Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು

Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು


Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು

ಇಂದಿನ ಪಂಚಾಂಗ:

ಶಾಲಿವಾಹನ ಶಕೆ 1448 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಸಂವರ್ಧನೆ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯ ಸೂರ್ಯನಕ್ಷತ್ರ : ಧನಿಷ್ಠಾ, ಯೋಗ : ಶಿವ, ಕರಣ – ಗರಜ – 20, ಸೂರ್ಯೋದಯ – 20, ಸೂರ್ಯ 6, 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:03 – 09:33, ಯಮಗಂಡ ಕಾಲ 11:03 – 12:33, ಗುಳಿಕ ಕಾಲ 14:03 – 15:33

ಮೇಷ ರಾಶಿ: ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಬರಹಗಳು ನಿಮ್ಮ ಆದಾಯಕ್ಕೆ ಹೆಚ್ಚಿನ ಒತ್ತನ್ನು ಕೊಡುವುದು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಮಾಣೀಕರಿಸಿ ನೋಡು ಎಂದು ಪರಿಶೀಲಿಸಿದರು ಕಾರ್ಯ ಪ್ರವೃತ್ತರಾಗಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಯಾವುದನ್ನು ಖಂಡಿಸುವಾಗಲೂ ಅದರ ಪೂರ್ಣ ಮಾಹಿತಿ ಇರಲಿ. ಸ್ನೇಹಿತರ ಸಹವಾಸ ಅಧಿಕವಾಗುವುದು. ಮಾತಿನಲ್ಲಿ ಲವಲವಿಕೆ ಇರುವುದು.

ವೃಷಭ ರಾಶಿ: ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನದ ಖರೀದಿಸುವ ಆಸೆಯು ಪ್ರಬಲವಾಗಿದೆ. ನಯವಂಚಕತನವು ನಿಮಗೆ ಪ್ರಿಯವಾಗಬಹುದು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ದುಂದುವೆಚ್ಚದಿಂದ ಬೇಸರ. ಮಕ್ಕಳ ಜೊತೆ ಸಂತೋಷದ ಕ್ಷಣವು ಇರಲಿದೆ. ಶ್ರದ್ಧೆಯಿಂದ ಯಾವುದನ್ನೂ ಇಂದು ಮಾಡಲಾರಿರಿ.

ಮಿಥುನ ರಾಶಿ: ವ್ಯಾಪಾರದ ಬದಲಾವಣೆಗಳನ್ನು ಅಧ್ಯಯನ ಮಾಡಿ ಬದಲಾಯಿಸಿ. ಚುರುಕುತನವು ನಿಮಗೆ ಸಾಧ್ಯವಾಗಿಲ್ಲ. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ನೆರೆಯವರು ನಿಮ್ಮ ವ್ಯವಹಾರದಲ್ಲಿ ಪ್ರವೇಶಿಸಬಹುದು. ನಿಮ್ಮದೇ ಆದ ಕುಟುಂಬದಲ್ಲಿ ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು.

ಕರ್ಕಾಟಕ ರಾಶಿ: ಆದಾಯದ ಗೌಪ್ಯತೆ ಕಾಪಾಡಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸರವಾದುದು ಎಂಬ ಭಾವವು ಬರಬಹುದು. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಅಲ್ಪ ಆದಾಯವನ್ನು ಹೆಚ್ಚು ಮಾಡಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳು ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರುವವು.

ಸಿಂಹ ರಾಶಿ: ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂತಾನವು ನಿಮ್ಮ ಖುಷಿಯನ್ನು ಹೆಚ್ಚಿಸುವುದು. ಮಕ್ಕಳಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಮಾಡಿದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗುತ್ತದೆ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ಬಳಸಿಕೊಳ್ಳಿ.

ಕನ್ಯಾ ರಾಶಿ: ಕಡಿಮೆ ಖರ್ಚು ಮತ್ತು ಆದಾಯದ ಉದ್ಯಮಕ್ಕೆ ಆದ್ಯತೆ ಕೊಡುವಿರಿ. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯುವ ತಂತ್ರವನ್ನು ಬಳಸುತ್ತಾರೆ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವದಲ್ಲಿರುವುದು. ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಿದೆ. ಇಂದಿನ ಕೆಲಸಗಳು ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವೈದ್ಯಕೀಯ ಕ್ಷೇತ್ರದ ಕಲಿಕೆ ಬಹಳ ಕಷ್ಟವೆನಿಸುತ್ತದೆ. ಕೆಲವು ವಿಚಾರದಲ್ಲಿ ಮರೆವೂ ನಿಮಗೆ ವರದಂತೆ ಅನ್ನಿಸುವುದು.

ತುಲಾ ರಾಶಿ: ಹಿರಿಯರ ಮಾತಿನಿಂದ ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಸಂಗಾತಿಯ ಮಾತನ್ನು ನಡೆಸಲಾಗದು. ಹಣಕ್ಕಾಗಿ ಕಿರಿಕಿರಗಳು ಅಧಿಕವಾಗಿ ತೋರುವುದು. ಮಕ್ಕಳಿಗೆ ಯಾವುದಾದರೂ ಉತ್ತಮ ಹವ್ಯಾಸದ ರುಚಿ ಬರುವಂತೆ ಮಾಡುವಿರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ.

ವೃಶ್ಚಿಕ ರಾಶಿ: ಮಾತುಗಳನ್ನು ಬದಲಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಅಂತರಂಗವನ್ನು ಅಷ್ಟು ಗೌಪ್ಯವಾಗಿ ಇಡುವುದು ಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇತರರ ನೋವಿಗಿ ಪ್ರತಿಕ್ರಿಯಿಸುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ಅಸಹಜ ವ್ಯವಹಾರದಿಂದ ಹಿಂದೆ ಸರಿಯುವುದು ಉತ್ತಮ.

ಧನು ರಾಶಿ: ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ಪೂರ್ಣ ಕಾರ್ಯಕ್ರಮ. ಬಹಳ ದಿನಗಳ ಅನಂತರ ಸಹೋದರರ ಭೇಟಿಯಾಗಲಿದೆ, ಸಂತೋಷವು ಇಮ್ಮಡಿಸುವುದು. ರಾಜಕೀಯ ಪ್ರೇರಿತ ಕಾರ್ಯದಲ್ಲಿ ಸಿಕ್ಕಿಬಿದ್ದಿರಿ. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಭೂಮಿಯ ವಿವಾದ ಹೊಸದಾಗಿ ಆರಂಭವಾಗಲಿದೆ. ತೀರ್ಥ ಕ್ಷೇತ್ರದಲ್ಲಿ ವಾಸಮಾಡುವ ಸಂದರ್ಭ ಬರಬಹುದು. ಪುಣ್ಯವೆಂದು ಭಾವಿಸಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯವಾದ ವಿವಾದಗಳಿಂದ ದೂರವಿರಿ.

ಮಕರ ರಾಶಿ: ಮಾತು ಎಷ್ಟು ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಸಿಗಲಿರುವ ಸ್ಥಿರಾಸ್ತಿಯು ಕೈತಪ್ಪಿಹೋಗಬಹುದು. ನಿಮ್ಮ ಸಮಸ್ಯೆಗಳಿಗೆ ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ.

ಕುಂಭ ರಾಶಿ: ಕಲಿಕೆಯಲ್ಲಿ ಚುರುಕುತನವನ್ನು ಪಡೆದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸರಾಗುವಿರಿ. ಗುರಿಯ ಸಾಧನೆಗೆ ಸಾರ್ವಜನಿಕ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಹೊಸ ವಿಚಾರಗಳ ಕಡೆ ಹೊರಳುವ ಆಲೋಚನೆ ಮನಸ್ಸಿಗೆ ಬರಲಿದೆ. ನಿಮ್ಮಿಂದ ಆಗದೇ ಇರುವ ಕಾರ್ಯ ಎಂದು ಯಾವುದೂ ಇರದು. ಆದರೆ ಕೆಲವಕ್ಕೆ ಸಮಯ ಹೆಚ್ಚು ಬೇಕು ಅಷ್ಟೇ.

ಮೀನ ರಾಶಿ: ನಿಮ್ಮ ದೈನಂದಿನ ಕಾರ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ.

ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *