ ಹತ್ತಾರು ಕಿ.ಮೀ ನಡೆದುಕೊಂಡು, ಓಡಿಸಿಕೊಂಡು ಹೋಗಿದ್ದಾರೆ.
ವಿಡಿಯೋ ವೈರಲ್
ದಾವಲಸಾಬ್ ಓಡಿಸಿಕೊಂಡು ಹೋಗುವುದನ್ನು ಗಮನಿಸಿದ ಶ್ರೀಧರ್ ಎಂಬ ವ್ಯಕ್ತಿ, ದಾವಲಸಾಬ್ರನ್ನ ಮಾತನಾಡಿದ್ದಾರೆ. ಆಗ ಅವನು ತನ್ನ ಗೋಳನ್ನು ಹೇಳಿದ್ದಾನೆ. ಇದರ ವಿಡಿಯೋ ಕೂಡ ಮಾಡಿದ್ದು, ಸದ್ಯ ಎಲ್ಲಡೆ ವೈರಲ್ ಆಗಿದೆ. ಇನ್ನು ಸ್ವತ ಶ್ರೀಧರ್, ದಾವಲಸಾಬ್ ಅವರ ಬೈಕ್ ಮೇಲೆ ಹತ್ತಿಕೊಂಡು ಅನೇಕ ಮೆಡಿಕಲ್ ಶಾಪ್‌ಗೆ ತೆರಳಿದರೂ ಎಲ್ಲಿಯೂ ಪೈಸೋಸ್ಟಿಗಮನ್ ಇಂಜೆಕ್ಷನ್ ಸಿಕ್ಕಿಲ್ಲ. ಹೀಗಾಗಿ ಪೈಸೋಸ್ಟಿಗಮನ್‌ಗೆ ಪರ್ಯಾಯವಾಗಿರುವ ನಿಯೋಸ್ಟಿಗಮನ್ ಇಂಜೆಕ್ಷನ್ ವೈದ್ಯರು ನೀಡಿದ್ದು, ಬಾಲಕಿ, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪ ಅಲ್ಲಗಳೆದ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಿಮ್ಸ್ ವೈದ್ಯರು, ಬಾಲಕರಿಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, ಪೈಸೋಸ್ಟಿಮನ್ ಇಂಜೆಕ್ಷನ್, ನಮ್ಮ ಔಷಧಗಳ ಸಂಗ್ರಹಣೆಯಲ್ಲಿಲ್ಲ. ಅದಕ್ಕೆ ಪರ್ಯಾಯವಾಗಿ ನಿಯೋಸ್ಟಿಗಮನ್ ಇಂಜೆಕ್ಷನ್ ಇದ್ದು, ಅದು ಸ್ಟಾಕ್ ಇದೆ. ಅದನ್ನು ನೀಡಲಾಗಿದೆ. ಆದರೆ ನಾವು ಬಾಲಕಿ ಸಂಬಂಧಿಗೆ ಹೊರಗಿನಿಂದ ಇಂಜೆಕ್ಷನ್ ತರುವಂತೆ ಹೇಳಿರಲಿಲ್ಲ.
ನಮ್ಮ ವೈದ್ಯರು ಈ ಇಂಜೆಕ್ಷನ್ ನೀಡಿದರೆ ಬೇಗ ಗುಣಮುಖಳಾಗುತ್ತಾಳೆ ಅಂತ ಹೇಳಿ, ಅವರೇ ಗೂಗಲ್ ನಲ್ಲಿ ಡೌನಲೋಡ್ ಮಾಡಿಕೊಂಡಿದ್ದಾರೆ. ಅವರಿಗೆ ನಮ್ಮ ಸಿಬ್ಬಂದಿ ಸಹಾಯ ಕೂಡ ಮಾಡಿದ್ದಾರೆ. ಆದರೆ ನಾವಾಗಿಯೇ ಇಂಜೆಕ್ಷನ್ ತರುವಂತೆ ಹೇಳಿಲ್ಲ.
ಇದನ್ನೂ ಓದಿ: ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಶ್ರೀಗಂಧ ಕಳ್ಳಸಾಗಣೆ ಮಾಡ್ತಿದ್ದವರು ಬೆಂಗಳೂರು ಲಾಕ್: ಚೀನಾಗೆ ಸಾಗಿಸಲಾಗಿದ್ದ 750 ಕೆಜಿ ಶ್ರೀಗಂಧ ವಶ
ಸದ್ಯ ದಾವಲಸಾಬ್ ಇಂಜೆಕ್ಷನ್ ಗಾಗಿ ಮಧ್ಯರಾತ್ರಿ ಪರದಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಮ್ಸ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಕಿಮ್ಸ್ ನವರು ಮಾತ್ರ ಆರೋಪ ಮಾಡುತ್ತಿದ್ದಾರೆ. ಆದರೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅದರಲ್ಲಿ ಮಾತ್ರ ಮತ್ತು ಇಂಜೆಕ್ಷನ್‌ಗಳನ್ನು ಹೊರಗೆ ಬರೆದುಕೊಡುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇನ್ನಾದರೂ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.