
ಪ್ರಸಿದ್ಧ ಆಟೋಮೊಬೈಲ್ ಕಂಪನಿ ಹೋಂಡಾದ ಹೊಸ ಎಲೆಕ್ಟ್ರಿಕಲ್ ಬೈಕ್ WN7 ಪ್ರಸ್ತುತ ಭಾರೀ ಚರ್ಚೆಯಲ್ಲಿದೆ. ಈ ಬೈಕ್ ಪ್ರತಿಷ್ಠಿತ ‘ಗೋಲ್ಡ್ iF ಡಿಸೈನ್’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆದರೆ, ಇದು ಕೇವಲ ಪ್ರಶಸ್ತಿಗಾಗಿ ಮಾತ್ರವಲ್ಲ, ತನ್ನ ವಿಶಿಷ್ಟ ವಿನ್ಯಾಸ ಮತ್ತು ಕಾರ್ಯಕ್ಷಮತೆಯಿಂದಲೂ ವಿಶೇಷವಾಗಿ ಗುರುತಿಸಿಕೊಂಡಿದೆ. ಹೋಂಡಾ WN7 ಬೈಕ್ ವಿನ್ಯಾಸ ಇತರ ಬೈಕ್‌ಗಳಿಗಿಂತ ಭಿನ್ನವಾಗಿದ್ದು, ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೆ ರೇಂಜ್ ನೀಡುತ್ತದೆ. ದಿನನಿತ್ಯದ ಬಳಕೆ ಹಾಗೂ ಹೈ-ಸ್ಪೀಡ್ ಇಷ್ಟಪಡುವವರಿಗೆ ಇದು ಸೂಕ್ತವಾಗಿದೆ. ಭವಿಷ್ಯದ ಎಲೆಕ್ಟ್ರಿಕ್ ಬೈಕ್‌ಗಳು ಹೇಗಿರಲಿವೆ ಎಂಬುದಕ್ಕೆ ಇದು ಒಂದು ಝಲಕ್ ನೀಡುತ್ತದೆ. ಹೋಂಡಾ WN7 ನ ಫೀಚರ್‌ಗಳ ವಿವರ ಇಲ್ಲಿದೆ.