
ಜನವರಿ, ಮಾರ್ಚ್ 12: ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇಂಧನ ಪೂರೈಕೆಗೆ ಆಯಕಟ್ಟಿನ ಸ್ಥಳವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೆನೈ ಅವರು ಕರೆ ನೀಡಿದರು. ಅದೇ, ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತತ್ಕ್ಷಣವೇ ಗಲ್ಫ್ ದೇಶಗಳಿಗೆ ಅವರು ಒಪ್ಪಿಸಿದ್ದಾರೆ. ‘ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಯುತ್ತದೆ’ ಎಂದು ಮೊಜ್ತಬಾ ಹೇಳಿದ್ದಾರೆ.
ವೈರಿಗಳಿಗೆ ಹೊಸ ಶಾಕ್ ಕೊಡಲು ಇರಾನ್ ಅಣಿ…
ಇದೇ ವೇಳೆ, ಇರಾನ್ ಮುಖ್ಯಸ್ಥರು ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಹೊಸ ಶಾಕ್‌ನ ಸುಳಿವು ನೀಡಿದ್ದಾರೆ. ‘ವೈರಿಗೆ ಕಡಿಮೆ ಅನುಭವ ಇರುವಂತಹ ಮತ್ತು ಬಹಳ ದುರ್ಬಲ ಇರುವಂತಹ ಇತರ ಫ್ರಂಟ್‌ಗಳನ್ನು ತೆರೆಯುವ ಬಗ್ಗೆ ಯೋಜಿಸಲಾಗಿದೆ. ಈ ಯುದ್ಧ ಸ್ಥಿತಿ ಮುಂದುವರಿದರೆ ಅದನ್ನು ಸಕ್ರಿಯಗೊಳಿಸಲಾಗುವುದಿಲ್ಲ’ ಎಂದು ಖಮನೈ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಟ್ಯಾರಿಫ್‌ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ
ಹುತಾತ್ಮರ ರಕ್ತದ ಮುಯ್ಯಿ ಮರೆಯೋದಿಲ್ಲ…
ಇರಾನ್‌ನ ಹುತಾತ್ಮರ ರಕ್ತಕ್ಕೆ ಮುಯ್ಯಿ ತೀರಿಸಿಕೊಳ್ಳಲು ಈ ದೇಶ ಮರೆಯದು ಎಂದೂ ಮೊಜ್ತಬಾ ಹೇಳಿದ್ದಾರೆ. ನೆರೆಯ ದೇಶಗಳೊಂದಿಗೆ ಇರಾನ್ ಸ್ನೇಹ ಬಯಸುತ್ತದಾದರೂ ಅವರಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರಿಯುವುದು ಎಂದು ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಪ್ರೀತಿಯ ತಾಯ್ನಾಡಿನ ಮೇಲೆ ದಾಳಿ ಮಾಡಿ ನಮ್ಮ ಜನರನ್ನು ಕೊಂದವರ ವಿಚಾರದಲ್ಲಿ ಈ ದೇಶಗಳು (ಗಲ್ಫ್) ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಶಾಂತಿ ಮತ್ತು ಭದ್ರತೆ ಒದಗಿಸುವ ಅಮೆರಿಕದ ಭರವಸೆ ಬರೀ ಸುಳ್ಳು ಎಂಬುದು ಈ ದೇಶಕ್ಕೆ ಗೊತ್ತಾಗಿದೆ. ಆ ಅಮೆರಿಕನ್ನರ ನೆಲೆಗಳನ್ನು ಕೂಡಲೇ ಮುಚ್ಚಬೇಕು’ ಎಂದು ಇರಾನ್ ಸರ್ವೋಚ್ಚ ನಾಯಕ ಒತ್ತಾಯಿಸಿದ್ದಾರೆ.
ಯುದ್ಧ ನಿಲ್ಲಿಸಲು ಇರಾನ್ ಮೂರು ಷರತ್ತುಗಳನ್ನು ಮುಂದಿಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ತತ್ಕ್ಷಣವೇ ದಾಳಿ ನಿಲ್ಲಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿಯಾಗುವುದಿಲ್ಲ ಎಂದು ಖಾತ್ರಿಪಡಿಸಬೇಕು. ದಾಳಿಯಿಂದ ಇರಾನ್‌ಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂಬುದು ಮೂರು ಷರತ್ತುಗಳು.
ಇದನ್ನೂ ಓದಿ: ಪೆಟ್ರೋಲ್, ಎಲ್ ಪಿಜಿ ಕೊರತೆ ಇಲ್ಲ: ಸಂಸತ್ ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
‘ಒಂದು ವಿಚಾರ ಒತ್ತಿಹೇಳಲು ಇಷ್ಟಪಡುತ್ತೇನೆ. ಶತ್ರುವಿನಿಂದ ನಾವು ಪರಿಹಾರ ಪಡೆದೇ ಪಡೆಯುತ್ತೇವೆ. ಪರಿಹಾರಕ್ಕೆ ಅವರು ಒಪ್ಪಲಿಲ್ಲ ಅವರ ಆಸ್ತಿಗಳಿಂದಲೇ ನಮಗೆ ಬೇಕಾದುದನ್ನು ಪಡೆಯುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಅವರ ಆಸ್ತಿಗಳನ್ನು ತಕ್ಕ ಪ್ರಮಾಣದಲ್ಲಿ ನಾಶವಾಗಲಿದೆ’ ಎಂದು ಮೊಜ್ತಬಾ ಖಮೇನಿ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ