Headlines

ಹೋಟೆಲ್​ಗಳಲ್ಲೂ ಇಂಡಕ್ಷನ್ ಸ್ಟವ್​ಗೆ ಸಖತ್ ಡಿಮಾಂಡ್: ಪೀಣ್ಯ ಇಂಡಸ್ಟ್ರೀಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓವರ್ ಟೈಂ ಡ್ಯೂಟಿ!

ಹೋಟೆಲ್​ಗಳಲ್ಲೂ ಇಂಡಕ್ಷನ್ ಸ್ಟವ್​ಗೆ ಸಖತ್ ಡಿಮಾಂಡ್: ಪೀಣ್ಯ ಇಂಡಸ್ಟ್ರೀಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓವರ್ ಟೈಂ ಡ್ಯೂಟಿ!


ಹೋಟೆಲ್‌ನಲ್ಲಿ ಇಂಡಕ್ಷನ್ ಸ್ಟಾವ್‌ಗೆ ಸಖತ್ ಡಿಮಾಂಡ್: ಪೀಣ್ಯ ಇಂಡಸ್ಟ್ರೀಲಿ ಉತ್ಪಾದನೆ, ಸಿಬ್ಬಂದಿಗೆ ಟೈಂ ಡ್ಯೂಟಿ!

ಬೆಂಗಳೂರು, ಏಪ್ರಿಲ್ 7: ಇಸ್ರೇಲ್, ಇರಾನ್, ಅಮೆರಿಕ ಸೇನಾ ಸಂಘರ್ಷದ ನಂತರ ಉಂಟಾದ ಗ್ಯಾಸ್ ಕೊರತೆಯಿಂದಾಗಿ, ವಾಣಿಜ್ಯ ಮತ್ತು ಗೃಹಬಳಕೆಯ ಇಂಡಕ್ಷನ್ ಸ್ಟಾವ್ಗಳ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹಿಂದೆ ಕೇವಲ 40 ವಾಣಿಜ್ಯ ಇಂಡಕ್ಷನ್ ಸ್ಟಾವ್ಗಳಿಗೆ ಬೇಡಿಕೆ ಇದ್ದರೆ, ಈಗ ಅದು 200ಕ್ಕೆ ಏರಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಟಾರ್ ಹೋಟೆಲ್‌ಗಳು ಗ್ಯಾಸ್‌ಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಒಲೆಗಳತ್ತ ಮುಖ ಮಾಡಿವೆ. ಪೀಣ್ಯ ಉದ್ಯಮದಲ್ಲಿ ತಯಾರಕರು ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಮಿಕರ ಕೊರತೆಯ ನಡುವೆಯೂ ಉತ್ಪಾದನೆಯನ್ನು ಹೆಚ್ಚಿಸಲು ಶಿಫ್ಟ್‌ಗಳನ್ನು ವಿಸ್ತರಿಸಲಾಗುತ್ತಿದೆ. ಗೃಹಬಳಕೆದಾರರಲ್ಲಿಯೂ ಇಂಡಕ್ಷನ್ ಸ್ಟವ್ಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಿಂದೆ ಒಂದು ದಿನಕ್ಕೆ ಅಥವಾ ಎರಡು ಸ್ಟವ್ಗಳು ಮಾರಾಟವಾಗುತ್ತಿವೆ, ಈಗ ಅದು 15-20ಕ್ಕೆ ಏರಿದೆ. ಪೂರೈಕೆ ಕೊರತೆಯಿಂದಾಗಿ ಅಗತ್ಯವಿರುವ ಎಲ್ಲಾ ಮಾದರಿಗಳು ಲಭ್ಯವಾಗುತ್ತಿಲ್ಲ. ಕಂಪನಿಗಳಿಂದ ಸ್ಟಾಕ್ ಪಡೆಯುವುದು ಕೂಡ ಮಾರಾಟಗಾರರಿಗೆ ಸವಾಲಾಗಿದೆ.

ವರದಿ: ಈರಣ್ಣ, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *