Horoscope Today 09 January: ಇಂದು ಈ ರಾಶಿಯವರನ್ನು ಯಾವ ವಿಚಾರಕ್ಕೂ ನಿಯಂತ್ರಿಸಲಾಗದು

Horoscope Today 09 January: ಇಂದು ಈ ರಾಶಿಯವರನ್ನು ಯಾವ ವಿಚಾರಕ್ಕೂ ನಿಯಂತ್ರಿಸಲಾಗದು


ಮೇಷ ರಾಶಿ:

ಕಾನೂನಿನ ಕ್ರಮದಲ್ಲಿ ನಿಮ್ಮ ಯೋಜನೆ ಇರಲಿ. ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆ ಪಡದೆ ಬಂದಿದ್ದನ್ನು ಸುಮ್ಮನೆ ಸ್ವೀಕರಿಸಿ. ಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡಿರಿ. ತಪ್ಪನ್ನು ಒಪ್ಪಿಕೊಂಡು ಮೆಚ್ಚುಗೆ ಪಡೆಯಿರಿ.

ವೃಷಭ ರಾಶಿ:

ಸುಂದರವಾದ ಸ್ಥಳಕ್ಕೆ ಹೋಗಬೇಕು. ಅನಾರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳಿ. ನೀವು ಹಾಳುಮಾಡಿಕೊಳ್ಳುತ್ತೀರಿ. ಇಂದಿನ ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ನಿಮಗೆ ಬೇಕಾದುದನ್ನು ಪಡೆಯಲು ನಿಮಗೆ ಆಯ್ಕೆ ಇರುವುದು. ನೀವು ಇಂದು ಅಸಹಜವಾಗಿ ನಡೆದುಕೊಳ್ಳುವಿರಿ. ಆಲಸ್ಯವು ಅಧಿಕವಾಗಿದೆ. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ. ಸುಮ್ಮನೆ ಕಾಲಹರಣವಾಗುವುದು ನಿಮಗೆ ಗೊತ್ತಾಗದು.

ಮಿಥುನ ರಾಶಿ:

ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳಿರಿ. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಒಂದೇ ವಿಚಾರಕ್ಕೆ ಮತ್ತೆ ಬೇಸರಿಸುವ ಅವಶ್ಯಕತೆ ಇಲ್ಲ. ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆ ಹಾಳುಮಾಡೀತು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ವಾಹನ ಸವಾರರು ಜಾಗರೂಕತೆ ಅಗತ್ಯ.

ಕಟರ್ಕಾಟ ರಾಶಿ:

ಸಂತೋಷಕ್ಕಾಗಿ ನೀವು ಕೆಲಸವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಿಸಿತು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುತ್ತಾರೆ. ಹೊಸ ಯಂತ್ರಗಳನ್ನು ಸ್ವೀಕರಿಸಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಬಳಸಿದರೆ ಅದನ್ನು ಬದಲಿಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ಅನಿರೀಕ್ಷಿತವಾಗಿ ಸಿಗಬಹುದು.

ಸಿಂಹ ರಾಶಿ:

ಕೊರತೆಯನ್ನು ನೆನೆದುಕೊಳ್ಳುವುದು ಬೇಡ. ಕಾಲಕ್ಕೆ ಸಿಗಬೇಕಾದುದು ಸಿಗಲಿದೆ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯು ಕಾಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತವನ್ನು ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಸಾಕ್ಷಿಯು ಸಿಗದೇಹೋಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಸಮಸ್ಯೆ ಎದುರಿಸಬೇಕಾದೀತು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಕಛೇರಿಯ ಕೆಲಸವನ್ನು ಹಂಚಿಕೊಂಡು ಮಾಡುವಿರಿ.

ಕನ್ಯಾ ರಾಶಿ:

ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗುವುದು. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಕೆಡಿಸೀತು. ಉದ್ಯೋಗದ ಬದಲಾವಣೆ ಆಗಲಿದೆ ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ನಿಮ್ಮ ನಿಯಮಗಳು ನೀವೇ ಭಂಗ ಮಾಡಿಕೊಳ್ಳುವಿರಿ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆ ತಿಳಿಯಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು.

ತುಲಾ ರಾಶಿ:

ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯವಹಾರದಲ್ಲಿ ಇದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಉದರಬಾಧೆಯಿಂದ ಕಷ್ಟಪಡುವಿರಿ. ದುಡುಕಿ ಮಾತನಾಡಿ ಸತ್ಯವನ್ನು ತಿಳಿಸಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸಿ. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು.

ವೃಶ್ಚಿಕ ರಾಶಿ:

ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ನಿಮ್ಮ ಕೆಲಸಗಳಿಗೆ ಆತ್ಮಸಾಕ್ಷಿಯೇ ಮುಖ್ಯವಾಗಿರುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ನಿಮ್ಮ ಹಿತೈಷಿಗಳಾದರೂ ಅವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ. ಇಂದಿನ ಕಾರ್ಯದಲ್ಲಿ ಮುನ್ನಡೆಯಿರಲಿದ್ದು ನಿಮ್ಮ ಬಗ್ಗೆ ಸದಭಿಪ್ರಾಯವು ಇರುವುದು. ಆಪ್ತರ ಜೊತೆ ಮಾಡಿದ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ವಾಸಸ್ಥಳದ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು.

ಧನು ರಾಶಿ:

ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ಒಳಗಾಗುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ. ಸಾಹಿತ್ಯದಲ್ಲಿ ಆಸಕ್ತಿ ಮೂಡುವ ಸಾಧ್ಯತೆ ಇದೆ. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗಾಗಿ ಜಗಳವಾಡುಬಿರಿ.

ಮಕರ ರಾಶಿ:

ಉದ್ಯೋಗಕ್ಕೆ ಕಿರಿಕಿರಿಯನ್ನು ಅನುಭವಿಸಿದರೂ ಅದನ್ನು ವ್ಯಕ್ತಿ ಮಾಡುವುದು ಬೇಡ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆ ಮಕ್ಕಳು ನಿಮ್ಮ ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ಹಳೆಯ ಮನೆಯ ದುರಸ್ತಿ ಕಾರ್ಯವು ನಡೆಯಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ.

ಕುಂಭ ರಾಶಿ:

ನೆಯ ಬಗ್ಗೆಯೇ ಹೆಚ್ಚು ಯೋಚಿಸಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಛೇರಿಯಲ್ಲಿ ಅನಗತ್ಯವಾಗಿ ಮಾತನಾಡಿ ಸುಮ್ಮನೆ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವುದು ಬೇಡ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಆಪ್ತರ ಮಾತಿನ ಮೇಲೆ ಭರವಸೆ ಇಡಿ. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮೀನ ರಾಶಿ:

ಸಾಲದ ಚಿಂತೆಯಲ್ಲಿ ನೀವು ಎಲ್ಲವನ್ನೂ ಮರೆಯುವಿರಿ. ಇಂದು ನಿಮಗೆ ಮಾತಿನಿಂದ ತೊಂದರೆಗಳು ಬರಬಹುದು. ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುತ್ತೀರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಹಣದ ವಿಚಾರದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಬೇಕು.

ಜನವರಿ 09, 2026ರ ಪಂಚಾಂಗ:

ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಫರ್ಮಾನ್ಸ್ : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ ನಿತ್ಯ ಸೂರ್ಯನಕ್ಷತ್ರ : ಉತ್ತರಾಫಲ್ಗುಣೀ ಯೋಗ : ಶೋಭನ, – ಕರ್ಣ 0, 60 ಕರಣ : 60 ಕರಣ – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-56 – 15:21, ಯಮಗಂಡ ಕಾಲ 06:52 – 08:17, ಗುಳಿಕ ಕಾಲ 09:42 – 11:06

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *