ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?


ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ಜನವರಿ 22: ಇರಾನ್ ಯುದ್ಧದ ಪರಿಣಾಮ ಹಲವಾರು ಕ್ಷೇತ್ರಗಳ ಮೇಲೆ ಆಗುತ್ತಿದೆ. ವಿಮಾನಯಾನ ಸೆಕ್ಟರ್ (ಏವಿಯೇಷನ್ ​​ಸೆಕ್ಟರ್) ಮೇಲೂ ಪರಿಣಾಮವಾಗುತ್ತಿದೆ. ಮುಂಬರುವ ತಿಂಗಳಿನಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ. ವಿಮಾನಗಳಿಗೆ ಬಳಸುವ ಎಟಿಎಫ್ (ಎಟಿಎಫ್- ಏವಿಯೇಷನ್ ​​ಟರ್ಬೈನ್ ಇಂಧನ) ಅಥವಾ ಜೆಟ್ ಫ್ಯೂಯೆಲ್ಗಳ ಬೆಲೆ ಪ್ರತೀ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಆಗುತ್ತದೆ. ಈ ಬಾರಿ, ಏಪ್ರಿಲ್ 1 ರಂದು ಇಟಿಎಫ್ ಬೆಲೆ ಸಿಕ್ಕಾಪಟ್ಟೆ ಏರುವ ಸಾಧ್ಯತೆ ಇದೆ. ಇದು ಹೆಚ್ಚಾದರೆ ವಿಮಾನ ಪ್ರಯಾಣದ ಟಿಕೆಟ್ ದರ ಗಣನೀಯವಾಗಿ ಹೆಚ್ಚಬಹುದು.

ಸರ್ಕಾರದಿಂದ ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ

ದೇಶೀಯ ವಿಮಾನ ಹಾರಾಟದಲ್ಲಿ ಟಿಕೆಟ್ ದರಗಳಿಗೆ ಸರ್ಕಾರ ಮಿತಿ ಹಾಕಿತ್ತು. ಈ ಮಿತಿಗಿಂತ ಹೆಚ್ಚಿನ ದರ ವಿಧಿಸಬೇಕಾದರೆ ವಿಮಾನ ಕಂಪನಿಗಳು ಸರ್ಕಾರದ ಅನುಮತಿ ಕೇಳಬೇಕಿತ್ತು. ಮೊನ್ನೆ ಸರ್ಕಾರ ಈ ವಿಮಾನ ಪ್ರಯಾಣ ದರದ ಮಿತಿಯನ್ನು ಹಿಂಪಡೆದುಕೊಂಡಿದೆ. ಇದರೊಂದಿಗೆ ವಿಮಾನ ಸಂಸ್ಥೆಗಳ ಅನುಮೋದನೆ ಇಲ್ಲದೇ ಟಿಕೆಟ್ ದರ ಏರಿಸಲು ಸಾಧ್ಯ.

ಇದನ್ನೂ ಓದಿ: ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25% ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ಹೀಗಾಗಿ, ವಿಮಾನ ಪ್ರಯಾಣ ಸಂಸ್ಥೆಗಳಿಗೆ ಇಂಧನದ ಬೆಲೆಗೆ ಅನುಗುಣವಾಗಿ ಮುಕ್ತವಾಗಿ ಬೆಲೆ ಪರಿಷ್ಕರಣೆ ಮಾಡಬಹುದು. ಈ ಏಪ್ರಿಲ್‌ನಲ್ಲಿ ಇಂಧನ ಇಂಧನದ ಬೆಲೆ ಸಾಕಷ್ಟು ಹೆಚ್ಚಾಗುವುದರಿಂದ, ಟಿಕೆಟ್ ದರಗಳು ಸಹಜವಾಗಿ ಏರಿಕೆಯಾಗಬಹುದು.

ಇದೆ ವೇಳೆ, ಏರ್ ಇಂಡಿಯಾ, ಆಕಾಶ ವಿಮಾನ ಸಂಸ್ಥೆಗಳು ಫ್ಯುಯೆಲ್ ಸರ್ಚಾರ್ಜ್ ಅನ್ನು ಏರಿಸಿವೆ. ಇದು ಟಿಕೆಟ್ ಬುಕಿಂಗ್‌ಗಳಿಗೆ ಅನ್ವಯವಾಗುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *