Horoscope Today 27 February : ಇಂದು ಈ ರಾಶಿಯವರು ಸತ್ಯವನ್ನು ಹೇಳಲು ಹಿಂಜರಿಯುವರು

Horoscope Today 27 February : ಇಂದು ಈ ರಾಶಿಯವರು ಸತ್ಯವನ್ನು ಹೇಳಲು ಹಿಂಜರಿಯುವರು


Horoscope Today 27 February : ಇಂದು ಈ ರಾಶಿಯವರು ಸತ್ಯವನ್ನು ಹೇಳಲು ಹಿಂಜರಿಯುವರು

ಮೇಷ ರಾಶಿ:

ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸಿರಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಸದ್ಯದ ಪರಿಹಾರ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಯವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು.

ವೃಷಭ ರಾಶಿ:

ಮಕ್ಕಳ ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು.

ಮಿಥುನ ರಾಶಿ:

ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ಪ್ರತಿಸ್ಪರ್ಧಿ ಇಲ್ಲದೇ ಗೆಲವು ನಿಮ್ಮದಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು.

ಕರ್ಕಾಟಕ ರಾಶಿ:

ತಂದೆಯ ಕಡೆಯಿಂದ ಸಂಪತ್ತು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವ ಮಕ್ಕಳ ಆಸೆಗಳನ್ನು ಪೂರೈಸುವುದು ನಿಮ್ಮ ಗಮನವಿರಲಿದೆ. ಆಗಂತುಕರು ಮನೆಯ ಕಡೆ ದೃಷ್ಟಿ ಇಡಬಹುದು. ಯಾರದೋ ಮಾತನ್ನು ಕೇಳಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ನಿಮ್ಮ ಅನುಕರಣೆಯಿಂದ ಸಿಟ್ಟಾಗುವಿರಿ. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುತ್ತಾರೆ. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು.

ಸಿಂಹ ರಾಶಿ:

ಇಂದು ಎಲ್ಲವನ್ನೂ ಕಳೆಕೊಂಡಂತಹ ಸ್ಥಿತಿಯ ರೀತಿ ಇರುವುದು ಬೇಡ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದೆ, ಅದಕ್ಕೆ ಹೆಚ್ಚಿನ ಮೌಲ್ಯವು ಸಿಗದೇ ಹೋಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು.

ಕನ್ಯಾ ರಾಶಿ:

ಸತ್ಯವನ್ನು ಹೇಳಲು ಹಿಂಜರಿಯಬಹುದು. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ಪರೋಪಕಾರದಿಂದ ಕೆಲವೊಮ್ಮೆ ನೀವೇ ಸಂಕಷ್ಟಕ್ಕೆ ಸಿಲುಕುವಿರಿ. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದೆ ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ.

ತುಲಾ ರಾಶಿ:

ವ್ಯವಹಾರಿಕ ಮನಃಸ್ಥಿತಿಯಿಂದ ಎಲ್ಲವನ್ನೂ ಅಳೆಯುವುದು ಬೇಡ. ಆಶಾವಾದಕ್ಕಿಂತ ವಾಸ್ತವವನ್ನು ಪಡೆದುಕೊಳ್ಳಿ. ನಿಮ್ಮ ಅಸಹಜ ನಡೆಯನ್ನು ನಿಮ್ಮವರು ಒಪ್ಪಿಕೊಳ್ಳುತ್ತಾರೆ. ಯಾರ ಜೊತೆಗೂ ವೈರವನ್ನು ಕಟ್ಟಿಕೊಳ್ಳದೇ ಹೊಂದಾಣಿಕೆಯಿಂದ ವ್ಯವಹರಿಸಿ. ಸುಲಭದ ಕೆಲಸವನ್ನು ಇಂದು ಮಾಡಿಮುಗಿಸಿಕೊಳ್ಳಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು. ಎಲ್ಲ ಬಂಧನದಿಂದ ಸಿಕ್ಕಿದಂತಹ ನೆಮ್ಮದಿ ಇರಲಿದೆ.

ವೃಶ್ಚಿಕ ರಾಶಿ:

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪೂರಕವಾದ ಜನರ ಗೆಳತಿಯನ್ನು ಮಾಡಿಕೊಳ್ಳುವುದು ಉತ್ತಮ. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಾಗಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಿ. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ಅಪರೂಪದ ಬಂಧುಗಳ ಭೇಟಿಯಿಂದ ಸಂತೋಷ ಸಂಭ್ರಮ. ಇಂದು ನೀವು ಗಟ್ಟಿ ಮನಸ್ಸಿನಿಂದ ಹೋದರೂ ಕಛೇರಿಯಿಂದ ನಿಮಗೆ ಕೆಲವು ಕಹಿ ಅನುಭವವನ್ನು ಕೊಟ್ಟೀತು.

ಧನು ರಾಶಿ:

ಸಾಲವು ನಿಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ನಿರೀಕ್ಷಿತ ಆದಾಯವನ್ನು ಪಡೆಯಲು ವಂಚಿತರಾಗುವಿರಿ. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಪ್ರೀತಿಯನ್ನು ಹೇಳಲು ನಿಮಗೆ ಮುಜುಗರವಾಗಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬಂದರೂ ಸಮಯೋಚಿತವಾಗಿರಲಿ. ಕೆಲಸದ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯಿರಿ.

ಮಕರ ರಾಶಿ:

ಕಛೇರಿಯಲ್ಲಿ ನಿಮಗೆ ವಹಿಸಿದ ಕೆಲಸವನ್ನು ಮಾಡದೇ ಮೇಲಧಿಕಾರಿಗಳು ಸಿಟ್ಟುಗೊಂಡರು. ಹಂಚಿಕೊಳ್ಳಲು ತೆಗೆದುಕೊಳ್ಳಬೇಕಾಗುವುದು. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದವು. ಉತ್ತಮ ಭೂಮಿಯನ್ನು ಖರೀದಿಸಲು ನಿಮಗೆ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಕೌಟುಂಬಿಕ ಮನಸ್ತಾಪದಿಂದ ಲಾಭದಾಯಕ ಯೋಜನೆ ಕೈತಪ್ಪಬಹುದು. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡಬೇಕಾದೀತು.

ಕುಂಭ ರಾಶಿ:

ತಪ್ಪಾದರೂ ಕೆಲಸ ಮಾಡುವುದು ಅನಿವಾರ್ಯ. ಜೀವನ ನಿರ್ವಹಣೆಗೆ ಎಲ್ಲರಿಂದ ದೂರವಿರಬೇಕಾಗುವುದು. ನಿಮ್ಮವರನ್ನು ಕಳೆದುಕೊಳ್ಳುವ ಭೀತಿಯು ಬರಬಹುದು. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೇನೆ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಾದೀತು.

ಮೀನ ರಾಶಿ:

ನಿಮ್ಮ ಬಳಿ ಸಂಘರ್ಷದ ಪರಿಹಾರಕ್ಕೆ ಬರಬಹುದು. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಿ. ಆಪ್ತರ ಜೊತೆ ಮಾತನಾಡಿ ನಿಮ್ಮ ಮನಸ್ಸಿನ ಭಾರವನ್ನೆಲ್ಲ ದೂರ ಮಾಡಿಕೊಳ್ಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಸಂಸರಣ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಸೂರ್ಯ – ಆಯುಷ್ಮಾನ್, ಕರಣ : ವಣಿ –60 ಕರಣ 06 – 31 pm, ಇಂದಿನ ಶುಭಾಶುಭ ಕಾಲ : ರಾಹು 11:09 – 12:37, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:12 – 09:40

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *