Headlines

ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ

ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ


ಚಿತ್ರದುರ್ಗ, ಫೆಬ್ರವರಿ 25): ಮೊಬೈಲ್ ಬಾಕ್ಸ್ ಗಾರ್ಡ್ ವಿಚಾರವಾಗಿ ಮೊಬೈಲ್ ಅಂಗಡಿ (ಮೊಬೈಲ್ ಅಂಗಡಿ) ಮಾಲೀಕ ಹಾಗೂ ಅನ್ಯಕೋಮಿನ ಯುವಕ ನಡೆದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಕೊನೆಗೆ ಯುವಕ, ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ಚಿತ್ರದುರ್ಗ (ಚಿತ್ರದೃಗ) ನಗರದ ಸಂತೆ ಮೈದಾನದಲ್ಲಿ ನಡೆದಿದೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ, ಅಂಗಡಿ ಮಾಲೀಕ ವಿಕ್ರಮ್ ಚೌದ್ರಿಗೆ ಚಾಕು ಇದ್ದಿದ್ದಾನೆ. ಯುವಕ ಚಾಕು ಇರಿಯುತ್ತಿರುವ ದೃಶ್ಯ ಸಿಸಿಟಿ ಕ್ಯಾಮೆರಾದಲ್ಲಿ ಸೆರೆ ಹಿಡಿದ, ಸದ್ಯ ವಿಕ್ರಮ್ ಚೌದ್ರಿ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗದೆ. ಇನ್ನು ಈ ವಿಚಾರ ತಿಳಿಯದಂತೆ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಮೊಬೈಲ್ ಬಾಕ್ಸ್ ಗಾರ್ಡ್ ವಿಚಾರಕ್ಕೆ ನಡೆದ ಗಲಾಟೆ ಇದೀಗ ಕೋಮು ಸಂಘರ್ಷಕ್ಕೆ ತಿರುಗಿದ್ದು, ಯಾವುದೇ ಅಹಿತ ಘಟನೆಗಳು ಆಗದರಿಂದ ಪೊಲೀಸರು ಹೈಲರ್ಟ್ ಆಗಿದ್ದಾರೆ.

ವಿಕ್ರಮ್‌ ಚೌದ್ರಿ ಎಂಬವರ ಅಂಗಡಿಗೆ ಯುವಕನೊಬ್ಬ ಮೊಬೈಲ್‌ ತೆರೆಯಲು ಖರೀದಿಸಿದ್ದ. ಆದರೆ ಅದೇನಾಯ್ತೋ ಏನು ಯವಕ, ಈ ಪಾರ್ಕ್ ಗಾರ್ಡ್ ಬೇಡ ಬೇರೆಯದ್ದು ಕೊಡಿ ಎಂದಿದ್ದಾನೆ. ಈ ವೇಳೆ ಮೊಬೈಲ್ ಅಂಗಡಿಯ ಮಾಲೀಕ ವಿಕ್ರಮ್ ಚೌದ್ರಿ, ಬೇರೆ ಬ್ರ್ಯಾಂಡ್‌ಗೆ ಹೆಚ್ಚುವರಿ ಹಣವನ್ನು ಕೇಳಿದ್ದಾರೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ, ವಿಕ್ರಮ್ ಜೊತೆ ಜಗಳ ತೆಗೆದಿದ್ದಾನೆ. ಬಳಿಕ ಗಲಾಟೆ ಕೈಕೈ ಮಿಲಸಾಯಿಸುವ ಹಂತಕ್ಕೆ ಯುವಕ ಹೋಗಿದ್ದು, ಕೊನೆಗೆ ಚಾಕುವಿನಿಂದ ವಿಕ್ರಮ್ ಇದ್ದಿದ್ದಾನೆ. ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಇರುವ ಮೊಬೈಲ್ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಅವರ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ಕಲ್ಲು ತೂರಾಟದ ಕಾವು ಆರುವ ಮುನ್ನವೇ ಜಾಲತಾಣದಲ್ಲಿ ಮುಸ್ಲಿಂ ಯುವಕರಿಂದ ವಿವಾದಾತ್ಮಕ ಪೋಸ್ಟ್

ಈ ವಿಚಾರ ತಿಳಿದ ಕೂಡಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಿಕ್ರಮ್ ಚೌದ್ರಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಚಾಕು ಇರಿಯಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ರಸ್ತೆ ಬಂದ್ ಮಾಡಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಆರೋಪಿಯನ್ನು ಬಂಧಿಸದೇ ಇದ್ದರೆ ನಾಳೆ (ಫೆಬ್ರವರಿ 26) ಚಿತ್ರದುರ್ಗ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನು ಈ ಪ್ರಕರಣ ಕೋಮು ಸಂಘರ್ಷಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆ ಆರೋಗ್ಯ ಜಿಲ್ಲಾಸ್ಪತ್ರೆಗೆ ಎಸ್ಪಿ ರಂಜಿತ್ ಬಂಡಾರು ದೌಡಾಯಿಸಿ ಗಾಯಾಳು ವಿಕ್ರಮ ಚೌದರಿ ವಿಚಾರಿಸಿದರು. ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆದರೆ, ಈ ವೇಳೆ ಚಿತ್ರೀಕರಣಕ್ಕೆ ಹೋದ ಮಾಧ್ಯಮಗಳಿಗೆ ನಿರ್ಬಂಧಿಸಿರುವುದು ಹಲವು ಅನುಮಾನಗಳಿಗೆ ಕಾರಣ.

ಒಟ್ಟಿನಲ್ಲಿ ಒಂದು ಮೊಬೈಲ್ ಸ್ಕ್ರೀನ್ ಗಾರ್ಡ್ ಗಾಗಿ ನಡೆದ ಸಣ್ಣ ಗಲಾಟೆ ಇದೀಗ ಕೋಮು ಸಂಘರ್ಷದ ಹಂತಕ್ಕೆ ಹೋಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *