ತುಮಕೂರು, (ಡಿಸೆಂಬರ್ 04): ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಕೆರೆ ಗ್ರಾಮದ (ಹಿಂದಿಸ್‌ಗೆರೆ ಗ್ರಾಮ) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣ (ಮಂಜುಳ ಕೊಲೆ ಪ್ರಕರಣ) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 1 ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ನಡೆಸಿದ ಕಾರ್ಯಚರಣೆ ನಡೆಸಿ ಹಂತಕ ಮಧುನನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ವಿಶೇಷ ಅಂದ್ರೆ ಪೊಲೀಸರೇ ಹೋಗಿ ಬಂಧಿಸಿಲ್ಲ. ಬಸ್ ಚಾಲಕನಿಂದ ಆರೋಪಿಯನ್ನು ಲಾಕ್ ಮಾಡಿದ್ದಾರೆ. ಹಾಗದ್ರೆ, ಹಂತಕ ಮಧು ಎಲ್ಲಿಗೆ ಹೊರಟ್ಟಿದ್ದ? ಹೇಗೆ ಸಿಕ್ಕಿಬಿದ್ದಿರುವ ಮಾಹಿತಿಯನ್ನು ಎಸ್ಪಿಯವರು ಬಿಚ್ಚಿಟ್ಟಿದ್ದಾರೆ.