Headlines

Horoscope Today 22 January : ಇಂದು ಈ ರಾಶಿಯವರು ಮಾತನ್ನು ಉಳಿಸಿಕೊಳ್ಳುವರು

Horoscope Today 22 January : ಇಂದು ಈ ರಾಶಿಯವರು ಮಾತನ್ನು ಉಳಿಸಿಕೊಳ್ಳುವರು


Horoscope Today 22 January : ಇಂದು ಈ ರಾಶಿಯವರು ಮಾತನ್ನು ಉಳಿಸಿಕೊಳ್ಳುವರು

ಮೇಷ ರಾಶಿ:

ಬೆಂಕಿಯ ಸಹವಾಸ ಮಾಡಿಯೂ ಅವಘಡ ಆಗುವುದಿಲ್ಲ ಎನ್ನಲಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ಇಂದು ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುತ್ತಾರೆ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದರು. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮೃದುವಾದ ಮಾತು ಕೃತಕತೆಯಿಂದ ತೋರಿಸಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಎಟು ಬಿಂಬಿಸುವರು.

ವೃಷಭ ರಾಶಿ:

ಇಂದು ನಿಮ್ಮ ಕೆಲಸವು ನೀವಂದುಕೊಂಡಷ್ಟು ಸುಲಭವಾಗಿ ಇರದು. ಸಾಮಾನ್ಯರಂತೆ ಕಾಣುವ ನಿಮಗೆ ಯಾವುದೇ ಆಡಂಬರ ಇಷ್ಟವಾಗದು. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕುಟುಂಬದ ಕೆಲವು ಸನ್ನಿವೇಶಗಳು ನಿಮಗೆ ಇಷ್ಟವಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದೆ, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಹೃದಯ ಕಲ್ಲಾದಷ್ಟೂ ವ್ಯಕ್ತಿತ್ವಗಳು ದೂರಾಗುವರು. ನಿಮ್ಮ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೆ ವಾಗ್ವಾದವನ್ನು ಮಾಡಲು ಹೋಗಿ ಸಮಯ ಹಾಗೂ ಇತರರ ಸಮಯವನ್ನು ಹಾಳು ಮಾಡುವಿರಿ.

ಮಿಥುನ ರಾಶಿ:

ನೀವು ಇಂದು ಯಾವುದನ್ನೂ ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕಾರ್ಯಗಳನ್ನು ಸಲೀಸಾಗಿ ಮಾಡುವ ಅನುಭವ ನಿಮ್ಮದಾಗಲಿದೆ. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಗೆಳೆಯನನ್ನು ಆಪ್ತನನ್ನಾಗಿ ಮಾಡಿಕೊಳ್ಳುವಿರಿ. ಅಪೇಕ್ಷಿಸಿದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಯಾವುದನ್ನೇ ಆದರೂ ಉದ್ವೇಗದಿಂದ ನಿರಾಕರಿಸುವುದು ಬೇಡ.

ಕರ್ಕಾಟಕ ರಾಶಿ:

ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ನಿರಂತರ ಕೆಲಸದಿಂದ ಸಮಾಧಾನವು ಬೇಕಾಗುವುದು. ನಿಮ್ಮ ಕೆಲಸವನ್ನು ಪ್ರಸ್ತುತ ಮಾಡುವಲ್ಲಿ ಸೋಲುವ ಸಾಧ್ಯತೆಯಿದೆ. ಉದ್ವೇಗಕ್ಕೆ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಸೌಂದರ್ಯಕ್ಕೆ ಆಕರ್ಷಿತರಾಗಿ ಮನಸೋಲಬಹುದು. ಕೃತಜ್ಞತೆಯಿಂದ ನಿಮ್ಮವರನ್ನು ಸ್ಮರಿಸುವಿರಿ, ಗೌರವಿಸುವಿರಿ. ವರ್ತನೆಯಲ್ಲಿ ಆಗುವ ಬದಲಾವಣೆಯನ್ನು ಯಾರೂ ನೋಡಲಾರರು. ಎಲ್ಲದರ ಮೇಲೂ ನಂಬಿಕೆಯನ್ನು ಕಳೆದುಕೊಳ್ಳುವಿರಿ.

ಸಿಂಹ ರಾಶಿ:

ನಿಮ್ಮ ಗಮನವನ್ನು ಯಾರಾದರೂ ತಿಳಿದುಕೊಳ್ಳಬಹುದು. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೀರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲ ಒಳ್ಳೆಯದಕ್ಕೂ ನೀವೇ ತಂದೆ ಎನ್ನುವ ಭಾವ ನಿಮ್ಮಲ್ಲಿ ಮೂಡಬಹುದು. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಣ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆ ಸಿಗಲಿದೆ. ಮಕ್ಕಳ ಸ್ವಭಾವವು ಇಷ್ಟವಾಗದೇ ಹೋಗುವುದು.

ಕನ್ಯಾ ರಾಶಿ:

ಹೊಸ ಉದ್ಯೋಗವನ್ನು ಪ್ರಾರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ. ನಿಮ್ಮ ಮಕ್ಕಳ ಬಾಂಧವ್ಯದಿಂದ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಸಾಲವನ್ನು ಪಡೆಯದೇ ಕೆಲವು ಋಣದಿಂದ ಮುಕ್ತರಾಗಲು ಕೆಲಸ ಮಾಡಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯನ್ನು ಅನುಭವಿಸುವಿರಿ. ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿ ಇರದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಾರೆ ಎಂದು ಅನ್ನಬಹುದು.

ತುಲಾ ರಾಶಿ:

ಇಂದು ವ್ಯಾಪಾರದ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡಿದ್ದರೂ ಕೆಲವರ ಅಭಿಪ್ರಾಯ ಹಾಗೂ ಸಲಹೆಯನ್ನು ಮುಕ್ತವಾಗಿ ಪಡೆಯಿರಿ. ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಸಂಗಾತಿಯ ಮನವೊಲಿಸುವುದು ನಿಮ್ಮ ಚಾಣಾಕ್ಷತೆಗೆ ಬಿಟ್ಟಿದ್ದು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಸಮಾಜಮುಖೀ ಕಾರ್ಯಗಳನ್ನು ನಿರಪೇಕ್ಷೆಯಿಂದ ಮಾಡುವಿರಿ. ಕಾನೂನು ವ್ಯವಹಾರದಲ್ಲಿ ಗಲಿಬಿಲಿಯಾಗಲಿದೆ. ತಾಳ್ಮೆ ಕಡಿಮೆ ಆದಂತೆ ತೋರುವುದು.

ವೃಶ್ಚಿಕ ರಾಶಿ:

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ನೇಹಿತರ ಮಾತಿನಿಂದ ನಿಮಗೆ ನೋವಾಗಬಹುದು. ಹಣಕಾಸಿನ ವಿಚಾರಕ್ಕೆ ತಂದೆಯ ನಡುವೆ ವಾಗ್ವಾದವು ಆಗಬಹುದು. ಯಾವ ಕ್ಷೇತ್ರದಲ್ಲಿದ್ದರೂ ಶತ್ರುಗಳ ಪಾತ್ರವಿಲ್ಲ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ಆರ್ಥಿಕ ಒಪ್ಪಂದಕ್ಕೆ ಒಪ್ಪಿಗೆ ಕೊಡುವಿರಿ. ನಿರ್ಲಕ್ಷ್ಯ ಮಾಡದೇ ಒಂದು ಗಮನ ಬೇಕು. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಮತ್ತೆ ಬರುವುದು ಕಷ್ಟವಾಯಿತು.

ಧನು ರಾಶಿ:

ಹಣಕಾಸಿನ ಭಯವು ನಿರೀಕ್ಷೆಗಿಂತ ಕಡಿಮೆಯಾಗಬಹುದು. ಇಂದು ಕೆಲವು ಪರಿಸ್ಥಿತಿಯನ್ನು ಎದುರಿಸಲು ಸಂಕೋಚವಾಗಬಹುದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಸೂಕ್ತ. ಪೂರ್ವಿಕರ ಆಸ್ತಿಗೆ ಮನಸ್ತಾಪವು ಬರಬಹುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ದಿನವನ್ನು ಏನನ್ತ್ಯ ಮಾಡಿಕೊಳ್ಳುವುದು ಬೇಡ. ಸ್ವತಂತ್ರ ಆಲೋಚನೆಯಿಂದ ಹೊಸ ದೃಷ್ಟಿ ಸಿಗಲಿದೆ.

ಮಕರ ರಾಶಿ:

ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ನಿಮ್ಮ ಯೋಜನೆಗಳು ಕ್ರಮಶುದ್ಧವೂ ತರ್ಕಸಿದ್ಧವೂ ನಿಯಮಬದ್ಧವೂ ಆಗಿರುತ್ತದೆ. ಆ ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಎಲ್ಲವನ್ನೂ ಹೇಳದೆಯೂ ಅರ್ಥ ಮಾಡಿಕೊಳ್ಳುವ ಕಾರ್ಯವನ್ನು ಮಾಡುವಿರಿ. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು.

ಕುಂಭ ರಾಶಿ:

ನೀವು ಉದ್ಯೋಗವನ್ನು ಯಶಸ್ವಿಯಾಗಿ ಮಾಡಬಹುದು. ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಿ. ಸ್ವಂತ ನೆಲೆಯ ಸ್ಥಾಪನೆಯ ಬಗ್ಗೆ ಹೆಚ್ಚು ಯೋಚನೆ ಯೋಜನೆ ಅಗತ್ಯ. ಶತ್ರುಬಾಧೆಯಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗುವುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ಇಂದು ಮನೆಯಲ್ಲಿ ಸ್ನೇಹ ಕೂಟವು ಏರ್ಪಡುವುದು. ಪರರ ಸಂತೋಷದಲ್ಲಿ ನೀವು ಭಾಗವಹಿಸುವಿರಿ. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಿ. ಕಚೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ.

ಮೀನ ರಾಶಿ:

ಭೂಮಿಯ ವ್ಯವಹಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ವ್ಯಾಪಾರ ವಹಿವಾಟುಗಳಿಗೆ ಆಪ್ತರನ್ನೇ ಯೋಜಿಸಿಕೊಳ್ಳುವುದು ಉತ್ತಮ. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ನೌಕರರಿಗೆ ಇಂದು ಸಂತೋಷವನ್ನು ಕೊಡುವಿರಿ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುತ್ತಾರೆ. ಅತಿಯಾದ ಭೋಜನದಿಂದ ಕಷ್ಟವಾದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನು ನೀಡಬಹುದು.

ಜನವರಿ 22, 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೇರಿಯನ್, 6 ಕರಣ : 4. – 17 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14-51 – 15:27, ಯಮಗಂಡ ಕಾಲ 06:54 – 08:20, ಗುಳಿಕ ಕಾಲ 09:45 – 11:11

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *