
ಮಧುಗಿರಿ 30:* ದೇಶ ಹಾಗೂ ರಾಜ್ಯದಲ್ಲಿ ಹಿಂದೂ ಧರ್ಮವನ್ನು ತಡೆಯುವ ಶಕ್ತಿಗೆ ಎಂದಿಗೂ ಯಶಸ್ಸು ಸಿಗಲ್ಲವೆಂದು ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಬಿಜೆಪಿ ಹಾಗೂ ಧರ್ಮಸ್ಥಳ ಸಂಘದ ಮಹಿಳಾ ಸದಸ್ಯರೊಂದಿಗೆ ನಡೆಸಲಾದ ಧರ್ಮ ಉಳಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಣಾಭಿವೃದ್ಧಿ ಯೋಜನೆಯಿಂದ ಹಿಂದೂಗಳು ಸಂಘಟನೆಯಾಗುತ್ತಿದ್ದು ಇದು ಮುಂದುವರೆದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಅರಿತಿದೆ. ಪೂಜ್ಯ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಿಂದ ಗ್ರಾಮೀಣ ಭಾಗದ ಕಟ್ಟ ಕಡೆಯ ಎಲ್ಲ ಸಮಾಜದ ಹಿಂದೂ ಭಾಂದವರು ಒಟ್ಟಾದರೆ ಇದನ್ನು ಸರ್ಕಾರಕ್ಕೆ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಈಗಲಿಂದಲೇ ಹಿಂದೂಗಳನ್ನು ತಡೆಯುವ ಉದ್ದೇಶವನ್ನು ಸರ್ಕಾರ ಹೊಂದಿರುವಂತಿದೆ. ಜಿಹಾದಿಗಳು ಹಾಗೂ ಮತಾಂತರಿಗಳ ಕುಮ್ಮಕ್ಕಿನಿಂದ ಈ ಬುರುಡೆ ವ್ಯಕ್ತಿಯ ಹೇಳಿದಂತೆ ಎಸ್‌ಐಟಿ ರಚನೆಯಾಗಿ ಧರ್ಮಸ್ಥಳದ ನೆಲವನ್ನು ಅಗೆಯಲಾಗಿದೆ. ಆದರೂ ಸತ್ಯ ಗೆದ್ದಿದ್ದು ಸುಳ್ಳಿನ ಸರಮಾಲೆ ಮತ್ತೆ ಮುಂದುವರೆದಿದೆ. ಬೇರೆಲ್ಲ ವಿಚಾರವಾಗಿ ಸುಮೋಟೊ ಕೇಸ್ ದಾಖಲಿಸುವ ಪೊಲೀಸರು ಧರ್ಮಸ್ಥಳದ ಬಗ್ಗೆ ಕೆಲ ಯೂಟೂಬರ್‌ಗಳು ಧಾರ್ಮಿಕ ಶ್ರದ್ಧೆಯ ಅಡಿಪಾಯವನ್ನೇ ಅಲುಗಾಡಿಸುವಂತಹ ಸುಳ್ಳಿನ ವಿಡಿಯೋಗಳನ್ನು ಹಾಕಿ ಅಪಪ್ರಚಾರ ಮಾಡಿದರೂ ಅವರ ಮೇಲೆ ಇನ್ನೂ ಸುಮೋಟೊ ಕೇಸ್ ದಾಖಲಿಸಿ ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದು, ಧರ್ಮಸ್ಥಳದಲ್ಲಿ ಸಾಮೂಹಿಕ ಮದುವೆಯಾದ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿದ ಗಿರೀಶ್ ಮಟ್ಟಣ್ಣನವರ ಎಂಬುವವನ್ನು ಇನ್ನೂ ಬಂಧಿಸಿಲ್ಲ. ಇವನ ಮಾತಿನಿಂದ ಹಲವಾರು ದಲಿತ ಹಾಗೂ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ತಲೆ ಎತ್ತಿ ತಿರುಗುವಂತಿಲ್ಲ. ಈತನು ಕೂಡ ಅಲ್ಲೇ ಮದುವೆಯಾಗಿದ್ದು ಈತನ ಹೆಂಡತಿಯ ಬಗ್ಗೆಯೂ ಯೋಚಿಸದೆ ಇಂತಹ ಸತ್ಯಕ್ಕೆ ದೂರವಾದ ಮಾತಾಡಿದ್ದು ಶೀಘ್ರ ಇವನ ಬಂಧನವಾಗಬೇಕು. ಇಂದು ದೇಶದಲ್ಲಿರುವ ಮತೀಯ ಶಕ್ತಿಗಳಿಗೆ ಕರ್ನಾಟಕ ಶಕ್ತಿಕೇಂದ್ರವಾಗಿದ್ದು ಹಿಂದೂಗಳು ಎಚ್ಚರವಾಗಬೇಕು. ಇಂತಹ ದರಿದ್ರ ಸರ್ಕಾರವನ್ನು ಕಿತ್ತೊಯಬೇಕು ಎಂದರು.
*ದೇವರಾಜ ಅರಸುಗೆ ಸಮನಲ್ಲ :*
ಮಾಜಿ ಸಿಎಂ ದೇವರಾಜ ಅರಸು ನಂತರ ನಾನೇ ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯನವರೇ ಹಿಂದೆ ರಾಜರು ಕೂರುತ್ತಿದ್ದ ಅಂಬಾರಿಯ ಮೇಲೆ ದೇವರಾಜ ಅರಸರು ತಾಯಿ ಚಾಮುಂಡೇಶ್ವರಿಯನ್ನು ಕೂರಿಸಿದ್ದರು. ಆದರೆ ಅಂತಹ ವ್ಯಕ್ತಿಯೇ ಧರ್ಮಕ್ಕೆ ಗೌರವ ನೀಡುವಾಗ ನೀವು ಅನ್ಯ ಧರ್ಮದ ಅದರಲ್ಲೂ ಕನ್ನಡ ತಾಯಿ ಹಾಗೂ ಅರಿಶಿಣ ಕುಂಕುಮದ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಭಾನು ಮುಷ್ತಾಕ್ ಗೆ ದಸರ ಉದ್ಘಾಟನೆಗೆ ಕರೆದಿರುವುದು ದುರಂತ. ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎನ್ನುವ ಡಿಸಿಎಂ ಡಿಕೆ ರವರು ಕುರ್ಚಿಗೆ ಅಂಟಿಕೊಳ್ಳಲು ಬೇರೆಯವರ ಬೂಟು ನೆಕ್ಕುವ ನಡೆಯನ್ನು ನಾವು ಒಪ್ಪಲ್ಲ. ಅಧಿಕಾರಕ್ಕಾಗಿ ಧರ್ಮ, ದೇವರ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ದುಷ್ಟರು ಬಿಡಬೇಕು. ಇವರ ಮಾತಿನಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿಲ್ಲ ಎಂದರು.
ತಾಲೂಕು ಮಂಡಲಾಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಕಮ್ಯೂನಿಸ್ಟ್ ಹಾಗೂ ಹಿಂದೂ ವಿರೋಧಿಗಳು ಈ ಕುತಂತ್ರ ಮಾಡುತ್ತಿವೆ. ಒಬ್ಬ ಬುರುಡೆ ಆಯೋಗ್ಯನ ಮಾತಿಗೆ ಎಸ್‌ಐಟಿ ಬೆಲೆ ನೀಡಿದೆ. ಈ ಕ್ಷೇತ್ರದ ವಿರುದ್ಧ ಪಿತೂರಿ ಮಾಡಲು ಕಾರಣವಿದೆ. ಅದು ಅನಧಿಕೃತವಾಗಿ ಯಾವುದೇ ಚರ್ಚ್, ಮಸೀದಿ,ದರ್ಗಾಗಳ ನಿರ್ಮಾಣಕ್ಕೆ ಅವಕಾಶ ಕೊಟ್ಟಿಲ್ಲ. ಹಾಗೂ ಬಡತನವನ್ನೇ ಅಸ್ತ್ರವಾಗಿಸಿಕೊಂಡು ಹಣದ ಆಮಿಷ ತೋರಿಸಿ ಮಾಡುವ ಮತಾಂತರಕ್ಕೆ ಅವಕಾಶ ನೀಡಿಲ್ಲ. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಧರ್ಮ, ಜಾತಿಗಳ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಸ್ಥಾವಲಂಭಿಗಳಾಗಿಸಿದ್ದು ಕಮ್ಯೂನಿಸ್ಟ್‌ಗಳ ಕಣ್ಣು ಕೆಂಪಾಗಲು ಕಾರಣವಾಗಿದೆ. ಅದಕ್ಕಾಗಿ ಶ್ರೀಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ಮೇಲೆ ಈ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅದಕ್ಕೆ ಸರ್ಕಾರವೂ ತಲೆ ಆಡಿಸುತ್ತಿರುವುದು ಇವರ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಹಿಂದೂಗಳು ಎಲ್ಲಿ ಸರ್ಕಾರದ ಬೆಟ್ಟಗಳಿವೆಯೋ ಅಲ್ಲೆಲ್ಲ ದೇವಸ್ಥಾನ ಕಟ್ಟಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಯೇಸು ಬೆಟ್ಟ ಹಾಗೂ ಜಿಹಾದಿ ಬೆಟ್ಟಗಳಾಗಿ ಬದಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುನಾಮಿಯ ಎಚ್ಚರಿಕೆ
ಹಿಂದೂ ಎಂಬುದು ಮಹಾ ಸಾಗರ ಇದನ್ನು ಕತ್ತರಿಸುವ ಕೆಲಸದಲ್ಲಿ ಯಾರಿಗೂ ಜಯ ಸಿಗಲ್ಲ ನಿಮ್ಮ ಈ ಕುತಂತ್ರದಿಂದ ಒಂದು ಬಾರಿ ಹಿಂದುಗಳು ಎದ್ದು ನಿಂತರೆ ಸಮುದ್ರದ ಸುನಾಮಿಯಂತೆ ಎದ್ದು ನಿಲ್ಲಲಿದೆ. ಆ ಪ್ರಹಾರಕ್ಕೆ ಈ ಸಂಘಗಳು, ಕಮ್ಯುನಿಸ್ಟ್‌ಗಳ ಕುತಂತ್ರಗಳು ದಿಕ್ಕಾಪಾಲಾಗಿ ಹೋಗಲಿದೆ. ಧರ್ಮಸ್ಥಳದಲ್ಲಿ ಏನೂ ಸಿಗದ ಕಾರಣ ಈಗ ದಸರಾ ಉತ್ಸವದ ಉದ್ಘಾಟಕರ ಬಗ್ಗೆ ಕ್ಯಾತೆ ತಗೆದಿದೆ. ಹಣವಿಲ್ಲದೆ ಅಭಿವೃದ್ದಿ ಬಗ್ಗೆ ಮಾತನಾಡದ ಸರ್ಕಾರ ಪದೇ ಪದೇ ಹಿಂದೂ ಧರ್ಮದ ವಿಚಾರದಲ್ಲಿ ತಪ್ಪು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚ ಅಧ್ಯಕ್ಷ ನಾಗರಾಜಪ್ಪ, ಪದಾಧಿಕಾರಿಗಳಾದ ಪಾಂಡುರಂಗಾರೆಡ್ಡಿ, ಮೋಹನ್‌ರಾಜ್, ರಮೇಶ್, ನಾಗೇಂದ್ರ, ಪದ್ಮಣ್ಣ, ಆಶೋಕ್. ಹಾಗೂ ನೂರಾರು ಕಾರ್ಯಕರ್ತರು ಇದ್ದರು.