
ಮೇಷ ರಾಶಿ:
ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಆಸ್ತಿ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಆಚಾತುರ್ಯದಿಂದ ಏನನ್ನೂ ಮಾಡಲು ಹೋಗುವುದು ಬೇಡ. ದಿನದ ಕಾರ್ಯವನ್ನು ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆಗಬೇಕಾದ ಕಾರ್ಯಕ್ಕೆ ಒತ್ತಡವನ್ನು ಹೇರಿ ಮಾಡಿಸಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯ ಬೇಕು.
ವೃಷಭ ರಾಶಿ:
ನಿಮ್ಮದಾದ ಸ್ವಂತ ಉದ್ಯೋಗವನ್ನು ಬೆಳೆಸುವ ಕಡೆ ನಿಮ್ಮ ಗಮನವಿರಲಿ. ಇಂದಿನ ಗುರಿಯನ್ನು ಬೇಗ ತಲುಪುವಿರಿ. ಮಕ್ಕಳ ವಿಚಾರಕ್ಕೆ ವಾದಗಳನ್ನು ಆಡಬಹುದು. ನಿಮ್ಮನ್ನು ವೈಭವೀಕರಿಸಿವುದರಲ್ಲಿ ಅರ್ಥವಿಲ್ಲ. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಬೇಸರವನ್ನು ದೂರ ಮಾಡಿತು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ.
ಮಿಥುನ ರಾಶಿ:
ಬಾಯಿ ಚಪ್ಪರದ ಅಧಿಕವಾಗಿ ಏನನ್ನಾದರೂ ತಿಂದು, ಆರೋಗ್ಯ ಕೆಡುವುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಹೋಗುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಪ್ರಯತ್ನಿಸಿ. ಮಿತ್ರರ ಸಹಕಾರದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ವ್ಯಯದಷ್ಟೇ ಆದಾಯ ಸಿಕ್ಕರೆ ಖರ್ಚು ಮಾಡಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು.
ಕರ್ಕಾಟಕ ರಾಶಿ:
ಗೆಲುವಿಗಾಗಿ ಮಾಡುವ ಹೋರಾಟದ ಫಲ ನಿಮಗೆ ಆರಂಭದಲ್ಲಿಯೇ ಗೊತ್ತಾಗಲಿದೆ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕಿದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಬೇಸರದ ಮಾತುಗಳು ಆಪ್ತರ ಮೇಲೆ ಪರಿಣಾಮ ಬೀರುತ್ತವೆ. ಸಂಬಂಧದಲ್ಲಿ ಮಿತವಾದ ಬಂಧವಿರಲಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ.
ಸಿಂಹ ರಾಶಿ:
ನಿಮ್ಮದಲ್ಲದ ವೃತ್ತಿಯಲ್ಲಿ ತೊಡಗು ತೊಳಲಾಟ ನಡೆಸುವಿರಿ. ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ತಿಳಿಯಿರಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೆ ಮುಂದೆ ಸಾಗುವಿರಿ. ಬಂಧುಗಳು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಹಿರಿಯರ ಸೇವೆಯಿಂದ ಸಂತೋಷಪಡುವಿರಿ. ಮನಸ್ಸಿನ ಕಿರಿಕಿರಿಯಿಂದ ಕೋಪ ಬರಬಹುದು.
ಕನ್ಯಾ ರಾಶಿ:
ಸಹೋದರಿಯ ಜೊತೆ ಮನಸ್ತಾಪ ಮಾಡಿಕೊಳ್ಳುವಿರಿ. ಗೃಹನಿರ್ಮಾಣವು ನೀವಂದುಕೊಂಡಷ್ಟು ಸರಳವಾಗಿ ಇರದು. ತಂದೆ ತಾಯಿಯರ ಸೇವೆಯ ಬಗ್ಗೆ ಅಭಿಮಾನ ಬರುವುದು. ಉತ್ತಮ ದಿನದ ನಿರೀಕ್ಷೆಯಲ್ಲಿ ಇರುವ ನಿಮಗೆ ಬೇಸರವಾದೀತು. ಇತರರ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸುವಿರಿ. ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು. ನಿಮ್ಮ ಮಾತನ್ನು ಕೇಳಲು ಆಸಕ್ತಿ ಇರದು.
ತುಲಾ ರಾಶಿ:
ನಿಮ್ಮ ಆಲೋಚನೆಯು ವಾಸ್ತವಕ್ಕಿಂತ ಭಿನ್ನವಾಗಿ ಕಾಣಿಸುತ್ತದೆ. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಋಜು ಮಾರ್ಗದಲ್ಲಿ ಇರುವ ನಿಮಗೆ ದಾರಿತಪ್ಪಿಸುವ ಜನರು ಎದುರಾಗಬಹುದು. ರಾಜಕೀಯದಲ್ಲಿ ನಿಮಗೆ ಆಸಕ್ತಿಯು ಇದ್ದರೂ ಪ್ರವೇಶಕ್ಕೆ ಮಾರ್ಗವನ್ನು ಹುಡುಕುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು.
ವೃಶ್ಚಿಕ ರಾಶಿ:
ಇಂದಿನ ನಿಮ್ಮ ಮಾತಿನಿಂದ ದ್ವೇಷವನ್ನು ಸಾಧಿಸಬಹುದು. ನಿಮಗೆ ನಕಾರಾತ್ಮಕ ಹಣೆಪಟ್ಟಿಯು ನಿಮಗೆ ಬೀಳಬಹುದು, ಎಚ್ಚರವಿರಲಿ. ಬಹಳ ದಿನಗಳಿಂದ ಉಳಿದಿರುವ ಕಾರ್ಯವು ಪೂರ್ಣವಾಗಿದೆ. ಗೊಂದಲದಲ್ಲಿರುವವರಿಗೆ ಸುಖಾಂತ್ಯ ಸಿಗುವುದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಅತಿಯಾದ ನಿರೀಕ್ಷೆಯು ಇಂದು ನಿಮ್ಮ ಮನಸ್ಸನ್ನು ಕೆಡಿಸಬಹುದು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವಿರಿ.
ಧನು ರಾಶಿ:
ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ದಿನವು ಉತ್ತಮ. ಗೃಹೋಪಯೋಗಿ ವಸ್ತುಗಳನ್ನು ಜಾಣ್ಮೆಯಿಂದ ಮಾರಾಟ ಮಾಡಿದರೆ ನಿಮಗೆ ಲಾಭವಾಗುತ್ತದೆ. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುತ್ತಾರೆ. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಸದೀತು. ನಿಮ್ಮ ಸೋಲನ್ನು ನೀವು ಖಂಡಿತವಾಗಿ ಒಪ್ಪಿಕೊಳ್ಳಲಾರಿರಿ.
ಮಕರ ರಾಶಿ:
ಕಾನೂನಾತ್ಮಕ ಹೋರಾಟದ ತಂತ್ರವನ್ನು ಬದಲಿಸಿ. ನಿಮ್ಮ ಮಾತು ಅಹಂಕಾರದಂತೆ ತೋರಬಹುದು. ವ್ಯಾಪಾರದಲ್ಲಿ ಸಾಧಾರಣ ಆದಾಯವಿದ್ದು ನಿಮಗೆ ಸಮಾಧಾನ ಇರದು. ವಾಹನ ಖರೀದಿಯಲ್ಲಿ ಮೋಸವಾಗುವುದು. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಕೆಲಸ ಕೊಡಲಾಗದು. ಒತ್ತಡವು ಅಧಿಕವಿರಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳಿ.
ಕುಂಭ ರಾಶಿ:
ಎಣಿಸಿಕೊಂಡ ಕಾರ್ಯವು ಆಗದೇ ಇರಬಹುದು. ಮಕ್ಕಳಿಗಾಗಿ ಖರ್ಚು ಮಾಡುವುದು ಅನಿವಾರ್ಯತೆ ಬರಬಹುದು. ಪ್ರಾಮಾಣಿಕತೆಗೆ ಯೋಗ್ಯವಾದ ಯಶಸ್ಸನ್ನು ಪಡೆದುಕೊಳ್ಳಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದೆ ನೆಮ್ಮದಿ ಇರುವುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುತ್ತೀರಿ. ಉದ್ಯೋಗವು ನಿಮಗೆ ಸಾಕೆನಿಸಿ ಕೈ ಬಿಡಬಹುದು. ಮಕ್ಕಳ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಯಿತು.
ಮೀನ ರಾಶಿ:
ಕೊಟ್ಟ ಸಾಲವನ್ನು ಹಿಂಪಡೆಯುವ ಅನಿವಾರ್ಯತೆ ಬರಲಿದೆ. ಅದು ನಿಮಗೆ ಬಹಳ ಕಷ್ಟದ ಸಂಗತಿ. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗಬಹುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ನಿಮ್ಮ ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವೈಧೃತಿ, –6ಸ್ತೋದಯ, ಕರಣ :2 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:34, ಯಮಗಂಡ ಕಾಲ 12:31 – 14:02, ಗುಳಿಕ ಕಾಲ 15:33 – 17:04
-ಲೋಹಿತ ಹೆಬ್ಬಾರ್-8762924271 (ಯಾವ ಅಪ್ಲಿಕೇಶನ್ ಮಾತ್ರ)