ಕರ್ಣ ಧಾರಾವಾಹಿಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವ ದೃಶ್ಯವನ್ನು ತೋರಿಸಿದ್ದಕ್ಕೆ ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿವಾದದ ನಡುವೆಯೇ, ಜೈಲು ಪಾಲಾದ ಕರ್ಣನನ್ನು ರಕ್ಷಿಸಲು ಬೇರೆ ಸೀರಿಯಲ್ಗಳ ನಾಯಕಿಯರು ಎಂಟ್ರಿ ಕೊಟ್ಟಿದ್ದು, ಕಥೆ ರೋಚಕ ತಿರುವು ಪಡೆದಿದೆ.
ಕರ್ಣ ಸೀರಿಯಲ್ (Karna Serial) ವಿರುದ್ಧ ಇದೀಗ ವೀಕ್ಷಕರ ಆಕ್ರೋಶ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ, ಅಗತ್ಯಕ್ಕಿಂತ ಹೆಚ್ಚಾಗಿ ಒಳ್ಳೆಯವನಾಗಿರುವ ನಾಯಕ ಕರ್ಣ ಜೈಲಿಗೆ ಹೋದ ಅಂತಲ್ಲ, ಬದಲಿಗೆ ರೋಗಿಗಳ ಜೊತೆ ಚೆಲ್ಲಾಟ ಆಡುವಂಥ ದೃಶ್ಯಗಳನ್ನು ಪ್ರಸಾರ ಮಾಡಿರುವುದಕ್ಕಾಗಿ.

ಕರ್ಣನ ಮೇಲೆ ದ್ವೇಷ ಸಾಧಿಸಲು ವಿಲನ್ಗಳಾದ ರಮೇಶ್, ನಯನತಾರಾ ಎಲ್ಲರೂ ಸೇರಿ ಡೇಟ್ ಬಾರ್ ಆಗಿರುವಂಥ ಮೆಡಿಸಿನ್ ಇಟ್ಟರು. ಅದಕ್ಕಾಗಿ ಅವರಿಗೆ ಆಸ್ಪತ್ರೆಯಲ್ಲಿಯೇ ಇರುವ ಒಬ್ಬ ಆಸಾಮಿ ಸಹಾಯ ಮಾಡಿದ. ಇದರಿಂದಾಗಿ ಮಹಿಳೆಯರು, ಮಕ್ಕಳು ಜೀವ ಕಳೆದುಕೊಳ್ಳುವ ದೃಶ್ಯವನ್ನು ಸೀರಿಯಲ್ನಲ್ಲಿ ತೋರಿಸಲಾಯಿತು.

ಇದೇನೋ ಸೀರಿಯಲ್. ಕಥೆ ಮುಂದೆ ಹೋಗಬೇಕು ಅಷ್ಟೇ. ಆದರೆ ಆಸ್ಪತ್ರೆಗಳ ಮೇಲೆ ಹಲವರು ವಿಶ್ವಾಸ ಇಟ್ಟಿರುತ್ತಾರೆ. ಆದರೆ ಯಾರದ್ದೋ ವೈಯಕ್ತಿಕ ಕಾರಣಗಳಿಂದ ಆಸ್ಪತ್ರೆಗಳಲ್ಲಿಯೂ ಈ ರೀತಿ ಆಗಲು ಸಾಧ್ಯ ಎನ್ನುವುದನ್ನು ನೆನಪಿಸಿಕೊಂಡೇ ಹಲವರು ಕಮೆಂಟ್ನಲ್ಲಿ ಹಿಗ್ಗಾ ಮುಗ್ಗ ಬೈಯುತ್ತಿದ್ದಾರೆ.

ಈಗ ಸೀರಿಯಲ್ ಅನ್ನು ರೋಮಾಂಚನಗೊಳಿಸಲು ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್ಗಳ ನಾಯಕಿಯರು ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

ಆದರೆ, ನಿಜ ಜೀವನದಲ್ಲಿ ಇವರನ್ನೇ ಕರೆಸ್ತೀರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕುತಂತ್ರಗಳು ಮಾಡುವುದು ಸಿನಿಮಾ, ಸೀರಿಯಲ್ ಎಲ್ಲವುಗಳ ಒಂದು ಭಾಗ ನಿಜ. ಆದರೆ ಧಾರಾವಾಹಿಗಳನ್ನು ಭಕ್ತಿಯಿಂದ ನೋಡುವ, ಅವುಗಳಲ್ಲಿನ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಳ್ಳುವ ದೊಡ್ಡ ವರ್ಗವೇ ಇರುವಾಗ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವಂಥ ದೃಶ್ಯ ಮಾಡಿರುವುದಕ್ಕೆ ಸಿಕ್ಕಾಪಟ್ಟೆ ಜನರು ಬೈಯುತ್ತಿದ್ದಾರೆ.

ನಾಯಕನ ಅತಿಯಾದ ಒಳ್ಳೆಯತನ, ವಿಲನ್ಗಳ ಅತಿಯಾದ ಕ್ರೂರತನ ಎಲ್ಲವೂ ಅತಿಯಾಗಿ ತೋರಿಸುವುದು ಬಹುತೇಕ ಸೀರಿಯಲ್ಗಳಲ್ಲಿ ಮಾಮೂಲಾಗಿದ್ದರೂ ಇಂಥ ಸೂಕ್ಷ್ಮ ವಿಷಯ ಬಂದಾಗ ಈ ರೀತಿ ದೃಶ್ಯಗಳನ್ನು ತೋರಿಸಬಾರದು ಎನ್ನುವುದು ಹಲವರ ಕಳಕಳಿ

Source link
Karna ಕಾಪಾಡಲು ಹೀರೊಯಿನ್ಸ್ ಕರೆಸಿದ್ರಿ: ನೀವ್ ಕೊಟ್ಟ ಟಿಪ್ಸ್ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ