ಬೆಂಗಳೂರು, ನಿತ್ಯ ಪಂಚಾಗ, ಅಕ್ಟೋಬರ್ 29: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಶೂಲಿ, ಕರಣ : ಬವ, ೫ ಸೂರ್ಯೋದಯ – ಆಂ ೦, ೫. pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:30 – 14:58,, ಗುಳಿಕ ಕಾಲ 09:08 – 10:36, ಯಮಗಂಡ ಕಾಲ 06:14 – 07:41.
ಮೇಷ ರಾಶಿ: ಸೋತರೂ ಬೇಸರಿಸಿಕೊಳ್ಳದ ನಿಮಗೆ ಛೇಡಿಸುವುದು ಕೋಪತರಿಸುವುದು. ಇತರರ ಹಿತ ಚಿಂತನೆಯನ್ನು ಕಡಿಮೆ ಮಾಡಿ, ನಿಮ್ಮ ಬಗ್ಗೆ ಯೋಚಿಸಿ. ಕೆಲವು ಸಂಗತಿಗಳ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಬೇಸರವಾಗುವುದು. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ನೀವು ಬಯಸದೇ ಇದ್ದರೂ ಆಪತ್ತಿಗೆ ಸಹಾಯ ದೊರೆಯುತ್ತದೆ. ನಿಮ್ಮ ರಕ್ಷಣೆಗಾಗಿ ಹಿಡಿದ ಆಯುಧ ನಿಮಗೆ ಉಪಯೋಗಕ್ಕೆ ಬಾರದೇ ವ್ಯರ್ಥ ವಸ್ತು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಯೋಗ್ಯವಾದ ರೀತಿಯಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಕಡೆಗಣಿಸಿದ್ದು ನಿಮಗೆ ಪ್ರೇರಣೆಯಾಗಬಹುದು. ಕೆಲಸಗಳನ್ನು ಮುಂದುವರಿಸುವುದು ನಿಮ್ಮ ನಿರಾಸಕ್ತಿಯನ್ನು ತೋರಿಸುವುದು. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮಾಡಿ ಮುಗಿಸಿ.
ವೃಷಭ ರಾಶಿ: ಅತಿಮಾನುಷರಂತೆ ನಿಮ್ಮ ವರ್ತನೆ ಇರಲಿದೆ, ಎಲ್ಲರ ಕಂಗಣ್ಣಿಗೆ ಗುರಿಯಾಗುವಿರಿ. ಯಾರ ಮಾತನ್ನೂ ಒಮ್ಮೆಲೇ ನಂಬಲಾರಿರಿ. ನಿಮಲ್ಲಿ ಎಲ್ಲವೂ ಕೊರತೆ ಎಂಬಂತೆ ಇದೆ. ಹಣವನ್ನುಯೋ ಎಲ್ಲಿ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಹೇಳಬೇಕಾದುದನ್ನು ಹೇಳುವ ಕ್ರಮದಲ್ಲಿ ಹೇಳಿ. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ತಪ್ಪಾದ ಕರೆಯಿಂದ ನೀವು ತೊಂದರೆಯನ್ನು ಎದುರಿಸಬೇಕಾಗುವುದು. ಉದ್ಯೋಗದಲ್ಲಿ ಉಂಟಾದ ಸಣ್ಣ ಅಡ್ಡಿಯನ್ನೇ ದೊಡ್ಡದಾಗಿ ಬಿಂಬಿಸುವಿರಿ. ನಿಮ್ಮವರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಕಾರ್ಯಗಳು ಮಂದಗತಿಯಲ್ಲಿ ಇರಲಿದೆ. ವಿಚಾರ ಮಥನವು ಕಲಹವಾಗಿ ಮಾರ್ಪಡುವುದು. ಮೊದಲೇ ತೀರ್ಮಾನವಾದ ನಿಮ್ಮ ಪ್ರಯಾಣವು ಮುಂದೆ ಹೋಗಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆಯಿದೆ.
ಮಿಥುನ ರಾಶಿ: ನಿಮ್ಮ ಮೂರನೆಯವರು ಪ್ರವೇಶ ಒಳಗೆ ಪಡೆಯುವರು. ಎಂತಹದ್ದೇ ನೋವಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಸೂಕ್ತ. ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರದ ಸಂಗತಿ. ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸುತ್ತದೆ. ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಧನಸಹಾಯವನ್ನು ಮಾಡುವುದು ಅನಿವಾರ್ಯವಾದೀತು. ನಿಮ್ಮದಲ್ಲದ್ದನ್ನು ಪ್ರಾಮಾಣಿಕವಾಗಿ ಬಿಟ್ಟುಬಿಡಿ. ನಿಮ್ಮ ಮಾತು ಬೇರೆಯದೇ ಅರ್ಥವನ್ನು ಕೊಟ್ಟು, ಸಂಬಂಧವನ್ನು ಕೆಡಿಸುವುದು. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಭೇಟಿಯಾಗುವವರು. ದೊಡ್ಡ ಅಪಾಯದಿಂದ ನಿಮಗೆ ರಕ್ಷಣೆಯಾಗುವುದು. ಸಂಗಾತಿಯ ಇಂಗಿತವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟವಾಗುವುದು. ಎಂದು ಆಡಿದ ಮಾತಿಗೆ ಇಂದು ಪಶ್ಚಾತ್ತಾಪಪಡಬೇಕಾದೀತು.’ ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕು ಎಂದು ಅನ್ನಿಸುವುದು. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ.
ಕರ್ಕಾಟಕ ರಾಶಿ: ಮನೆಯಲ್ಲಿ ಗದ್ದಲದ ಸಂದರ್ಭ ಇರಲಿದೆ ಅನ್ಯರಿಂದ ದೂರು ಬರಲಿದೆ. ನಿಮಗೆ ಅಗತ್ಯ ವಸ್ತುಗಳ ಬಗ್ಗೆ ಅತಿಯಾದ ಆಯ್ಕೆ ಇರಲಿದೆ. ಆಗದವರು ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಇಂದಿನ ಎಲ್ಲ ಪರಿಸ್ಥಿತಿಯೂ ನಿಮ್ಮ ಪರವಾಗಿ ಇರುತ್ತದೆ ಎನ್ನಲಾಗದು. ಬುದ್ಧಿವಂತರೆಂಬಂತೆ ತೋರಿಸಿಕೊಳ್ಳಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ಉದ್ಯೋಗದಲ್ಲಿ ವಿರಾಮವನ್ನು ತೆಗೆದುಕೊಳ್ಳಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದೇ ವಾದಿಸುವಿರಿ. ತಾಯಿಯ ಜೊತೆ ವಾಗ್ವಾದ ನಡೆಸಿದರು. ನಿಮ್ಮವರನ್ನು ನೀವು ತಪ್ಪಿದ್ದರೂ ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ತೆಗೆಯಬಹುದು. ನಿಮ್ಮ ಲಾಭಕ್ಕೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಾರ್ಯಕ್ಕೆ ಸಮಯ ಮಿತಿ ಇರುವುದು. ಕೆಲಸವನ್ನು ಮುಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು.
ಸಿಂಹ ರಾಶಿ: ಉದ್ಯಮದಲ್ಲಿ ನೀವು ಗ್ರಾಹಕಸ್ನೇಹಿ ವಾತಾವರಣ ನಿರ್ಮಾಣವನ್ನು ಮಾಡುವಿರಿ. ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುತ್ತಾರೆ. ನೀವು ಪ್ರೀತಿಸುವವರ ಮಾತನ್ನು ತೆಗದುಹಾಕದಿರಿ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ಅನಧಿಕೃತ ವೆಚ್ಚವನ್ನು ಮುಂದೂಡುವುದು ಉತ್ತಮ. ಅಪರಿಚಿತರ ವಿದ್ಯಾಭ್ಯಾಸಕ್ಕೆ ನೀವು ಸಹಾಯ ಮಾಡುತ್ತೀರಿ. ವೃತ್ತಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವಿರಿ. ಒತ್ತಾಯದಿಂದ ಯಾರ ಸ್ನೇಹವನ್ನೂ ಬಯಸುವುದು ಬೇಡ. ಒಳ್ಳೆಯ ಕುಲದ ಸಂಗಾತಿಯನ್ನು ಪಡೆಯಿರಿ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕ ಯೋಜನೆಯನ್ನು ತಯಾರಿಸಿ. ಒಂದೇ ಸ್ನೇಹವನ್ನು ಬಹಳ ಕಾಲ ಇಟ್ಟುಕೊಳ್ಳಲಾರಿರಿ.
ಕನ್ಯಾ ರಾಶಿ: ಅಧಿಕಾರಿಗಳು ಆಮಿಷದಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಮೇಲೆ ಕಳ್ಳತನದ ಆರೋಪ ಅಕಸ್ಮಾತ್ ಆಗಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಟ್ಟು ಪಶ್ಚಾತ್ತಾಪಪಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಏಳ್ಗೆಗೆ ಘಾಸಿ ನೀಡಬಹುದು. ಹೊಗಳಿಕೆಯ ಮೂಲಕ ನೀವು ಕೆಲಸವನ್ನು ಮಾಡಿಕೊಳ್ಳುವಿರಿ. ವಿವಾಹದ ಬಗ್ಗೆ ಗೊಂದಲ ಇರಲಿದೆ. ನಿಮ್ಮ ಗೌಪ್ಯ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ಮನೆಯ ಪರಿಸರವು ಏಕಾಗ್ರತೆಯನ್ನು ಹಾಳುಮಾಡಬಹುದು. ಬೌದ್ಧಿಕ ಸ್ಪರ್ಧೆಗೆ ಮಾರ್ಗದರ್ಶನವನ್ನು ಪಡೆಯಿರಿ. ಆದಾಯಕ್ಕೆ ತಕ್ಕಹಾಗೆ ಖರ್ಚಿಗೂ ಸಿದ್ಧವಾಗುವುದು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಉತ್ತಮ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಕಾಣಿಸಿಕೊಳ್ಳುತ್ತವೆ.
ತುಲಾ ರಾಶಿ: ಗಡುವನ್ನು ಮೀರಿದ ಕಾರ್ಯವನ್ನು ಮುಗಿಸಲು ಪ್ರಯತ್ನಿಸುವಿರಿನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸಿ. ನಿಮ್ಮ ಗೌರವಕ್ಕೆ ತೊಂದರೆಯಾಗಬಹುದು. ತುರ್ತು ಹಣಕಾಸಿನ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ನಿಂದನೆಯ ಮಾತುಗಳು ಕೇಳಿಬರಬಹುದು. ದುರ್ವಿಚಾರಗಳನ್ನು ಯೋಚಿಸಬಾರದು ಎಂದುಕೊಂಡರೂ ಅದೇ ಬಂದು ನಿಮ್ಮನ್ನು ಹಿಂಸಿಸಬಹುದು.’ ಬರಹಗಾರರಿಗೆ ಹಿನ್ನಡೆಯಾಗಲಿದೆ. ವ್ಯಾಪಾರಿಗಳಿಗೆ ಅಪೇಕ್ಷಿತ ಲಾಭ ಸಿಗುವ ಸಾಧ್ಯತೆ ಕಡಿಮೆ. ಇಂದು ಬಹಳ ದಿನಗಳಿಂದ ಉಳಿಸಿಕೊಂಡ ಸ್ವಂತ ಕಾರ್ಯವನ್ನು ನೀವು ಮಾಡಿ ಮುಗಿಸಿರಿ. ಸಮಾಜದ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುತ್ತಾರೆ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು, ಗೌರವಕ್ಕೂ ತೊಂದರೆ. ವಾತಾವರಣದ ವ್ಯತ್ಯಾಸದ ಕಾರಣ ನೀವು ಉದ್ವೇಗದಲ್ಲಿ ಇರುವಂತೆ ಕಾಣಿಸುತ್ತದೆ.
ವೃಶ್ಚಿಕ ರಾಶಿ: ಶಿಕ್ಷಣ ವಿಭಾಗದಿಂದ ನೀವು ಏನಾದರೂ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದುವಿರಿ. ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ನೇಹಿತರಿಗಾಗಿ ನಿಮ್ಮ ಕಡೆಯಿಂದ ಸಾಲವನ್ನು ಕೊಡಿಸಿದ್ದು ಈಗ ನಿಮ್ಮ ತಲೆಗೆ ಅದು ಸುತ್ತಿಕೊಳ್ಳಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯಿರಿ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನಮಾನಗಳು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಇಷ್ಟಪಡುವುದಿಲ್ಲ. ಅಗ್ನಿಯ ಭೀತಿಯು ನಿಮ್ಮನ್ನು ಕಾಡಬಹುದು. ಎಲ್ಲ ವಿಚಾರಗಳಿಗೆ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವುದು ಯೋಗ್ಯವಾಗದು. ನಿಮ್ಮ ಪ್ರಪಂಚಕ್ಕೆ ಬಹಳ ಆಯ್ಕೆಯುಳ್ಳವರನ್ನು ಮಾತ್ರ ಬಿಟ್ಟುಕೊಳ್ಳುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯಲೇ ಬೇಕು. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಮಗೆ ತೊಂದರೆಗಳು ಬರಬಹುದು. ಸಂಗಾತಿಯ ನಡುವೆ ನಂಬಿಕೆಯನ್ನು ನಿರ್ಮಿಸಲು ಇಂದು ಒಳ್ಳೆಯ ಅವಕಾಶ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.
ಧನು ರಾಶಿ: ಹಿರಿಯರಿಗೆ ಕೆಲಸದ ಮೂಲಕ ಗೌರವ ತೋರಿಸುವಿರಿ. ಇಂದು ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವುದು. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಇಂದು ಸಮಾಧಾನದಿಂದ ಯೋಚಿಸುವುದು ನಿಮಗೆ ಬಾರದು. ಬಂಧುಗಳ ಮನೆಗೆ ಹೋಗಬೇಕು. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುತ್ತಾರೆ. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ಎಷ್ಟು ನೀವು ತಿಂದರೂ ಗುಟ್ಟನ್ನು ಬಿಟ್ಟುಕೊಡಲಾರಿ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಬಹುದು. ಸಹೋದರರ ನಡುವೆ ಸಹಬಾಳ್ವೆ ಇರಲಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುವುದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಿಮ್ಮ ಆತ್ಮೀಯರೊಂದಿಗೆ ಪ್ರವಾಸಕ್ಕೆ ಹೋಗುವ ಖುಷಿ ಇರುವುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು.
ಮಕರ ರಾಶಿ; ನಿಮ್ಮ ಆಲೋಚನೆ ನಡತೆಗಳು ಬಹಳ ನಿಗೂಢವಾಗಿರುವುದು. ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಸಂಪರ್ಕಿಸಿ ಅಮೂಲ್ಯವಾದ ಸಲಹೆಗಳನ್ನು ಪಡೆಯಬಹುದು. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇತರರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಸ್ವಂತ ವಾಹನದಲ್ಲಿ ದೂರ ಓಡಾಟವನ್ನು ಇಂದು ಮಾಡುವುದು ಬೇಡ. ಇಂದು ಸಂಗಾತಿಯ ಆರೋಗ್ಯವು ಕೆಡಲಿದೆ ನಿಮಗೆ ವೃತ್ತಿಗಾಗಿ ತಿರುಗಾಟವನ್ನೂ ಮಾಡಬೇಕಾಗಿ ಬರಬಹುದು. ಸರ್ಕಾರಿ ಕೆಲಸದಲ್ಲಿ ತೊಡಕಾಗಬಹುದು. ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಿರಿ. ಉನ್ನತ ಅಧ್ಯಯನಕ್ಕೆ ನೀವು ಬೇರೆ ಕಡೆಗೆ ಹೋಗುವ ಸ್ಥಿತಿಯು ಬರಬಹುದು. ನಿಮ್ಮ ಪ್ರಣಯ ಜೀವನದಲ್ಲಿ ಆಕರ್ಷಣೆಯನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಸಣ್ಣವರ ವಿಚಾರದಲ್ಲಿ ಕಾಳಜಿ ಇರಲಿ.
ಕುಂಭ ರಾಶಿ; ಅಸೆಪಟ್ಟ ಕೆಲಸಕ್ಕೆ ಇಂದು ತಿಲಾಂಜಲಿ ಸಿಗಬಹುದು. ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಖಂಡಿತ ಇರಬೇಕಾಗುವುದು. ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಮ್ಮ ಹೆಗಲೇರಬಹುದು. ಹಿರಿಯ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸುತ್ತಾರೆ. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ಶತ್ರುಗಳನ್ನು ನೀವು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ನೀವೇ ನಿಮ್ಮ ಮೇಲಿನ ಭಾವನೆಯನ್ನು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳುವಿರಿ. ನಿಮ್ಮ ಮಾತು ಹಾಸ್ಯದಿಂದ ಗಂಭೀರರೂಪಕ್ಕೆ ಹೋಗುವುದು. ಅತಿಥಿಸತ್ಕಾರವನ್ನು ನೀವು ಮಾಡುತ್ತೀರಿ. ದೈವರಾಧನೆಗೆ ಸ್ವಲ್ಪ ಸಮಯ ಕೊಡುವಿರಿ. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ಜಗಳವಾಡಬೇಕೆಂದು ನಿಮಗೆ ಅನ್ನಿಸುವುದು. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದಸ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ.
ಮೀನ ರಾಶಿ: ಎಲ್ಲ ಕಡೆಯಿಂದ ಸಿಗುವ ಪ್ರತಿಕ್ರಿಯೆಯು ಅದೃಷ್ಟವೇ ಫಲಿಸಿದಂತಹ ಅನುಭವ. ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಗೆಲ್ಲಬೇಕು ಎನ್ನುವ ಉತ್ಕಟ ಆಯ್ಕೆ ಇರಲಿದೆ. ಸೋತರೂ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮತ್ತು ಕುಟುಂಬದ ನಡುವಿನ ಸಮತೋಲನವನ್ನು ಸಾಧಿಸುವುದು ಸುಲಭ. ಇತ್ತೀಚೆಗೆ ಭೇಟಿಯಾಗದ ಕುಟುಂಬ ಸದಸ್ಯರಾಗಬಹುದು. ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೆ ನಿಲ್ಲಬೇಕಾಗಬಹುದು. ಭಡ್ತಿ ಸಿಗುತ್ತಿಗಲ್ಲ ಎಂಬ ಬೇಸರ ನಿಮ್ಮೊಳಗಿರಲಿದೆ. ಕುಟುಂಬದ ಜೊತೆ ನಿಮ್ಮ ಭವಿಷ್ಯವನ್ನು ಹಂಚಿಕೊಳ್ಳುವಿರಿ. ಅದೃಷ್ಟವನ್ನು ಕುಳಿತುಕೊಳ್ಳುವುದು ಪ್ರಯೋಜನವಾಗದು. ಸಾಲಗಾರರ ಉಪಟಳ ಹೆಚ್ಚಾಗಲಿದೆ. ಬೇಡವಾದ ಸಂಗತಿಗಳನ್ನು ಯಾರಾದರೂ ನಿಮ್ಮ ತಲೆಗೆ ಹಾಕುವರು. ಮನೋಗತವನ್ನು ಹೇಳಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ನಿಮ್ಮ ಇಚ್ಛೆಯಂತೆಯೇ ಕೆಲಸಗಳು ನಡೆಯಬಹುದು. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುತ್ತದೆ.
ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)