Headlines

Horoscope Today 30 January: ಇಂದು ಈ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಕಾಡಲಿದೆ

Horoscope Today 30 January: ಇಂದು ಈ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಕಾಡಲಿದೆ


ಮೇಷ ರಾಶಿ:

ಕಳೆದುಕೊಂಡ ಸಂಪತ್ತನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಹಾಯವನ್ನು ಪಡೆದವರು ನಿಮ್ಮನ್ನು ಮರೆಯಬಹುದು. ಒಮ್ಮೆಲೆ ಹಲವಾರು ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ನಿಮ್ಮ ಪ್ರೀತಿಗೆ ವಂಚನೆಯಾಗುವ ಸಾಧ್ಯತೆಯಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ದುರಭ್ಯಾಸಗಳ ಕಡೆ ಗಮನಹೋಗುವ ಸಾಧ್ಯತೆಯಿದೆ.’ ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು.

ವೃಷಭ ರಾಶಿ:

ಆರ್ಥಿಕವಾಗಿ ಸಬಲರೆಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಆಸ್ತಿಯ ವಿಚಾರವಾಗಿ ಕುಟುಂಬದಲ್ಲಿ ಮಾತುಕತೆ ನಡೆಯಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ದೊಡ್ಡ ವ್ಯಕ್ತಿತ್ವದ ಬಗ್ಗೆ ನಿಮಗೆ ಅರಿವಿರದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವ ಆಸ್ಪತ್ರೆಯಲ್ಲಿ ಪರೀಕ್ಷೆ. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ.

ಮಿಥುನ ರಾಶಿ:

ಸಮರ್ಥರ ಜೊತೆ ವಾಗ್ವಾದ ನಡೆಸುವಿರಿ. ವೃತ್ತಿಯಲ್ಲಿ ಸುಲಭದ ಕಾರ್ಯವನ್ನು ನೀವು ಆರಿಸಿಕೊಳ್ಳಿ. ಆತ್ಮವಿಶ್ವಾಸದ ಕೊರೆತೆಯು ಕಾಣಿಸುವುದು. ಮಾತನ್ನು ಅಧಿಕವಾಗಿ ಆಡಿ ಇತರರಿಗೆ ಬೇಸರವನ್ನು ತರಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನ ಮುಖ್ಯವಾಗಿರಲಿ. ವಿವಾಹ ಸಂಬಂಧಕ್ಕೆ ನಿಮ್ಮ ಪೂರ್ಣ ಸಹಮತ ಇರದು. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ.

ಕರ್ಕಾಟಕ ರಾಶಿ:

ಭೇದಭಾವವನ್ನು ಮರೆತು ಅಲ್ಪಕಾಲವಾದರು ಬಂಧುಗಳ ಜೊತೆ ಇರಬೇಕಾದೀತು. ಹಠದಿಂದ ಏನನ್ನೂ ಸಾಧಿಸಲಾಗದು ಎಂಬುದು ನಿಮಗೇ ಮನವರಿಕೆಯಾಗಲಿದೆ. ಉದ್ಯೋಗಮಿತ್ರರು ನಿಮ್ಮ ಕಾರ್ಯಗಳಿಗೆ ಸಹಕಾರ ನೀಡುವರು. ಶತ್ರುಗಳು ಸಹಿಸಲಾಗದೇ ನಿಮ್ಮ ಮೇಲೆ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು ಬೇಡ. ಎಲ್ಲ ಕಡೆ ನೀವೇ ಕಾಣಿಸಿಕೊಳ್ಳಬೇಕು ಎಂಬ ಧೋರಣೆ ಕಾಣಿಸುವುದು.

ಸಿಂಹ ರಾಶಿ:

ಪರರ ಬಗ್ಗೆ ಅನುಕಂಪ ಉಂಟಾಗುವುದು. ಮಾನಸಿಕ ಸ್ಥೈರ್ಯದಿಂದ ಎಲ್ಲ ಕೆಲಸ ಮಾಡಿಕೊಳ್ಳುವಿರಿ. ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಂಭವವಿದೆ. ಸದ್ಯೋ ಭವಿಷ್ಯಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಎದುರಾಳಿಗಳು ತಯಾರಾಗುವ ಸಾಧ್ಯತೆ ಇದೆ. ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು.

ಕನ್ಯಾ ರಾಶಿ:

ಆರೋಗ್ಯದ ರಕ್ಷಣೆಗೆ ಉಳಿತಾಯದ ಬಗ್ಗೆ ಗಮನ ಕೊಡುವಿರಿ. ಅತಿಯಾದ ಆಡಂಬರವು ನಿಮಗೇ ಮುಜುಗರವನ್ನು ತಂದೀತು. ಹಿತಶತ್ರುಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ಧೈರ್ಯವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಯೋಚಿಸಿ.

ತುಲಾ ರಾಶಿ:

ನಿಮ್ಮ ಒತ್ತಡದ ಸ್ಥಿತಿಯಲ್ಲಿ ಯಾರಾದರೂ ಜೊತೆಗೆ ಬರುವರು. ಆದರೆ ಅದರ ದುರುಪಯೋಗ ಮಾಡಿಕೊಳ್ಳಬಹುದು. ವೃತ್ತಿಯಲ್ಲಿ ಪರಿಣಿತಿಯನ್ನು ಸಾಧಿಸಿಕೊಳ್ಳಿ. ಸಹೋದ್ಯೋಗಿಗಳಿಂದ ಒತ್ತಡವು ಬರಬಹುದು. ವಿವಾಹದ ಮಾತುಕತೆಗೆ ಹಿರಿಯರನ್ನು ಮುಂದಿಟ್ಟುಕೊಳ್ಳಬೇಕು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷ ಸಂಭ್ರಮ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆಯಿಂದ ಇರಲಿ.

ವೃಶ್ಚಿಕ ರಾಶಿ:

ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಸಹಜ. ದೊಡ್ಡ ಉದ್ದೇಶಕ್ಕೆ ಅದನ್ನು ಗೌಣ ಮಾಡಿಕೊಂಡರೆ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ. ಹೂಡಿಕೆಯಿಂದ ಲಾಭವು ಸಿಗುವ ನಿರೀಕ್ಷೆಯಲ್ಲಿ ಇರುತ್ತದೆ. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಮಕ್ಕಳ ಭವಿಷ್ಯವನ್ನು ರೂಪಿಸುವ ಯೋಜನೆ ಮಾಡಬೇಕು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ.

ಧನು ರಾಶಿ:

ಯಶಸ್ಸಿನ ಅಪೇಕ್ಷೆ ಉಳ್ಳವರು ಮತ್ತೊಬ್ಬರ ಒಳ್ಳೆಯದನ್ನೂ ಕೀರ್ತನೆ ಮಾಡಬೇಕು. ಶೀಘ್ರಫಲಾಪೇಕ್ಷೆಯಿಂದ ಅನಾಹುತವು ಸಂಭವಿಸಿತು. ಗಾಯಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವಿಷಯಕ್ಕೆ ತಕ್ಕಂತೆ ಮಾತಿನಲ್ಲಿ ಏರಿಳಿತವಿರಲಿ. ಆತ್ಮಸಂತೋಷವು ನಿಮ್ಮ ಕಾರ್ಯಕ್ಕೆ ಇನ್ನಷ್ಟು ಉತ್ಸಾಹವನ್ನು ಕೊಡುವುದು. ಯಾರಿಲ್ಲಿರುವ ನ್ಯೂನತೆಯನ್ನು ಸಹಜವಾಗಿ ಸ್ವೀಕರಿಸುವ ಸ್ವಭಾವ ಉತ್ತಮ.

ಮಕರ ರಾಶಿ:

ಗೌಪ್ಯ ವ್ಯವಹಾರದಲ್ಲಿ ತೊಂದರೆ ಕಾಣಿಸುವುದು. ಮಾಡುವ ಕಾರ್ಯದಲ್ಲಿರುವ ಆರಂಭಶೂರತ್ವವು ಕೊನೆಗೆ ಇರಲಾರದು. ಸಿದ್ಧವಸ್ತುಗಳ ಮಾರಾಟದಿಂದ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಕೌಶಲವನ್ನು ಕರಗತ ಮಾಡಿಕೊಳ್ಳುವಿರಿ. ಮನೆಯವರ ಮಕ್ಕಳ ಮೇಲೆ ಗಮನ ಇಡುವುದು ಮುಖ್ಯ. ಪ್ರಚೋದನಕಾರಿ ಮಾತುಗಾರರಿಗೆ ಅವಕಾಶ ಸಿಗಲಿದೆ.

ಕುಂಭ ರಾಶಿ:

ನಿಮ್ಮ ಉದ್ಯೋಗಕ್ಕೆ ಆರ್ಥಿಕ ಬೆಂಬಲ ಸಿಗದಿದ್ದರೂ ನೈತಿಕ ಬೆಂಬಲ ಸಿಗಲಿದೆ. ಇಂದು ನಿಮ್ಮ ಉದ್ಯಮದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಕಷ್ಟವಾಯಿತು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಂದೆಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇ ಹೋಗಬಹುದು. ಉತ್ಪನ್ನಗಾರರಿಗೆ ಸಂತೋಷದ ದಿನವು ಇರುತ್ತದೆ. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ.

ಮೀನ ರಾಶಿ:

ಇಂದು ನಿಮ್ಮ ಸಂಗಾತಿಯಾಗುವವರ ಜೊತೆ ಹೆಚ್ಚು ಸಮಯ ಕಳೆದು, ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾರೆ. ಆಗಿಹೋದ ಕಾಯಗಳನ್ನು ನೆನೆದುಕೊಂಡು ಸಂತೃಪ್ತಿಪಡುವಿರಿ. ನಿಮಗೆ ನೀಡಿದ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಬಾಂಧವ್ಯವನ್ನು ಬೆಸೆಯಲು ಒಳ್ಳೆಯ ಸನ್ನಿವೇಶ ಸೃಷ್ಟಿಯಾಗುವುದು. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು.

ಜನವರಿ 30, 2026ರ ಪಂಚಾಂಗ:

ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಸಂಸರಣ : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಐಂದ್ರ – ಕರಣ – ೦, ಬಾಲವ, ೬. 21 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:12 – 12:38, ಯಮಗಂಡ ಕಾಲ 15:39- 16:56, ಗುಳಿಕ ಕಾಲ 08:20 – 09:46

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *