ದಿನ ಭವಿಷ್ಯ: ಇಂದು ಈ ರಾಶಿಯವರ ನೋವನ್ನು ಹಂಚಿಕೊಳ್ಳುವವರು ಸಿಗರು

ದಿನ ಭವಿಷ್ಯ: ಇಂದು ಈ ರಾಶಿಯವರ ನೋವನ್ನು ಹಂಚಿಕೊಳ್ಳುವವರು ಸಿಗರು


ದಿನ ಭವಿಷ್ಯ: ಇಂದು ಈ ರಾಶಿಯವರ ನೋವನ್ನು ಹಂಚಿಕೊಳ್ಳುವವರು ಸಿಗುತ್ತಾರೆ

ಮೇಷ ರಾಶಿ:

ಇಂದು ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಶಾಂತಿಯುತ ಪರಿಹಾರವನ್ನು ಕಂಡುಹಿಡಿಯುವುದು ಮುಖ್ಯ. ವ್ಯಾಪಾರ ಚಟುವಟಿಕೆಗಳು ಸುಗಮವಾಗಿ ನಡೆಯಲಿವೆ. ತಂಡವಾಗಿ ಕೆಲಸ ಮಾಡಿದರೆ ಗೆಲವು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೆ ಮುನ್ನಡೆಯುವಿರಿ. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ನೌಕರರನ್ನು ಯೋಗ್ಯ ರೀತಿಯಲ್ಲಿ ಹುಡುಕಲು ಬೇಕಾದುದನ್ನು ಮಾಡಿಸಿಕೊಳ್ಳುವಿರಿ.

ವೃಷಭ ರಾಶಿ:

ಇಂದು ಸಂಗಾತಿಯು ನಿಮ್ಮ ನಿಜವಾದ ಭಾವನೆಯನ್ನು ಹೊಂದಬಹುದು. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಬಯಕೆಗಳಿಗೆ ಅಲ್ಪವಿರಾಮ ಹಾಕಿ. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿದೆ. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಚಿಂತೆಯಾಗುವುದು. ಅದಕ್ಕಾಗಿ ಖರೀದಿಯನ್ನು ಮುಂದೂಡಿ.

ಮಿಥುನ ರಾಶಿ:

ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಸಂಗಾತಿಯ ಸಹಕಾರವನ್ನು ಪಡೆಯಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾಗಿ ತಿಳಿಯಿರಿ. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನಗೊಳಿಸುವುದು. ಇಂದು ಎಲ್ಲರ ಜೊತೆ ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು.

ಕರ್ಕಾಟಕ ರಾಶಿ:

ಕೆಲವು ಪ್ರಶ್ನೆಗೆ ಮೌನ ಉತ್ತರವಾದೀತು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೆ ಬರಬಹುದು. ಅಪವಾದ ಸುತ್ತಿಕೊಂಡು ಕೆಲ ಕಾಲ ಸಂಕಟಪಡುವಿರಿ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗುತ್ತದೆ. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ವಿವಾಹಿತರು ವಿವಾಹದ ಬಗ್ಗೆ ಚಿಂತೆ ಮಾಡುವರು. ದೈವದ ಮೇಲಿನ ಶ್ರದ್ಧೆಯು ಕಡಿಮೆಯಾಗದು. ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಎಲ್ಲದಕ್ಕೂ ಕೋಪವೊಂದೇ ಪರಿಹಾರವಾಗದು.

ಸಿಂಹ ರಾಶಿ:

ಇಂದು ನಿಮ್ಮ ಉತ್ಪಾದನೆಯ ಆದಾಯದಿಂದ ನೆಮ್ಮದಿಯನ್ನು ಹೆಚ್ಚು ಕೊಡುವುದು. ನಕಾರಾತ್ಮಕ ಚಟುವಟಿಕೆಯನ್ನು ಕೋಪದ ಬದಲು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ಪಾಲುದಾರಿಕೆ ವ್ಯವಹಾರವು ಯಶಸ್ವಿಯಾಗಬಹುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ನಿಮ್ಮ ಉದ್ದೇಶಪೂರ್ವಕ ಆಡಿದ ಮಾತಾದರೆ ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು.

ಕನ್ಯಾ ರಾಶಿ:

ಒತ್ತಡದ ಕಾರಣದ ದೈನಂದಿನ ಕ್ರಿಯೆಯಲ್ಲಿ ಅಸ್ತವ್ಯಸ್ತತೆ. ಉದ್ಯೋಗದಲ್ಲಿ ರಾಜಕೀಯ ಪ್ರವೇಶ ಮಾಡಲಿದೆ. ವಿವಾಹ ಸಂಬಂಧವನ್ನು ಚೆನ್ನಾಗಿ ಇಡುವ ಯೋಚಿಸಿ. ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮಕ್ಕೆ ಸಂಬಂಧಿಸಿದ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳಿ.

ತುಲಾ ರಾಶಿ:

ಸಂಬಂಧದಲ್ಲಿ ಸ್ನೇಹಭಾವವನ್ನು ಕಾಪಾಡಿಕೊಳ್ಳಿ. ಕೆಲವು ಕಾರಣಗಳಿಗಾಗಿ ನೀವು ವ್ಯಾಪಾರದ ಮೇಲೆ ಗಮನ ಆಗುವುದಿಲ್ಲ. ಹೆಚ್ಚಿನ ಕೆಲಸದ ಸಂಗಾತಿಯ ಜೊತೆ ಸಮಯವನ್ನು ನೀಡಲು ಸಾಧ್ಯವಾಗಿಲ್ಲ. ಚರಾಸ್ತಿಯು ಅನ್ಯರ ಪಾಲಾಗಬಹುದು. ಇಂದು ಪುರುಷ ಪ್ರಯತ್ನವು ಹೆಚ್ಚಾಗಬೇಕು. ತಪ್ಪನ್ನು ಸಮರ್ಥಿಸಿ ಒಪ್ಪಿಕೊಳ್ಳುವುದು ಬೇಡ. ಇತರರಿಗೆ ನೋವಾದೀತು. ಹೇಳಬೇಕಾದದ್ದನ್ನು ಹೇಳದೇ ’ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ.

ವೃಶ್ಚಿಕ ರಾಶಿ:

ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತರಿಗೆ ಸಹಾಯವನ್ನು ಮಾಡುತ್ತೀರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗಲಿದೆ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಬಹುದು. ವಿದೇಶೀಯ ಹಣವನ್ನು ಪಡೆದುಕೊಳ್ಳುವಾಗ ಎಚ್ಚರ. ವಹಿಸಿಕೊಂಡ ಕಾಮಗಾರಿಯನ್ನು ಮುಗಿಸಿ.

ಧನು ರಾಶಿ:

ನಿಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಹುದು. ಅಂತಹ ಜನರ ಸಂಪರ್ಕವನ್ನು ಮಾಡದಿರುವುದು ಉತ್ತಮ. ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕಬ್ಬಿಣದ ವ್ಯಾಪಾರವನ್ನು ಮಾಡುವವರಿಗೆ ಆದಾಯವು ಹೆಚ್ಚಾಗುತ್ತದೆ. ಹಲವು ದಿನಗಳು ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಸಣ್ಣ ವ್ಯಾಪರಿಗಳಿಗೆ ಉತ್ತಮ ಲಾಭವಿರಲುದೆ. ಇಂದು ನಿಮ್ಮ ಕಾರ್ಯಗಳನ್ನು ಇತರರು ಮಾಡಬಹುದು.

ಮಕರ ರಾಶಿ:

ಇಂದು ವ್ಯಾಪಾರದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳಿ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆದಿದ್ದೀರಿ. ವಿದ್ಯಾರ್ಥಿಗಳ ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ತಂದೆ ಮತ್ತು ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ.

ಕುಂಭ ರಾಶಿ:

ಚಂಚಲವಾದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಗಮನ ಹರಿಸಲು ನಿಮಗೆ ಸಾಧ್ಯವಾಗಬಹುದು ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ.

ಮೀನ ರಾಶಿ:

ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಬಹುದು. ಹಿರಿಯರ ವಿಚಾರಕ್ಕೆ ದಾಂಪತ್ಯದ ನಡುವೆ ಕೆಲವು ವಿವಾದಗಳು ಉಂಟಾಗಬಹುದು. ಶತ್ರುಗಳು ಅನ್ಯ ಕಾರ್ಯದಲ್ಲಿ ತೊಡಗಿರುವ ಕಾರಣ ನಿಮಗೆ ತೊಂದರೆ ಇರದು. ಇಂದು ನಿಮಗೆ ಕೆಲಸ ಆಗಬೇಕಾಗಿದ್ದರೆ ಪ್ರಯಾಣವು ಅನಿವಾರ್ಯವಾಗುವುದು. ಒಂದೇ ಸಾರಿ ಖರ್ಚಿನ ಎಲ್ಲಾ ಅವಕಾಶಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇತರರಿಗೆ ಸಿಟ್ಟು ಬರುವಂತೆ ಇರದು. ಬಂಧುಗಳ್ ಮನೋಲಿಸುವುದು ವ್ಯರ್ಥವೆನಿಸಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸೂರ್ಯ – ವತಿಪಾತ್, 6 ಕರಣ 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:44 – 12:34, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:04 – 09:34

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *