Gold Rate in Pakistan: ಭಾರತದ ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಪ್ರಸ್ತುತ ಚಿನ್ನದ ಬೆಲೆ ಎಷ್ಟು? ಭಾರತದಲ್ಲೇ ಬೆಲೆ ಇಷ್ಟೊಂದಿರುವಾಗ,ಪಾಕಿಸ್ತಾನದಲ್ಲಿ ಎಷ್ಟಿರಬಹುದು ಅನ್ನೋದನ್ನು ನೀವು ಖಂಡಿತವಾಗಿಯೂ ಯೋಚಿಸಿರಬಹುದು. ಹೌದು, ಅಲ್ಲಿನ ಬೆಲೆ ಕೇಳಿದ್ರೆ ಖಂಡಿತವಾಗಿಯೂ ತಲೆ ಗಿರ್ ಎನ್ನುತ್ತೆ.

ಭಾರತ ಮತ್ತು ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ತೀವ್ರವಾಗಿ ಏರಿವೆ.ಪ್ರತಿದಿನ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾದ ನಂತರ, ಚಿನ್ನದ ಬೆಲೆಗಳು ಈಗ ಸ್ವಲ್ಪಮಟ್ಟಿಗೆ ಕಡಿಮೆಯಾಗಿವೆ ಮತ್ತು ಬೆಲೆಗಳು ಕುಸಿದಿವೆ. ಆದರೆ ನಮ್ಮ ದೇಶದಲ್ಲೇ ಚಿನ್ನದ ಬೆಲೆ ಇಷ್ಟೊಂದು ಇರುವಾಗ, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು ಅಲ್ವಾ?

ಚಿನ್ನದ ಬೆಲೆಗಳು ಗಗನಕ್ಕೇರುತ್ತಿರುವ ನಡುವೆ, ಪಾಕಿಸ್ತಾನದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿರಬೇಕು. ಪಾಕಿಸ್ತಾನದಲ್ಲಿ ಪ್ರಸ್ತುತ ಚಿನ್ನದ ಬೆಲೆ ಎಷ್ಟು ಇರಬಹುದು ಎಂದು. ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿದೆ ನೋಡಿ ಮಾಹಿತಿ. ಇಂದು ಪಾಕಿಸ್ತಾನದಲ್ಲಿ ಕೇವಲ ಒಂದು ಗ್ರಾಂ ಚಿನ್ನದ ಬೆಲೆ ಕೇಳಿದರೆ ನಿಮ್ಮ ತಲೆ ತಿರುಗೋದು ಖಂಡಿತಾ. ಯಾಕಂದ್ರೆ ಪಾಕಿಸ್ತಾನದಲ್ಲಿ ಕೇವಲ ಒಂದು ಗ್ರಾಂ ಚಿನ್ನದ ಬೆಲೆ 40,000 ರೂಪಾಯಿಗಳಿಗಿಂತ ಹೆಚ್ಚು.

ಪಾಕಿಸ್ತಾನದಲ್ಲಿ 24 ಕ್ಯಾರೆಟ್ ಚಿನ್ನದ ಇತ್ತೀಚಿನ ಬೆಲೆ ಪ್ರತಿ ಗ್ರಾಂಗೆ PKR 44,098 ರಷ್ಟಿದೆ. ಸ್ಥಳೀಯ ಮಾರುಕಟ್ಟೆಗಳ ಪ್ರಕಾರ, ಹಲವಾರು ನಗರಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ.

ಪಾಕಿಸ್ತಾನದಲ್ಲಿ ವ್ಯವಹಾರ ಮಾಹಿತಿಯನ್ನು ಒದಗಿಸುವ ಹಮರಿವೆಬ್ ವೆಬ್ಸೈಟ್ ನಲ್ಲಿ, ಪಾಕ್ ನ ಚಿನ್ನದ ಕುರಿತಾದ ಮಾಹಿತಿ ಕೂಡ ಇದೆ. ಪಾಕಿಸ್ತಾನದಲ್ಲಿ 24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ PKR 440,983 ನಲ್ಲಿ ವಹಿವಾಟು ನಡೆಸುತ್ತಿದೆ ಎಂದು ವರದಿ ಮಾಡಿದೆ.

ವೆಬ್ಸೈಟ್ ಪ್ರಕಾರ, ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯೂ ಗಗನಕ್ಕೇರಿದೆ. ದೇಶಾದ್ಯಂತ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಸುಮಾರು ₹404,235 ಆಗಿದೆ. ಇನ್ನು ಪಕಿಸ್ತಾನದಲ್ಲಿ 20 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ PKR 367,486 ಎಂದು ಡೇಟಾ ತೋರಿಸುತ್ತದೆ.

ಅಂತರರಾಷ್ಟ್ರೀಯ ಬೆಳ್ಳಿ ಮಾರುಕಟ್ಟೆಯಲ್ಲಿನ ಏರಿಕೆ, ಪಾಕಿಸ್ತಾನದ ರೂಪಾಯಿ ದುರ್ಬಲತೆ ಮತ್ತು ಹಣದುಬ್ಬರದಿಂದಾಗಿ ಪಾಕಿಸ್ತಾನದಲ್ಲಿ ಚಿನ್ನದ ಬೆಲೆಗಳು ಹೆಚ್ಚಿವೆ. ಆದರೆ ಭಾರತದ ಕರೆನ್ಸಿಗೆ ಹೋಲಿಕೆ ಮಾಡಿದ್ರೆ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕಡಿಮೆಯೇ ಇದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 2,30,968 ರೂಪಾಯಿಗಳಿವೆ.

Source link
Gold Rate: ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದ್ರೆ ತಲೆ ಗಿರ್ ಎನ್ನುತ್ತೆ! 1 ಗ್ರಾಂಗೆ ಇಷ್ಟೊಂದ?