Headlines

ಲೈಂಗಿಕ ದೌರ್ಜನ್ಯ ಪ್ರಕರಣ: ಸಾಧು ಕೋಕಿಲ, ಮಂಡ್ಯ ರಮೇಶ್​ಗೆ ಬಿಗ್ ರಿಲೀಫ್

ಲೈಂಗಿಕ ದೌರ್ಜನ್ಯ ಪ್ರಕರಣ: ಸಾಧು ಕೋಕಿಲ, ಮಂಡ್ಯ ರಮೇಶ್​ಗೆ ಬಿಗ್ ರಿಲೀಫ್


ಕನ್ನಡ ಚಿತ್ರರಂಗದ (ಸ್ಯಾಂಡಲ್ವುಡ್) ಜನಪ್ರಿಯ, ಸಂಗೀತ ನಿರ್ದೇಶಕ ಮತ್ತು ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲಾ ಮತ್ತು ನಟ ಮಂಡ್ಯ ರಮೇಶ್ ವಿರುದ್ಧ ಮಾಡಲಾಗಿದ್ದ ದೌರ್ಜನ್ಯ ಪ್ರಕರಣದಲ್ಲಿ ಇಬ್ಬರಿಗೂ ನಟರಿಗೆ ಬಿಗ್ ರಿಲೀಫ್ ನೀಡಲಾಗಿದೆ. 2017 ರಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ರದ್ದು ಮಾಡಿ ಆದೇಶ ನೀಡಿದೆ.

2017 ರಲ್ಲಿ ಸಾಧು ಕೋಕಿಲ ಮತ್ತು ನಟ ಮಂಡ್ಯ ರಮೇಶ್ ಅವರು ಮೈಸೂರಿನ ಪಾರ್ಲಿಮೆಂಟ್ ಒಂದರಲ್ಲಿ ಮಡಿಸಿಕೊಂಡ ಬಳಿಕ, ಅಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಇಬ್ಬರು ನಟರು ತಮಗೆ ಕಿರುಕುಳ ನೀಡಿ ಆರೋಪಿಸಿ ಮೈಸೂರು ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ನಟರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನಟರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು, ಬಳಿಕ 2019 ರಲ್ಲಿ ಪ್ರಕರಣದ ವಿಚಾರಣೆಗೆ ತಡೆ ನೀಡಲಾಗಿತ್ತು.

ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಮರಳಿ ಬಂದ ‘ಯಾರೇ ನೀನು ಚೆಲುವೆ’ ಹೀರೋಯಿನ್ ಸಂಗೀತಾ

ಎಫ್‌ಐಆರ್‌ನಲ್ಲಿ ಹೆಸರಿಲ್ಲ, ಹಾಗೂ ಆರೋಪಕ್ಕೆ ಸಾಕ್ಷ್ಯಗಳಿಲ್ಲ ಎಂದು ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲ ಪರವಾಗಿ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ವಾದ ಮಂಡಿಸಿದ್ದರು. ಅದರಂತೆ ಸೂಕ್ತ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಪ್ರಕರಣವನ್ನು ರದ್ದುಗೊಳಿಸಲಾಗಿದೆ. ನ್ಯಾಯಮೂರ್ತಿ ಎಂಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶವನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *