ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಕೇಸ್: ಡಿಸಿಪಿ ಹೇಳಿದ್ದಿಷ್ಟು

ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಕೇಸ್: ಡಿಸಿಪಿ ಹೇಳಿದ್ದಿಷ್ಟು


ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಪ್ರಕರಣ: ಡಿಸಿಪಿ ಹೇಳಿದ್ದಿಷ್ಟು

ಆನೇಕಲ್, ಏಪ್ರಿಲ್ 05: ಗೋಣಿ ಚೀಲದಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದೆ, ತನ್ನ ಸ್ನೇಹಿತ ಸುನೀಲ್ ನನ್ನನ್ನು ಕೊಲೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸುನೀಲ್ ಕುಡಿದು ನಿತ್ಯ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿದ್ದಾರೆ. ಈ ವಿಷಯವನ್ನು ಸುನೀಲ್ ಪತ್ನಿ ಬಸುದೇವ್ ಮಲ್ಲಿಕ್ ಗೆ ತಿಳಿಸಿದ್ದಳು. ಸುನೀಲ್ ಪತ್ನಿಯ ಸಹಾನುಭೂತಿ ಗಳಿಸುವ ದುರುದ್ದೇಶದಿಂದ ಬಸುದೇವ್, ಸುನೀಲ್‌ನನ್ನು ಕಂಠಪೂರ್ತಿ ಕುಡಿಸಿ ಬಳಿಕ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಆರೋಪಿ ತನ್ನ ತಪ್ಪನ್ನು ಒಪ್ಪಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *