Masala Dosa Recipe: ಮನೆಯಲ್ಲಿ ಸಹಜವಾಗಿ ಅಕ್ಕಿ ಜೊತೆಗೆ ಉದ್ದು, ಮೆಂತೆ ಹಾಕಿ ದೋಸೆ ಮಾಡಿಕೊಂಡು ಬೇಸರ ಆಗಿದ್ಯಾ? ಹೋಟೆಲ್ ಥರ ಗರಿಗರಿ ಮಸಾಲೆ ದೋಸೆ ತಿನ್ನಬೇಕು ಎಂಬ ಆಸೆ ಇದ್ಯಾ? ಹಾಗಿದ್ದರೆ ಈ ರೆಸಿಪಿ ಟ್ರೈ ಮಾಡಿ. ಬಹಳ ಸಿಂಪಲ್ ಆಗಿರುವ ವಿಧಾನ ಇದು.

ಎರಡು ಕಪ್ ಅಕ್ಕಿ, ಅರ್ಧ ಕಪ್ ಕಡಲೆಬೇಳೆ, ಅರ್ಧ ಕಪ್ ಉದ್ದಿನ ಕಾಳು ಹಾಗೂ ಎರಡು ಚಮಚ ಮೆಂತೆ ಹಾಕಿ ನೆನೆಸಬೇಕು. ಜೊತೆಯಲ್ಲಿ ಅರ್ಧ ಕಪ್ ಅವಲಕ್ಕಿ ಹಾಕೋದು ಮರೆಯಬೇಡಿ.

ಮೂರಕ್ಕೂ ಹೆಚ್ಚಿನ ಗಂಟೆಗಳ ಕಾಲ ನೆನೆಸಬೇಕು. ಆಮೇಲೆ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ರುಬ್ಬಿ ಮೂರು ಗಂಟೆಗಳ ಬಳಿಕ ದೋಸೆ ಮಾಡಿದರೆ ಇನ್ನಷ್ಟು ರುಚಿ ಬರುವುದು.

ದೋಸೆ ಅಷ್ಟು ಸುಲಭಕ್ಕೆ ಕ್ರಿಸ್ಪಿ ಬರೋದಿಲ್ಲ ಎಂದು ಹೇಳಲಾಗುತ್ತದೆ. ಕ್ರಿಸ್ಪಿ ಆಗಿ ಮಾಡಲು ಈ ದೋಸೆ ಹಿಟ್ಟಿನ ಜೊತೆ ಅರ್ಧ ಕಪ್ ಅಕ್ಕಿಹಿಟ್ಟು ಹಾಕಬೇಕು. ಆಗ ಗರಿ ಗರಿ ಆಗುವುದು.

ಎಣ್ಣೆ ಜೊತೆಗೆ ಒಣ ಮೆಣಸು, ಹಸಿ ಮೆಣಸು, ಗೋಡಂಬಿ, ಉದ್ದಿನ ಕಾಳು, ಸಾಸಿವೆ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿ. ಆಮೇಲೆ ಬೇಯಿಸಿಕೊಂಡ ಆಲೂಗಡ್ಡೆಯನ್ನು ಇದಕ್ಕೆ ಮಿಶ್ರಣ ಮಾಡಿ. ಜೊತೆಗೆ ಸ್ವಲ್ಪ ನಿಂಬೆಹಣ್ಣು, ಕೊತ್ತುಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.

Source link
ದೋಸೆ ಹಿಟ್ಟಿಗೆ ಅದೊಂದು ಪದಾರ್ಥ ಹಾಕ್ರೀ.. ಹೋಟೆಲ್ ಮಸಾಲೆ ದೋಸೆ ಥರ ಕ್ರಿಸ್ಪಿಯಾಗಿ ರುಚಿ ಬರುತ್ತೆ!