Headlines

Horoscope Today 01 January : ಇಂದು ಈ ರಾಶಿಯವರ ಸಾಮರ್ಥ್ಯವನ್ನು ಊಹಿಸಲಾಗದು

Horoscope Today 01 January : ಇಂದು ಈ ರಾಶಿಯವರ ಸಾಮರ್ಥ್ಯವನ್ನು ಊಹಿಸಲಾಗದು


Horoscope Today 01 January : ಇಂದು ಈ ರಾಶಿಯವರ ಸಾಮರ್ಥ್ಯವನ್ನು ಊಹಿಸಲಾಗದು

2025 ಮುಕ್ತಾಯವಾಗುತ್ತಿದೆ. 2026 ರ ಹೊಸ ವರ್ಷದ ಉದಯವಾಗಿದೆ. ಕಾಲವು ಪರಿವರ್ತನೆಯನ್ನು ಹೇಳಿದ್ದು, ಮನುಕುಲವೂ ಪರಿವರ್ತನೆಯ ಕಡೆಗೆ ಹೆಜ್ಜೆ ಹಾಕಬೇಕು. ದ್ವೇಷ ಅಸೂಯೆ, ಸಿಟ್ಟು, ಅಶಾಂತಿ, ಎಲ್ಲವನ್ನೂ ಬಿಟ್ಟು ನೆಮ್ಮದಿಯ ಬದುಕನ್ನು ಹೊಸ ವರ್ಷದ ಆರಂಭದಲ್ಲಿ ಸಂಕಲ್ಪ ಮಾಡಬೇಕು. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ:

ಶ್ರಮಕ್ಕೆ ಅಂತಿಮ ಫಲ ಸಿಗುತ್ತದೆ. ಆಪ್ತರ ಸಹಾನುಭೂತಿ ದೊರೆಯುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಸಮಾಧಾನ. ನಿಮ್ಮನ್ನೇ ನೀವು ಪರೀಕ್ಷೆಗೆ ಒಡ್ಡಿಕೊಳ್ಳಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುತ್ತದೆ. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಕುಟುಂಬ ಮತ್ತು ಮನೆಕೆಲಸ ಜವಾಬ್ದಾರಿಯಿಂದ ಒತ್ತಡ. ಗೃಹನಿರ್ಮಾಣದಲ್ಲಿ ಸಣ್ಣ ವಿಘ್ನಗಳು. ಅತಿಯಾಸೆ ಮನಸ್ಸಿಗೆ ಕಳವಳ ತರಬಹುದು. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು. ತಾಯಿಯ ಜೊತೆ ಜಗಳ ಮಾಡಿಕೊಂಡು ಬೇಸರಗೊಳ್ಳುವಿರಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯುವ ಕಡೆ ಕೆಲಸ ಮಾಡುವಿರಿ.

ವೃಷಭ ರಾಶಿ:

ಗೃಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆಕೆಲಸ ಸುಧಾರಣೆ ಕಾಣಿಸಿಕೊಂಡಿದೆ. ಶ್ರಮಕ್ಕೆ ಫಲ ದೊರೆಯುತ್ತದೆ. ಅತಿಯಾಸೆ ತೊರೆದು ಯೋಜನೆ ಮಾಡಿದರೆ ಒತ್ತಡ ಕಡಿಮೆ. ನಿಮ್ಮದಾದ ಕಾರ್ಯಗಳೇ ಬಹಳ ಇರುವಾಗ ಬೇರೆ ಕಡೆ ನಿಮ್ಮ ಗಮನ ಹೋಗದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸಿತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ನ್ಯಾಯಾಲಯದ ವಿಷಯದಲ್ಲಿ ಅನುಕೂಲ. ದೇಹಾಯಾಸ ಇದ್ದರೂ ಅನಾರೋಗ್ಯ ದೂರ. ಉದ್ವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ. ಸ್ನೇಹಿತರ ಆಯ್ಕೆಯನ್ನು ಪೂರೈಸಲು ನೀವು ಸಮರ್ಥರಾಗುವಿರಿ.

ಮಿಥುನ ರಾಶಿ:

ಅತಿಯಾಸೆಯಿಂದ ನಿರ್ಧಾರದಲ್ಲಿ ಗೊಂದಲ ಹೆಚ್ಚು. ಆಪ್ತರ ವಿಯೋಗ ಭಾವ ಕಾಡುವುದು. ನ್ಯಾಯಾಲಯದ ವಿಚಾರದಲ್ಲಿ ಬಲ ಸಿಗುತ್ತದೆ. ಮನಸ್ತಾಪವನ್ನು ಹೇಗಾದರೂ ಮಾಡಿ ಹೊರಹಾಕಬೇಕು ಎಂದುಕೊಂಡಿರುವಿರಿ. ನಿಮ್ಮ ವಸ್ತುಗಳು ಕಾಣಿಸದೇ ನೀವು ಆತಂಕಪಡುವಿರಿ. ಸಿಕ್ಕ ಅವಕಾಶವನ್ನು ನೀವೇ ಬಿಟ್ಟುಕೊಂಡು ನಿಮ್ಮನ್ನೇ ಹಳಿದುಕೊಳ್ಳುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದಾಗಿದೆ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ಗೃಹನಿರ್ಮಾಣದಲ್ಲಿ ವಿಳಂಬ ಮತ್ತು ವಿಘ್ನಗಳು ಒತ್ತಡ ಹೆಚ್ಚಿಸುತ್ತವೆ. ಶ್ರಮಕ್ಕೆ ನಿಧಾನ ಫಲ. ಆರೋಗ್ಯದಲ್ಲಿ ಎಚ್ಚರ ಅಗತ್ಯ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಕಾರ್ಯವನ್ನು ಮಾತ್ರ ಮಾಡಿ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು.

ಕರ್ಕಾಟಕ ರಾಶಿ:

ಶ್ರಮಕ್ಕೆ ಗೌರವ ಮತ್ತು ಪ್ರಶಂಸೆ ದೊರೆಯುತ್ತದೆ. ಗೃಹಸಂಬಂಧಿತ ಕೆಲಸಗಳಲ್ಲಿ ಮುನ್ನಡೆ. ಮನೆಕೆಲಸ ಇದ್ದರೂ ಮನಸ್ಸು ಹಗುರವಾಗಿರುವುದು. ಹಿರಿಯರ ಸಮ್ಮುಖದಲ್ಲಿ ನೂತನ ಗೃಹನಿರ್ಮಾಣವನ್ನು ಮಾಡಿರಿ. ಅಧಿಕಾರಿಗಳು ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಗಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಹಳೆಯ ಸ್ನೇಹವನ್ನು ಮರಳಿ ಪಡೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಪ್ರಾರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಅತಿಯಾಸೆ ಆರ್ಥಿಕ ಒತ್ತಡ ತರಬಹುದು. ನ್ಯಾಯಾಲಯದ ವಿಚಾರದಲ್ಲಿ ಜಯದ ಸಾಧ್ಯತೆ. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಂಡುಬರುತ್ತವೆ. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ.

ಸಿಂಹ ರಾಶಿ:

ಗೃಹನಿರ್ಮಾಣದಲ್ಲಿ ತಾಂತ್ರಿಕ ವಿಘ್ನದಿಂದ ಆತಂಕ. ಆಪ್ತರಿಂದ ದೂರವಿರುವ ಭಾವ. ನ್ಯಾಯಾಲಯದ ವಿಚಾರದಲ್ಲಿ ವಿಳಂಬ. ಶ್ರಮಕ್ಕೆ ಫಲ ತಡವಾಗಿ ಸಿಗುವ ದಿನ. ಅಪಹಾಸ್ಯಕ್ಕೆ ಆಸ್ಪದ ಕೊಡಲಾರಿರಿ. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಅರಿವಿಲ್ಲದೇ ಎಲ್ಲರೆದುರು ಅಸಭ್ಯ ವರ್ತನೆಯನ್ನು ನೀವು ತೋರಿಸುತ್ತೀರಿ. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿರುವಾಗ ದೈವಜ್ಞರಿಂದ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು. ನಂಬಿ ಬಂದವರನ್ನು ಬರಿಗೈಯಲ್ಲಿ ಕಳುಹಿಸಲಾರಿರಿ. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ಅತಿಯಾದ ಶ್ರಮದಿಂದ ದೇಹಾಯಾಸ. ಮನೆಕೆಲಸ ಮತ್ತು ಜವಾಬ್ದಾರಿ ಒತ್ತಡ ತರುತ್ತವೆ. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು. ನಿಮ್ಮ ಶ್ರೇಯಸ್ಸಿನಲ್ಲಿ ಬಂಧುಗಳ ಪಾತ್ರವು ಇರುವುದು.

ಕನ್ಯಾ ರಾಶಿ:

ಆಪ್ತರ ಬೆಂಬಲದಿಂದ ಮನಸ್ಸಿಗೆ ಧೈರ್ಯ. ಗೃಹನಿರ್ಮಾಣದಲ್ಲಿ ಪ್ರಗತಿ ಕಂಡುಬರುತ್ತದೆ. ಅತಿಯಾಸೆ ನಿಯಂತ್ರಿಸಿದರೆ ಒತ್ತಡ ತಪ್ಪುತ್ತದೆ. ವಿಶ್ವಾಸವನ್ನು ಗಳಿಸಿದರೆ ನೀವು ವ್ಯವಹಾರದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ವಿದೇಶ ಪ್ರಯಾಣದಿಂದ ಆಯಾಸ ಹೆಚ್ಚು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ಆಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ನ್ಯಾಯಾಲಯದ ವಿಚಾರದಲ್ಲಿ ಸಮಾಧಾನ. ಆರೋಗ್ಯ ಸಾಮಾನ್ಯ, ದೇಹಾಯಾಸ ತಾತ್ಕಾಲಿಕ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗುತ್ತದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದೆ ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು.

ತುಲಾ ರಾಶಿ:

ಅತಿಯಾಸೆ ತಪ್ಪಿಸಿದರೆ ಒತ್ತಡ ಕಡಿಮೆ. ನ್ಯಾಯಾಲಯದ ವಿಷಯದಲ್ಲಿ ಅನುಕೂಲಕರ ಬೆಳವಣಿಗೆ. ದೇಹಾಯಾಸ ಇದ್ದರೂ ಅನಾರೋಗ್ಯ ತೀವ್ರವಾಗದು. ನಿಮ್ಮ ಜಾಣ್ಮೆಯಿಂದ ಭೂಮಿಯ ಕಲಹವನ್ನು ಸರಿಮಾಡಿಕೊಳ್ಳುತ್ತೀರಿ. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇದ್ದಾರೆ. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬಹುದಾಗಿದೆ. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಯೋಜಿತ ಶ್ರಮಕ್ಕೆ ಉತ್ತಮ ಫಲ ಸಿಗುತ್ತದೆ. ಗೃಹನಿರ್ಮಾಣದಲ್ಲಿ ಸಣ್ಣ ತಿದ್ದುಪಡಿ ಅಗತ್ಯ. ಮನೆಕೆಲಸ ವ್ಯವಸ್ಥಿತವಾಗಿರುವ. ಕಲಾವಿದರು ಕೆಲವು ಅವಕಾಶಗಳಿಂದ ವಂಚಿತರಾಗಬಹುದು. ಖರ್ಚಿನ ಬಗ್ಗೆ ಅಂದಾಜಿರಲಿ.’ ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿ:

ಅತಿಯಾಸೆ ನಿಮ್ಮ ಶಾಂತಿಯನ್ನು ಹಾಳುಮಾಡಬಹುದು. ಗೃಹನಿರ್ಮಾಣದಲ್ಲಿ ವಿಳಂಬ ಅಥವಾ ಬಾಹ್ಯ. ಮನೆಕೆಲಸ ಹೆಚ್ಚಾಗಿ ಕಿರಿಕಿರಿ. ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯಿರಿ. ಆಲಸ್ಯದಿಂದ ಏನನ್ನೂ ಮಾಡಲಾಗದು. ಮೇಲಧಿಕಾರಿಗಳ ಮಾತುಗಳಿಂದ ನಿಮಗೆ ಅವಮಾನವಾಗಿದ್ದು ಮುಂದೇನು ಎಂಬುದರ ಬಗ್ಗೆ ನಿಮಗೆ ಚಿಂತೆ ಬರಬಹುದು. ಅಧಿಕ ಲಾಭದ ನಿರೀಕ್ಷೆಯಲ್ಲಿ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಅತಿಯಾದ ಶ್ರಮಕ್ಕೆ ಫಲ ಮಾತ್ರ ಸಿಗಲಿದೆ. ನ್ಯಾಯಾಲಯದ ವಿಚಾರದಲ್ಲಿ ದಾಖಲೆ ಮತ್ತು ಮಾತಿನಲ್ಲಿ ಜಾಗ್ರತೆ ಅಗತ್ಯ. ದೇಹಾಯಾಸ ಮತ್ತು ಒತ್ತಡ ಹೆಚ್ಚಾಗುವ ಸಾಧ್ಯತೆ. ನಿಮ್ಮನ್ನು ಅತಿಥಿಗಳಿಗೆ ಆಹ್ವಾನಿಸಬಹುದು. ನಿಮ್ಮ ಪ್ರೇಮಸಂಬಂಧವು ಸಡಿಲಗೊಳ್ಳಬಹುದು. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸಿತ್ತು.

ಧನು ರಾಶಿ:

ನ್ಯಾಯಾಲಯದ ವಿಚಾರದಲ್ಲಿ ಲಾಭದ ಸೂಚನೆ. ದೇಹಾಯಾಸ ಕಡಿಮೆ, ಆರೋಗ್ಯ ಸ್ಥಿರ. ಅದನ್ನು ಕೆರಳಿಸಲು ಹೋಗುವುದು ಬೇಡ. ಯಾರ ಜೊತೆಯಲ್ಲಿಯೂ ನೀವು ತಯಾರಿಸಿರುವಿರಿ. ಎಲ್ಲರ ಪ್ರಶ್ನೆಗಳನ್ನು ಉತ್ತರವನ್ನೇ ಕೊಡಬೇಕೆಂದಿಲ್ಲ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೆ ಅಡ್ಡಾಡುವಿರಿ. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರ ಸಿಗಬಹುದು. ಗೃಹನಿರ್ಮಾಣ ಅಥವಾ ಮನೆ ಸುಧಾರಣೆಗೆ ಉತ್ತಮ ಸೂಚನೆ. ಶ್ರಮಕ್ಕೆ ಸ್ಪಷ್ಟ ಫಲ ದೊರೆಯುತ್ತದೆ. ಕುಟುಂಬದ ಜವಾಬ್ದಾರಿಯಿಂದ ಒತ್ತಡ ನಿರ್ವಹಣೆ ಸಾಧ್ಯ. ಆಪ್ತರಿಂದ ತಾತ್ಕಾಲಿಕ ದೂರ. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯ ವ್ಯರ್ಥವಾಗುವುದು. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ.

ಮಕರ ರಾಶಿ:

ಗೃಹಸಂಬಂಧಿತ ವಿಷಯಗಳಲ್ಲಿ ಗೊಂದಲ. ಅತಿಯಾಸೆ ಹಣವ್ಯಯಕ್ಕೆ ಪೂರಕ. ದೇಹಾಯಾಸ ಮತ್ತು ನಿದ್ರಾಭಂಗದಿಂದ ಕಿರಿಕಿರಿ ಹೆಚ್ಚಾಗುತ್ತದೆ. ಅವಕಾಶಗಳನ್ನು ನೀವು ಪರೀಕ್ಷಿಸಿ ಒಪ್ಪಿಕೊಳ್ಳಿ. ಹೊಸ ಮನೆಯ ಖರೀದಿಗೆ ಆಪ್ತರಿಂದ ಹಣವನ್ನು ಪಡೆದುಕೊಳ್ಳಬಹುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಗಮನಿಸಿದ ಕೆಲವು ಸಂದರ್ಭಗಳು ಇಂದು ಬರಬಹುದು. ಗಣ್ಯರ ಭೇಟಿಯನ್ನು ಮಾಡಿರಿ. ಉದ್ಯೋಗಕ್ಕೆ ಸಂಬಂಧಿಸಿದ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟು ಇರುವುದು ಕಷ್ಟವಾಗುವುದು. ಮನೆಕೆಲಸ ಒತ್ತಡ ತರುತ್ತದೆ. ಶ್ರಮಕ್ಕೆ ತಕ್ಷಣ ಫಲ ಸಿಗದು. ನ್ಯಾಯಾಲಯದ ವಿಚಾರ ಮುಂದೂಡಿಕೆ. ಮಾನಸಿಕ ಸಮತೋಲನ ಮುಖ್ಯ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು. ವಾಹನದಲ್ಲಿ ಓಡಾಟವನ್ನು ನೀವು ನಿಲ್ಲಿಸಬೇಕಾಗಬಹುದು.

ಕುಂಭ ರಾಶಿ:

ಶ್ರಮಕ್ಕೆ ತಕ್ಕ ಫಲ ಸಿಗುವ ಸೂಚನೆ ನಿಮ್ಮ ಮನಸ್ಸಿಗೆ ಬರುವುದು. ಗೃಹನಿರ್ಮಾಣ ನಿಧಾನವಾಗಿ ಸಾಗುತ್ತದೆ. ಮನೆ ಕೆಲಸಗಳಲ್ಲಿ ಜವಾಬ್ದಾರಿ. ಬಹಳ ಕೆಲಸಗಳಿದ್ದರೂ ನೀವು ಮರೆತಿರುವಿರಿ. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವು ಆಡಿಕೊಂಡರು. ಅಮೂಲ್ಯ ವಸ್ತುವನ್ನು ಖರೀದಿಸಿ ಅದನ್ನು ಉಳಿಸಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ಆಪ್ತರ ವಿಯೋಗ ಅಥವಾ ದೂರವು ಮನಸ್ಸಿಗೆ ನೋವು. ಅತಿಯಾದ ನಿರೀಕ್ಷೆ ಒತ್ತಡ ತಂದೀತು. ನ್ಯಾಯಾಲಯದ ವಿಚಾರದಲ್ಲಿ ಅನುಕೂಲಕರ ತಿರುವು ಕಾಣಿಸುವುದು. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.

ಮೀನ ರಾಶಿ:

ಮಾನಸಿಕ ಒತ್ತಡ ಮತ್ತು ದೇಹಾಯಾಸ ಹೆಚ್ಚಾಗುವ ದಿನ. ಮನೆಕೆಲಸ ಜಾಸ್ತಿ ಆಗಿ ಶಕ್ತಿ ಕುಂದಬಹುದು. ಗೃಹನಿರ್ಮಾಣದಲ್ಲಿ ಅನಿರೀಕ್ಷಿತ ವಿಘ್ನಗಳು ಎದುರಾಗುತ್ತವೆ. ಮಾಧ್ಯಮದಲ್ಲಿ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಲು ಇಷ್ಟಪಡುವುದಿಲ್ಲ. ಅತಿಯಾಸೆಯ ನಿರ್ಧಾರಗಳನ್ನು ತಪ್ಪಿಸಬಹುದು. ನ್ಯಾಯಾಲಯದ ವಿಚಾರದಲ್ಲಿ ಎಚ್ಚರ ಅಗತ್ಯ. ಶ್ರಮಕ್ಕೆ ಫಲ ತಡವಾಗಿ ಗೊತ್ತಾಗುತ್ತದೆ. ಆಪ್ತರಿಂದ ದೂರಾಗುವಿರಿ. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಸಮಯ ಬೇಕಾಗುವುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.

ಜನವರಿ 01 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಫರ್ಮಾನ್ಸ್ : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಾದಶೀ ನಿತ್ಯ ಸೂರ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, – 6ದ ಕರಣ : ಬಾಲವ, 60 ಕರಣ : ಬಾಲವ, ೬. – 05 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:32 – 15:17, ಯಮಗಂಡ ಕಾಲ 06:50 – 08:15, ಗುಳಿಕ ಕಾಲ 09:39 – 11:03

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *