Video: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ

Video: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ


ಮುಂಬೈ, ಮಾ.5: ಪುಟ್ಟ ಮಕ್ಕಳಿಗೆ ಅಜ್ಜಿ ಅಂದ್ರೆ ಪಂಚ ಪ್ರಾಣ, ಅಜ್ಜಿಗೂ ಅಷ್ಟೇ ಮೊಮ್ಮಕ್ಕಳು ತುಂಬಾ ಪ್ರೀತಿ, ಆದರೆ ಇಲ್ಲೊಂದು ಘಟನೆ ವಿರುದ್ಧವಾಗಿದೆ. ನೆನ್ನೆ ದೇಶದ ಎಲ್ಲ ಕಡೆ ಬಣ್ಣಗಳ ಹಬ್ಬ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ ಹಾಗೂ ಇದನ್ನು ಅತ್ಯಂತ ತಮಾಷೆಯಾಗಿ ಆಡುತ್ತಾರೆ. ಈ ಹಬ್ಬವನ್ನು ಮಕ್ಕಳು ತುಂಬಾ ಖುಷಿಯಿಂದ ಆಚರಣೆ ಮಾಡಿದ್ದಾರೆ. ಆದರೆ ಈ ಬಣ್ಣದ ಹಬ್ಬ ಈ ಪುಟ್ಟ ಬಾಲಕನಿಗೆ ಕರಾಳ ದಿನವಾಗಿದೆ. ತಮಾಷೆಯಾಗಿ ತನ್ನ ಮೇಲೆ ಬಣ್ಣ ಎರಚಿದ್ದ ಎಂದು ಅಜ್ಜಿ ತನ್ನ ಮೊಮ್ಮಗನ ಮೇಲೆ ಬಿಸಿ ಬಿಸಿ ನೀರನ್ನು ಸುರಿದು ವಿಕೃತಿ ಮೆರೆದಿದ್ದಾರೆ. ಈ ಭೀಕರ ಘಟನೆಯು ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ಸಂಭವಿಸಿದೆ.

ಮಾರ್ಚ್ 3 ರಂದು ಹರೀಶ್ ವಂಗೆ ಎಂಬ ಬಾಲಕ ತನ್ನ ಮನೆಯ ಹೊರಗೆ ಬಣ್ಣದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಅಜ್ಜಿ ಸಿಂಧು ಠಾಕ್ರೆ ಅವರ ಮೇಲೆ ಬಣ್ಣದ ನೀರು ಬಿದ್ದಿದೆ. ಇದರಿಂದ ಕೆರಳಿದ ಅಜ್ಜಿ, ಬಕೆಟ್‌ನಲ್ಲಿ ತುಂಬಿದ್ದ ಬಿಸಿನೀರನ್ನು ಮೊಮ್ಮಗನ ಮೇಲೆ ಸುರಿದಿದ್ದಾರೆ. 4 ವರ್ಷದ ಬಾಲಕ ಓಮ್ ಹರೀಶ್ ವಂಗೆ ಬಿಸಿ ನೀರಿನ ಉರಿಯಲ್ಲಿ ಒದ್ದಾಡಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕೃತ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೇರಿದೆ.

ಇದನ್ನೂ ಓದಿ: ಇರಾನ್ ಹೊತ್ತಿ ಉರಿಯಲು ಈ ಹುಡುಗಿಯೇ ಕಾರಣ: 2024ರ ಈ ವಿಡಿಯೋ ನೆನಪಿದ್ಯಾ?

ಇಲ್ಲಿದೆ ನೋಡಿ ವಿಡಿಯೋ:

ಬಿಸಿನೀರು ಸುರಿದ ರಭಸಕ್ಕೆ ಮಗುವಿನ ಸೊಂಟದ ಕೆಳಭಾಗದ ಚರ್ಮ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸುಮಾರು ಶೇ. 45ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಿತಿ ಚಿಂತಾಜನಕವಾಗಿದೆ. ಈ ವಿಡಿಯೋ ಮಗು ನೋವಿನಿಂದ ಕಿರುಚುತ್ತಾ ಓಡುತ್ತಿರುವ ದೃಶ್ಯ ಎಂತಹವರನ್ನೂ ಕಣ್ಣೀರು ಹಾಕಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ಕೋರಡಿ ಪ್ರಕರಣ ದಾಖಲಿಸಿದ್ದು, ಅಜ್ಜಿ ಸಿಂಧು ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಬ್ಬದ ದಿನವೇ ಅಜ್ಜಿಯ ಇಂತಹ ಅಮಾನವೀಯ ವರ್ತನೆ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *