ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯೋಗ್ಯತೆಯನ್ನು ಪರರ ಪರಿಚಯಿಸುವರು

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯೋಗ್ಯತೆಯನ್ನು ಪರರ ಪರಿಚಯಿಸುವರು


ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯೋಗ್ಯತೆಯನ್ನು ಪರಿಚಯಿಸುವರು

ಮೇಷ ರಾಶಿ:

ಕೆಲವು ಜನರು ಸವಾಲಿನ ಕಾರ್ಯಗಳನ್ನು ನಿಭಾಯಿಸಲು ತೊಂದರೆಗಳನ್ನು ಎದುರಿಸಬಹುದು. ಇಂದು ನೀವು ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುವಿರಿ. ನಿಮಗೆ ಇಂದಿನ ಒಳ್ಳೆಯ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಬೇಕು. ಹೂಡಿಕೆಯತ್ತ ಗಮನಹರಿಸುವುದು ಸದ್ದಕ್ಕೆ ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ರೂಪವು ನಿಮ್ಮ ಕೆಲವು ಕಾರ್ಯಕ್ಕೆ ಅಡ್ಡಿಯಾದೀತು.

ವೃಷಭ ರಾಶಿ :

ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಗೊಂದಲಕ್ಕೆ ಒಳಗಾಗಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಅನಧಿಕೃತ ಜನರ ಸಂಪರ್ಕದಿಂದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆಪತ್ತಿಗಾಗಿ ಇಟ್ಟ ಸಂಪತ್ತಿನ ವಿನಿಯೋಗ ಮಾಡುವ ಸ್ಥಿತಿಯು ಬರುವುದು. ಏಕಾಂಗಿಯಾಗಿ ಇರುವುದನ್ನು ಇಷ್ಟಪಡುವುದು ಅನಿವಾರ್ಯ ವಸ್ತು. ನಿಮ್ಮನ್ನು ಪ್ರಕಟಿಸಿಕೊಳ್ಳುವುದು ಇಷ್ಟವಿದ್ದರೂ ಸಾಧಿಸಲಾಗದು.

ಮಿಥುನ ರಾಶಿ:

ಇಂದು ಹಣಕಾಸಿನಿಂದ ಆಗುವ ಯಾವುದೇ ಅಪಾಯವನ್ನು ತೆಗೆದುಕೊಳ್ಳುವ ಮನಸ್ಸು ಮಾಡುವುದು ಬೇಡ. ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಮಕ್ಕಳ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಅಪರಿಚಿತರು ನಿಮ್ಮನ್ನು ಪರಿಚಯ ಮಾಡಿಕೊಳ್ಳಬಹುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ಥಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಸಂಗಾತಿಯ ನಡುವಿನ ಸಂಬಂಧವು ದುರ್ಬಲವಾಗಲಿದ್ದು, ಗಟ್ಟಿಯಾಗಲು ತಂತ್ರವನ್ನು ಬಳಸುತ್ತಾರೆ.

ಕರ್ಕಾಟಕ ರಾಶಿ:

ನೀವು ಕುಟುಂಬದ ಜೊತೆ ಎಲ್ಲೋ ಪ್ರಯಾಣಿಸಲು ತೀರ್ಮಾನಿಸಿ ಹೊರಡುವಿರಿ. ಇಂದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ನಿಮ್ಮಿಂದ ಕೆಲಸವಾಗಲು ನಿಮ್ಮನ್ನು ಹೊಗಳಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ. ಎಲ್ಲವೂ ನಿಮ್ಮದಾಗಬೇಕು ಎಂಬ ಬಯಕೆ ಇರುವುದು. ವಿವಾಹಿತರ ವಿವಾಹಕ್ಕೆ ಶುಭ ವಾರ್ತೆಯು ಇರಲಿದೆ.

ಸಿಂಹ ರಾಶಿ:

ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ನಿಮಗೆ ಸಂತೋಷ ಸಂತೋಷ. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಯಾವುದೋ ಕಾರಣಕ್ಕೆ ಕೊಟ್ಟ ಹಣ ವಾಪಾಸಾಗದು. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲತೆಯು ನಿಮಗೆ ಆಹಾರವಾಗಿದೆ. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ.

ಕನ್ಯಾ ರಾಶಿ:

ನಿಮ್ಮ ಲಾಭವನ್ನು ಗ್ರಾಹಕರು ಹೆಚ್ಚು ಮಾಡಿಕೊಳ್ಳುತ್ತಾರೆ. ಸಂತೋಷದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಜೀವನದಲ್ಲಿ ಉತ್ಸಾಹ ತುಂಬಿಕೊಳ್ಳುವ ವ್ಯಕ್ತಿಯನ್ನು ಹುಡುಕಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ದೂರದ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನವಾಗಿದೆ.

ತುಲಾ ರಾಶಿ:

ಇಂದು ಸರಿಯಾಗಿ ಯೋಚಿಸದೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯಮಿಗಳು ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆಯ ಭಾವವನ್ನು ಪ್ರಕಟಿಸಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಿದೆ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುತ್ತಾರೆ. ಕೆಲವರನ್ನು ನೀವು ನಂಬಲಾಗಿದೆ.

ವೃಶ್ಚಿಕ ರಾಶಿ:

ಪರರ ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಗಣ್ಯರ ಜೊತೆ ಮಾತುಕತೆ ನಡೆಸುತ್ತಾರೆ. ದೂರವಾಣಿ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು.

ಧನು ರಾಶಿ:

ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ಒಂದ ಕಡೆ ನಿಂತಲ್ಲಿ ನಿಲ್ಲಲಾಗದು. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ನಿಮ್ಮ ಮಾತನ್ನು ನಿಯಂತ್ರಿಸಿ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗುವುದು. ಹಣಕಾಸಿಗೆ ಸಂಬಂಧಿಸಿದ ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ.

ಮಕರ ರಾಶಿ:

ಉದ್ಯೋಗಸ್ಥರು ಸವಾಲಿನ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯಿರಿ. ಚಂಚಲ ಮನಸ್ಸನ್ನು ನಿಯಂತ್ರಿಸಲು ಕಷ್ಟವಾಯಿತು. ಈ ಕೆಲಸದಲ್ಲಿ ಹಿನ್ನಡೆಯಾಗುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.’ ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ನಿಮ್ಮ ಕುಟುಂಬವನ್ನು ನಿರ್ಲಕ್ಷಿಸಿದಂತೆ ಕಾಣುವುದು. ಕುರುಡಾಗಿ ಯಾವುದನ್ನೂ ನಂಬುವುದು ಬೇಡ.

ಕುಂಭ ರಾಶಿ:

ಇಂದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವಿರಲಿದೆ. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ಖರ್ಚುಗಳನ್ನು ನಿಯಂತ್ರಿಸಿ. ವ್ಯವಹಾರದಲ್ಲಿ ವಿಶ್ವಾಸದಿಂದ ಇರಿ. ಭಯಪಡುವ ಅವಶ್ಯಕತೆ ಇರುವುದಿಲ್ಲ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಮಾಡಿ. ಅನ್ಯ ಆಲೋಚನೆಯಲ್ಲಿ ದಿನವನ್ನು ಕಳೆಯಿರಿ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು.

ಮೀನ ರಾಶಿ:

ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಶತ್ರುಗಳನ್ನು ನಿಮ್ಮ ಪ್ರಭಾವವನ್ನು ಬಳಸಿ ನಿಗ್ರಹ ಮಾಡುವಿರಿ ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡುವುದು ಕಷ್ಟವಾಯಿತು. ಸರ್ಕಾರದ ಕೆಲಸ ವಿಳಂಬವಾದರೆ ನಿಮಗೆ ಬೇಸರವಾಗುವುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪಚಮೀ, ನಿತ್ಯ ಸೂರ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಸೂರ್ಯೋದಯ – 2, 60, 6, 6 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:59 – 09:29, ಯಮಗಂಡ ಕಾಲ 11:00 – 12:31, ಗುಳಿಕ ಕಾಲ 14:02 – 15:33

-ಲೋಹಿತ ಹೆಬ್ಬಾರ್-8762924271 (ಯಾವ ಅಪ್ಲಿಕೇಶನ್ ಮಾತ್ರ)



Source link

Leave a Reply

Your email address will not be published. Required fields are marked *