ತುಮಕೂರು, (ನವೆಂಬರ್ 07): ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪದಲ್ಲಿದೆ. ಜಿಲ್ಲೆಯ ಹತ್ತರಗಿ ಬಳಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ವೇಳೆ ಕೆಲ ವಾಹನಗಳ ಗಾಜು ಪುಡಿ ಪುಡಿ, ಕೆಲ ಪೊಲೀಸರಿಗೆ ಗಾಯ. ಡಿವೈಎಸ್ಪಿಯೊಬ್ಬರ ಕೈ ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೈತರು ಕಲ್ಲು ತೂರಾಟ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ಎಸೆದು ರೈತರ ಪ್ರತಿಭಟನೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ, ಸದ್ಯ ಪೊಲೀಸರು ಯಾವುದೇ ಲಾಠಿಚಾರ್ಜ್ ಮಾಡಿಲ್ಲ. ರೈತರ ಜೊತೆ ಸಮ್ಯಮದಿಂದ ಇರುವಂತೆ ಪೊಲೀಸರಿಗೆ ಸೂಚಿಸಲಾಗಿದೆ.