‘ಹೂವಿನ ಬಾಣದಂತೆ’ (ಹೂವಿನ ಬಾಣದಂತೆ) ಹಾಡನ್ನು ತನ್ನದೇ ರೀತಿಯಲ್ಲಿ ಹಾಡುವ ಮೂಲಕ ನಿತ್ಯಶ್ರೀ ಅವರು ರಾತ್ರೋರಾತ್ರಿ ಫೇಮಸ್ ಆಗಿದ್ದರು. ಆ ಬಳಿಕ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಯಿತು. ಹೊಸ ಹೊಸ ಅವಕಾಶಗಳು ಕೂಡ ಬರಲು ಆರಂಭಿಸಿದವು. ಇತ್ತೀಚೆಗೆ ನಿತ್ಯಶ್ರೀ ಅವರಿಗೆ ‘ಜೀ ಕನ್ನಡ’ ವಾಹಿನಿ ಕೂಡ ಕರೆದು ಅವಕಾಶ ನೀಡಿದೆ. ‘ಕಾಮಿಡಿ ಕಿಲಾಡಿಗಳು’ (ಕಾಮಿಡಿ ಕಿಲಾಡಿಗಳು) ವೇದಿಕೆಯಲ್ಲಿ ನಟಿಸುವ ಅವಕಾಶ ನಿತ್ಯಶ್ರೀ ಅವರಿಗೆ ಸಿಕ್ಕಿದೆ. ಆದರೆ ಕೆಲವರು ಟ್ರೋಲ್ ಮಾಡಿದ್ದಾರೆ. ಅಂಥವರಿಗೆ ನಿತ್ಯಶ್ರೀ (ನಿತ್ಯಶ್ರೀ) ಈಗ ತಿರುಗೇಟು ನೀಡಿದ.
ಸೋಶಿಯಲ್ ಮೀಡಿಯಾದಲ್ಲಿ ನಿತ್ಯಶ್ರೀ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಟ್ರೋಲ್ ಮಾಡಿದವರಿಗೆ ಉತ್ತರ ಕೊಟ್ಟಿದ್ದಾರೆ. ವಿಡಿಯೋ ಮಾಡುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ ಎಂದು ನಿತ್ಯಶ್ರೀ ಹೇಳಿದ್ದಾರೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಆದರೆ ಕಮೆಂಟ್ ಆಯ್ಕೆಯನ್ನು ನಿತ್ಯಶ್ರೀ ಅವರು ಮಾಡಿದ್ದಾರೆ.
‘ಮೊನ್ನೆ ಆದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಾನು ಅತಿಥಿಯಾಗಿ ನಟನೆ ಮಾಡಿದ್ದೇನೆ. ಅದನ್ನು ತುಂಬಾ ಜನರು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಎಲ್ಲರಿಗೂ ನಾನು ಕೇಳುವುದು ಇಷ್ಟೇ.. ಇದೇ ಅವಕಾಶ ನಿಮ್ಮ ಅಕ್ಕ ಅಥವಾ ತಂಗಿಗೆ ಸಿಕ್ಕಿದ್ದರೆ ಇದನ್ನು ಉಪಯೋಗಿಸಿಕೊಳ್ಳದೆ ಬಿಡುತ್ತಿದ್ದರಾ? ಇದನ್ನು ಕೆಟ್ಟದಾಗಿ ಟ್ರೋಲ್ ಮಾಡ್ತಿದ್ರಾ?’ ಎಂದು ನಿತ್ಯಶ್ರೀ ಅವರು ಪ್ರಶ್ನೆ ಮಾಡಿದ್ದಾರೆ.
‘ಹೌದು, ನಾನು ಹಾಡನ್ನು ಕೆಟ್ಟದಾಗಿ ಹಾಡಿದ್ದೇನೆ. ಅದನ್ನು ನಾನು ಅರಿತುಕೊಂಡು ಕ್ಷಮೆ ಕೂಡ ಕೇಳಿದ್ದೇನೆ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಅಂತ ಅರ್ಜುನ್ ಜನ್ಯ ಸರ್ ಕೂಡ ಹೇಳಿದ್ದಾರೆ. ಹಾಗಂತ ಅದನ್ನು ನಾನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತಿಲ್ಲ. ಕೇವಲ ನೆನಪು ಮಾಡಿದ್ದೇನೆ ಅಷ್ಟೇ. ಏನು ಪ್ರತಿಭೆ ಇದೆ ಅಂತ ಕೇಳುತ್ತೀರಲ್ಲ.. ನನ್ನ ಜೀವನದಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿದ್ದು ಎಂದರೆ ಅದು ಕಾಮಿಡಿ ಕಿಲಾಡಿಗಳು’ ಎಂದು ನಿತ್ಯಶ್ರೀ ಹೇಳಿದ್ದಾರೆ.
‘ಮೊದಲ ಬಾರಿಗೆ ತುಂಬಾ ಜನ ಕಲಾವಿದರು, ದೃಶ್ಯಗಳು ಹಾಗೂ ಜಡ್ಜ್‌ಗಳು ಇವೆ. ಅವರ ಮುಂದೆ ಸ್ಟೇಜ್ ಫಿಯರ್ ಇಲ್ಲದೇ ನಾನು ನಟನೆ ಮಾಡಿದ್ದೇನೆ. ಅದನ್ನು ನಮ್ಮ ಕಡೆ ಟ್ಯಾಲೆಂಟ್ ಅಂತಾನೇ ಕರೆಯೋದು. ಏನು ಸಾಧನೆ ಮಾಡಿದ್ದೀರಿ ಅಂತ ಕೇಳುತ್ತೀರಿ. ಹೌದು, ನಾನು ಸಾಧನೆ ಮಾಡಿಲ್ಲ ನಿಜ. ಸಾಧನೆ ಮಾಡೋಕೆ ನಮ್ಮ ಕರ್ನಾಟಕದ ಜನತೆಗೆ ಒಂದು ದಾರಿ ಮಾಡಿಕೊಟ್ಟಿದ್ದಾರೆ. ಅದನ್ನು ನಾನು ಬಳಸುತ್ತಿದ್ದೇನೆ ಅಷ್ಟೇ’ ಎಂದು ನಿತ್ಯಶ್ರೀ ಹೇಳಿದ್ದಾರೆ.
ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಸಿಗುತ್ತಿದೆ ದೊಡ್ಡ ದೊಡ್ಡ ವೇದಿಕೆ
‘ನೀವು ಮಾಡುವ ವಿಡಿಯೋ ಬಗ್ಗೆ ಒಂದೇ ಸಲ ಯೋಚನೆ ಮಾಡಿ. ನೀವು ಮಾಡುವ ವಿಡಿಯೋವನ್ನು ನಮ್ಮ ಅಪ್ಪ-ಅಮ್ಮ ಏನಿದ್ದರೂ ಅವರ ಮನಸ್ಸಿಗೆ ಎಷ್ಟು ಬೇಜಾರು ಆಗಬಹುದು ಅಂತ ಯೋಚಿಸಿ. ಆಗಲಾದರೂ ಈ ರೀತಿ ವಿಡಿಯೋ ಮಾಡೋದು ನಿಲ್ಲಿಸಿತ್ತೀರಿ’ ಎಂದು ನಿತ್ಯಶ್ರೀ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.