ವಿನಯ್ ರಾಜ್ ಕುಮಾರ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ‘ಅಂದಿತ್ತು ಕಾಲ’ ಸಿನಿಮಾ ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಗಮನ ಸೆಳೆಯಿತು. ಹೆಸರಿನಂತೆ ಕೆಲ ಹಿಂದಿನ ಕಥೆ ಈ ಸಿನಿಮಾ ಇದೆ.
ಕನ್ನಡದ ನಿರ್ದೇಶಕ ಎ ಹರ್ಷ ನಿರ್ದೇಶನ ಮಾಡಿರುವ ಮೊದಲ ಹಿಂದಿ ಸಿನಿಮಾ ‘ಭಾಗಿ 4’ ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡಿತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಈ ಸಿನಿಮಾ ಈ ವಾರ ಸ್ಟ್ರೀಮಿಂಗ್ ಶುರುವಾಗಿದೆ.
ಇತ್ತೀಚೆಗೆ ತೆರೆಕಂಡ ಕನ್ನಡ ಸಿನಿಮಾಗಳಲ್ಲಿ ಒಂದು ಒಳ್ಳೆಯ ಸಿನಿಮಾ ಎಂದರೆ ‘ಏಳುಮಲೆ’. ತರುಣ್ ಸುಧೀರ್ ನಿರ್ಮಾಣ ಮಾಡಿ ಪುನೀತ್ ರಂಗಸ್ವಾಮಿ ನಿರ್ದೇಶಿಸಿರುವ ಸಿನಿಮಾದಲ್ಲಿ ರಾಣಾ ನಾಯಕ. ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಯಿತು. ಇದೀಗ ಸಿನಿಮಾ ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಫೈನಲ್ ಡೆಸ್ಟಿನೇಷನ್: ಬ್ಲಡ್ ಲೈನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಫೈನಲ್ ಡೆಸ್ಟಿನೇಷನ್: ಬ್ಲಡ್ಲೈನ್’ ಸಿನಿಮಾ ಜಿಯೋ ಹಾಟ್ಸ್ಟಾರ್ ಒಟಿಟಿಗೆ ಬಂದಿದೆ.
ತೆಲುಗಿನ ‘ಕಿಷ್ಕಿಂಧಾಪುರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ಅನುಪಮಾ ಪರಮೇಶ್ವರನ್ ಅವರು ನಟಿಸಿರುವ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸಿನಿಮಾ ಇದೀಗ ಜೀ5 ನಲ್ಲಿ ವೀಕ್ಷಣೆಗೆ ಬಂದಿದೆ.
ಹೊಸದಾಗಿ ಮದುವೆ ಆಗಿರುವ ಸವದೇವನ್ ಎಂಬಾತ ಪತ್ನಿ ಹಾಕಿರುವ ಸುಳ್ಳು ದೌರ್ಜನ್ಯ ಮತ್ತು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಆತ ಹೊರಗೆ ಬರುತ್ತಾನೆ ಎಂಬುದು ಸಿನಿಮಾದ ಕತೆ. ಈ ಸಿನಿಮಾ ಈಗ ಜೀ5 ನಲ್ಲಿ ವೀಕ್ಷಣೆಗೆ ಬಂದಿದೆ.
ವಿದೇಶದಿಂದ ಆಸ್ಕರ್ ಗೆ ಕಳಿಸಲ್ಪಟ್ಟಿರುವ ಭಾರತದ ಸಿನಿಮಾ ‘ಸಂತೋಷ್’. ವಿಧವೆ ಯುವತಿಯಾಕೆ ಪತಿಯ ಪೊಲೀಸ್ ಉದ್ಯೋಗವನ್ನು ಹೊಂದಿರುವ ದಲಿತ ಯುವತಿಯ ಹತ್ಯೆ ಪ್ರಕರಣದ ತನಿಖೆಗೆ ಇಳಿಯುತ್ತಾಳೆ. ಇದೊಂದು ಅದ್ಭುತ ಸಿನಿಮಾ ಆಗಿದ್ದು ಸಿನಿಮಾವನ್ನು ಲಯನ್ಸ್ ಗೇಟ್ ಒಟಿಟಿಯಲ್ಲಿ ವೀಕ್ಷಿಸಲಾಗಿದೆ.






