ಮೇಷ ರಾಶಿ:
ಮುಖಂಡರಾಗುವ ಗುಣ ಬೇಕು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಗೊಂದಲದಲ್ಲಿ ಇರಬಹುದು. ಹೇಳಿಕೊಳ್ಳುವುದು ಸೂಕ್ತ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಸಂಪತ್ತನ್ನು ಗ್ರಹಿಸಿಕೊಂಡು ಇರುವ ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೆ ಸುಮ್ಮನಿರುವುದ ಲೇಸು ಎಂದೆನಿಸಬಹುದು. ಗೆಲುವಿನ ನಿರೀಕ್ಷೆ ಸಫಲವಾಗುವುದು.
ವೃಷಭ ರಾಶಿ:
ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಳ್ಳಿ ಒಂಟಿಯಾಗಿ ಇರಲು ಇಚ್ಛಿಸುವಿರಿ. ಸನ್ಮಾನಗಳನ್ನು ಬಯಸುವಿರಿ. ಸಮಾರಂಭಗಳಿಗೆ ಒತ್ತಾಯದ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯಿಂದ ಮನಸ್ಸಿಗೆ ಕಿರಿಕಿರಿ. ಯಾರ ಬಳಿಯೋ ಹಣವನ್ನು ಹೊಂದಿಸಿ ಮಿತ್ರರಿಗೆ ಕೊಡುವಿರಿ. ನಿಮ್ಮ ಬಣ್ಣದ ಮಾತುಗಳು ಕೆಲವು ಅವಧಿಗೆ ಮಾತ್ರ ಸೀಮಿತ. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು.
ಮಿಥುನ ರಾಶಿ:
ಸಣ್ಣ ವಿಚಾರಗಳನ್ನು ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ಅಪರಿಚಿತರು ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ನಿಮಗೆ ಯಾರ ಬೆಂಬಲವಿದ್ದರೂ ಕಾರ್ಯವನ್ನು ಮಾಡುವವರು ನೀವೇ. ಬರಬೇಕಾದ ಪೂರ್ಣವಾಗಿ ಬಾರದು.
ಕರ್ಕಾಟಕ ರಾಶಿ:
ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುತ್ತಾರೆ. ಬಹಳ ಕೆಲಸವಿದ್ದರೂ ಒತ್ತಡದಿಂದ ಇರುವಿರಿ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ಹೂಡಿಕೆಯನ್ನು ಮಾಡಿ ಒತ್ತಡವನ್ನು ಅನುಭವಿಸಬೇಕಾಗುವುದು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡಿರಿ. ಕೃತಜ್ಞೆಯನ್ನು ಅರ್ಪಿಸುವ ಮನೋಭಾವವಿರದು. ಆಲಸ್ಯದಿಂದ ಈ ದಿನವನ್ನು ಕಳೆಯಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು.
ಸಿಂಹ ರಾಶಿ:
ಅಧ್ಯಾತ್ಮದಿಂದ ಏನೋ ಕಲ್ಪನೆಗಳನ್ನು ಮಾಡಿಕೊಳ್ಳುವಿರಿ. ದೈನಂದಿನ ಬಳಕೆಯ ಉತ್ಪನ್ನಗಳ ವ್ಯಾಪಾರಿಗಳು ಲಾಭ ಗಳಿಸುತ್ತಾರೆ. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು.
ಕನ್ಯಾ ರಾಶಿ:
ಮನೆಯ ವಾತಾವರಣದಿಂದ ನಿಮ್ಮ ವೃತ್ತಿಯೂ ಸರಿಯಾಗಿರದು. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ಹೆಚ್ಚಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ನಿಮ್ಮ ವ್ರತಕ್ಕೆ ಭಂಗ ಬರುವ ಸಾಧ್ಯತೆ ಇದೆ. ಅಪರಿಚಿತರು ನಿಮ್ಮಿಂದ ಹಣವನ್ನು ಕೇಳಬಹುದು. ಪರರಿಗೆ ನೋವಾಗದಂತೆ ಪ್ರತಿಕ್ರಿಯಿಸಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ.
ತುಲಾ ರಾಶಿ:
ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ಏನು ಬೇಕಾದರೂ ಮಾಡಬಹುದು, ಆದರೆ ಏನೂ ಆಗದು. ನಿಮ್ಮ ಮಾತುಗಳು ಖಾರವಾಗುವುದು. ಕೋಪಕ್ಕೆ ಸರಿಯಾದ ಕಾರಣವಿರಲಿ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುತ್ತದೆ. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು.
ವೃಶ್ಚಿಕ ರಾಶಿ:
ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಕರ್ತವ್ಯಪರರಾಗಿ ಕಾರ್ಯವನ್ನು ಮಾಡಿ. ಅನಿರೀಕ್ಷಿತ ಧನಾಗಮನವು ನಿಮ್ಮ ಕಾರ್ಯಗಳಿಗೆ ಸರಿಯಾಗಿ ದೊರೆತಂತೆ ಆಗುವುದು. ಈ ದಿನಗಳಲ್ಲಿ ವ್ಯವಹಾರದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೆ, ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ಅಪರಿಚಿತ ಕರೆ ಮನಸ್ಸು ಹಾಳಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳಿ.
ಧನು ರಾಶಿ:
ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ. ಸಿಹಿ ಎಷ್ಟು ಇಷ್ಟವಾದರೂ ಮಿತಿಯಲ್ಲಿ ಸೇವಿಸಿದರೆ ಆಪತ್ತಿಲ್ಲ. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಚಾಲನೆಯಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುತ್ತಾರೆ. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲ ಬರಲಿದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಸಂಕೋಚವಾಗುವುದು. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇತರರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ.
ಮಕರ ರಾಶಿ:
ನೀವು ಯಾವುದನ್ನೂ ಗುಟ್ಟಾಗಿ ಇಡಲಾರಿರಿ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ನಿಮ್ಮ ಯೋಜನೆಯು ತೆಗೆದುಕೊಂಡಿದ್ದು ನಿಮಗೆ ಚಿಂತೆಯಾಗಬಹುದು. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶಲ ವಸ್ತುಗಳ ಮಾರಾಟವನ್ನು ನೀವು ಮಾಡಲು ಉತ್ಸಾಹದಿಂದ ಇರುತ್ತೀರಿ. ಕಚೇರಿಯ ಕೆಲಸದಲ್ಲಿ ಮೇಲಧಿಕಾರಿಗಳಿಂದ ಅಕ್ಷೇಪವು ಬರಬಹುದು.
ಕುಂಭ ರಾಶಿ:
ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ. ಸಣ್ಣ ವ್ಯವಹಾರಗಳಿಂದ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ. ಮೇಲಿಂದ ಮೇಲೆ ಒತ್ತಡ ಕಾಣಿಸಿಕೊಳ್ಳುವುದು. ಎಂತಹ ಕಷ್ಟದಲ್ಲಿಯೂ ನೀವು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ.
ಮೀನ ರಾಶಿ:
ಹೊಸ ಆರ್ಥಿಕ ವ್ಯವಹಾರಕ್ಕೆ ಮೊದಲು ಕಾನೂನಿನ ಜ್ಞಾನ ಅಗತ್ಯ. ವ್ಯಾಪಾರವನ್ನು ನೀವು ವಿಸ್ತಾರ ಮಾಡಿಕೊಳ್ಳುವ ಯೋಜನೆಯನ್ನು ಹೊಂದುವಿರಿ. ಪ್ರಭಾವೀ ವ್ಯಕ್ತಿಗಳ ಬಗ್ಗೆ ನಿಮಗೆ ಮುಜುಗರವಾಗಬಹುದು. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಕೆಲವನ್ನು ನೀವು ಬೇಕೆಂದೇ ಬಿಟ್ಟುಕೊಳ್ಳುವಿರಿ.
ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ನಿಯತಕಾಲಿಕೆ : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯ ಸೂರ್ಯನಕ್ಷತ್ರ : ಧನಿಷ್ಠಾ, ಯೋಗ : ವಜ್ರ, ಕರಣ, – 6 ಸ್ತೈತಿಲ, – 60 : ತೈತಿಲ, 60 : ತೈತಿಲ – 27 pm, ಇಂದಿನ ಶುಭಾಶುಭ ಕಾಲ : ರಾಹು 17:11 – 18:28, ಯಮಗಂಡ ಕಾಲ 12:39 – 14:06, ಗುಳಿಕ ಕಾಲ 15:33 – 17:01
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)