Headlines

ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ

ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ


ಹಬ್ಬಕ್ಕೆ ಹೊರಟವರಿಗೆ ಭರ್ಜರಿ ಶಾಕ್: ಬಸ್‌ಗಳ ಟಿಕೆಟ್ ದರ ದುಪ್ಪಟ್ಟು ಏರಿಕೆ

ಬೆಂಗಳೂರು, ಮಾರ್ಚ್ 18: ಯುಗಾದಿ ಮತ್ತು ರಂಜಾನ್ ಹಬ್ಬಗಳನ್ನು ಮನೆಯವರ ಜೊತೆ ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಹೊರಟು ನಿಂತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ KSRTC 2,325 ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿರುವ ನಡುವೆಯೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.

ಖಾಸಗಿ ಬಸ್ ಟಿಕೆಟ್ ದರ ಗಣನೀಯ ಏರಿಕೆ

ಬಸ್ ಟಿಕೆಟ್ ದರ
ಎಲ್ಲಿಂದ ಎಲ್ಲಿಗೆ? ಹಿಂದನ ದರ (ರೂ.ಗಳಲ್ಲಿ) ಇಂದಿನ ದರ
(ರೂ.ಗಳಲ್ಲಿ)
ಬೆಂಗಳೂರು-ಚಿಕ್ಕಮಗಳೂರು 366-650 999-1498
ಬೆಂಗಳೂರು-ಮಂಗಳೂರು 600-900 1212-2999
ಬೆಂಗಳೂರು-ಧಾರವಾಡ 389-1300 1400-4500
ಬೆಂಗಳೂರು-ಹುಬ್ಬಳ್ಳಿ 409-1248 1000-4500
ಬೆಂಗಳೂರು- ಕಾರವಾರ 542-900 1500-4500
ಬೆಂಗಳೂರು-ಕಲಬುರಗಿ 599-1300 1398-2800
ಬೆಂಗಳೂರು-ಶಿವಮೊಗ್ಗ 416-999 1109-2799
ಬೆಂಗಳೂರು-ಧರ್ಮಸ್ಥಳ 495-801 1011-3600
ಬೆಂಗಳೂರು-ಕೊಡಗು 450-600 899-3000

ಇದನ್ನೂ ಓದಿ: ಯುಗಾದಿಯ ಆಚರಣೆ ಹೇಗೆ ಮಾಡಬೇಕು? ಈ ವರ್ಷ ಯಾವೆಲ್ಲ ಬದಲಾವಣೆಗಳು?

ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ

ಇಂದು ಮಧ್ಯಾಹ್ನದಿಂದಲೇ ಹೊರಟಿರುವ ಕಾರಣ ಬೆಂಗಳೂರಿಗರು ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ. ಸೀಟಿಗಾಗಿ ಪ್ರಯಾಣಿಕರ ನಡುವೆ ಪೈಪೋಟಿ ನಡೆಯುತ್ತಿರುವುದು, ಬಸ್ಸುಗಳು ಬರ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್‌ಗಳನ್ನು ಹಾಕಿ ಜನರು ಸೀಟ್ ಹಿಡಿಯಲು ಪ್ರಯತ್ನಿಸುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಿದೆ. ಸಂಜೆ ವೇಳೆಗೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *